ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ನಡೆಸುತ್ತಿರುವ, 

ನಿರಾಶ್ರಿತರಿಗೆ  ಹಾಗೂ ಅಸಹಾಯಕರಿಗೆ ಹಾಗೂ ಹಳ್ಳಿಗಳಲ್ಲಿರುವ ಹಾಡಿ ಜನಾಂಗಕ್ಕೆ  ಹೊದಿಕೆ  ವಿತರಣಾ ಅಭಿಯಾನದ ಪ್ರಚಾರ ಸಾಮಗ್ರಿಗಳನ್ನುಪೊಲೀಸ್ ಆಯುಕ್ತರಾದ ಡಾ ಚಂದ್ರಗುಪ್ತ  ಗಂಗೋತ್ರಿಯ ವಿಜ್ಞಾನ ಭವನದಲ್ಲಿ  ಬಿಡುಗಡೆಗೊಳಿಸಿ  ಶುಭ ಹಾರೈಸಿದರು,ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಪ್ರಮೀಳಾ ನಾಯ್ಡು  ಮಾತನಾಡಿ ಸಾಂಸ್ಕೃತಿಕ ನಗರಿ ಎಲ್ಲರಿಗೂ ಆಶ್ರಯ ನೀಡಿದೆ, ಕೆಲವರ ಜೀವನದಲ್ಲಿ ವಿಧಿಯಾಟ ಕೆಲವು ಸನ್ನಿವೇಶಗಳು ನೆಮದಿಯಿಲ್ಲದಿದ್ದಾಗ ಕೆಲವರು ತೊಂದೆರೆಯಲ್ಲಿರುತ್ತಾರೆ, ಮಳೆ ಚಳಿ ಎನ್ನದೇ ಬಸ್ ನಿಲ್ದಾಣ, ರೈಲ್ವೇನಿಲ್ದಾಣ ದೇವಸ್ಥಾನ, ಚಿತ್ರಮಂದಿರ ಸರ್ಕಾರಿ ಕಟ್ಟಡಗಳ ಮುಂಭಾಗ ರಾತ್ರಿಹೊತ್ತು ಆಶ್ರಯಕ್ಕಾಗಿ ರಾತ್ರಿ ಕಳೆಯಲು ಮಲಗಿರುತ್ತಾರೆ ಮೈಸೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಿರಾಶ್ರಿತರಿದ್ದು,

ಮಾನವೀಯತೆ ದೃಷ್ಟಿಯಿಂದ ಚಳಿ ಮಳೆಯಿಂದ ನಿರಾಶ್ರಿತರ ರಕ್ಷಣೆ ಸಾರ್ವಜನಿಕರ ಹೊಣೆ ಎನ್ನುವ ಸಂಕಲ್ಪದೊಂದಿಗೆ ಅವರಿರುವ ಜಾಗಕ್ಕೆ ಹೋಗಿ   ಹೊದಿಕೆ ನೀಡುವ ಕೆ.ಎಂಪಿಕೆ ಟ್ರಸ್ಟ್ ಆಯೋಜಿಸಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು,

   
ನಂತರ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಕಳೆದ ವರ್ಷವೂ ಸಹ 600ಜನ ರಸ್ತೆ ಬದಿ ಮಲಗಿರುವ ನಿರಾಶ್ರಿತರು ಹಾಗೂ ಅಸಹಾಯಕರಿಗೆ ರಾತ್ರಿ ವೇಳೆ ರೈಲ್ವೆ ಸ್ಟೇಷನ್ ,ಸಬರ್ ಬಸ್ ಸ್ಟ್ಯಾಂಡ್ ಸಿಟಿಬಸ್ ಸ್ಟ್ಯಾಂಡ್, ಮಾರುಕಟ್ಟೆ ,ಸೇರಿದಂತೆ 15ದಿನಗಳ ಕಾಲ ನಿರಂತರವಾಗಿ ಅಭಿಯಾನವನ್ನು ಯಶಸ್ವಿ  ಗಳಿಸಿದ್ದೇವೆ,ಅದರಂತೆ ಈ ವರ್ಷವೂ ಸಹ ಬರುವ ಸೋಮವಾರ ಡಿಸೆಂಬರ್  20ರಿಂದ  ಜನವರಿ 15ರವರೆಗೂ  ಪ್ರತಿದಿನ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿರುವ ಅಸಹಾಯಕರು ಹಾಗೂ ನಿರಾಶ್ರಿತರಿಗೆ 1000 ಹೊದಿಕೆ  ವಿತರಿಸಲು ಮುಂದಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು ಸಾರ್ವಜನಿಕರು ಕೈಜೋಡಿಸಿ ನೆರವು ನೀಡಲು 9880752727 ಸಂಪರ್ಕಿಸಬಹುದು ಎಂದರು,


 ಇದೇ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಡಾ॥ ಚಂದ್ರಗುಪ್ತ ,ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಪ್ರಮೀಳಾ ನಾಯ್ಡು ,ಮಹಿಳಾ ಆಯೋಗದ ಕಾರ್ಯದರ್ಶಿ ಶೋಭಾ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು  ಬಸವರಾಜು ,ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ಜೋಗಿ ಮಂಜು ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಮುರಳಿ ,ಹಾಗೂ ಇನ್ನಿತರರು ಹಾಜರಿದ್ದರು,