ವಿಶ್ವದಲ್ಲೇ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಧಾನಮಂತ್ರಿಗಳ ವಿರುದ್ಧ ಕಾಂಗ್ರೆಸ್ ಪಕ್ಷವು ಷಡ್ಯಂತ್ರ ನಡೆಸುತ್ತಿರುವುದು ಅತ್ಯಂತ ಖಂಡನೀಯ ಮತ್ತು ಮೋದಿಯವರನ್ನು ಚುನಾವಣೆಯಲ್ಲಿ ಸೋಲಿಸದೇ ವಾಮಮಾರ್ಗಗಳ ಮುಖಾಂತರ ಬೆದರಿಸುವ ಕುತಂತ್ರವನ್ನು ಕಾಂಗ್ರೆಸ್ ಪಕ್ಷವು ಬಿಡಬೇಕು ಎಂದು ಆಗ್ರಹಿಸಿ ನರೇಂದ್ರ ಮೋದಿಯವರಿಗೆ ಇನ್ನೂ ಹೆಚ್ಚಿನ ದೈವ ಪ್ರೇರಣೆ ನೀಡಲಿ ಎಂದು ಎಂ ಜಿ ರಸ್ತೆಯಲ್ಲಿರುವ ಅಗ್ರಹಾರದ ಮಹಾಗಣಪತಿ ದೇವಸ್ಥಾನದಲ್ಲಿಅವರ ಹೆಸರಿನಲ್ಲಿ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ   ವಿಶೇಷವಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು.ನಂತರ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್ ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ವಿವಿಧ ಕಾರ್ಯಕ್ರಮಗಳ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲು ಪಂಜಾಬ್ ನಲ್ಲಿ ಪ್ರಯಾಣಿಸುವಾಗ  ಪಂಜಾಬ್ ಮುಖ್ಯಮಂತ್ರಿ ಸೂಕ್ತ ರೀತಿಯ ಭದ್ರತೆ ನೀಡದೆ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್  ಆರೋಪಿಸಿದ್ದಾರೆ ,


ಅಲ್ಲಿನ ಕಾಂಗ್ರೆಸ್ ಸರ್ಕಾರ ಅತ್ಯಂತ ಅವಿವೇಕಿ ಸರ್ಕಾರ .ಅಲ್ಲಿನ ಪರಿಸ್ಥಿತಿ ಅವಲೋಕಿಸಿದಾಗ ತುಂಬಾ ಭಯಾನಕ ದೃಶ್ಯ ಕಂಡುಬಂದಿದೆ .ಈ ಘಟನೆ ಕೇಂದ್ರ ಸರ್ಕಾರವು ತಕ್ಷಣವೇ ವರದಿ ಪಡೆದು ವೈಫಲ್ಯದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು ನಂತರ ಮಾತನಾಡಿದ ನರೇಂದ್ರ ಮೋದಿ ಅಭಿಮಾನಿ ಬಳಗದ ಸಂಚಾಲಕರಾದ ಜಯಸಿಂಹ ಪ್ರಧಾನಿ ಗೆ ಪಂಜಾಬ್ ಕಾಂಗ್ರೆಸ್ ಸರ್ಕಾರದಿಂದ ಕ್ಷಮಿಸಲಾಗದ ದೊಡ್ಡ ಭದ್ರತೆ ಲೋಪವಾಗಿದೆ .ಇಡೀ ದೇಶದ ಪ್ರಜೆಗಳು ಇಂತಹ ದುರಂತ ಘಟನೆ ಖಂಡಿಸುತ್ತಾರೆ .ಪ್ರಧಾನಿ ಸಾಗುವ ಮಾರ್ಗ ಮಧ್ಯೆ ನಡೆದ ಬೃಹತ್ ಪ್ರತಿಭಟನೆಯಿಂದಾಗಿ ಇಪ್ಪತ್ತು ನಿಮಿಷ ದಾರಿಯಲ್ಲಿ ಪ್ರಧಾನಿ ಕಾಲ ಕಳೆಯುವಂತಾಗಿದ್ದು ವ್ಯವಸ್ಥೆಯ ಲೋಪ .ಇಂತಹ ಸನ್ನಿವೇಶದಲ್ಲಿ ಪ್ರಧಾನಿ ಬದುಕಿ ಬಂದಿರುವುದೇ ಹೆಚ್ಚು

,ದೇಶದಲ್ಲಿ ಹಿಂದೆಂದೂ ನಡೆಯದಂತಹ ಘಟನೆ ಪಂಜಾಬ್ ನ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ .ಇದನ್ನು ಯಾರೂ ಕೂಡ ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ .ಈ ನಾಚಿಕೇಡಿನ ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು ಪಂಜಾಬ್ ಕಾಂಗ್ರೆಸ್ ಸರ್ಕಾರ ಇಡೀ ದೇಶದ ಜನತೆ ಮತ್ತು ಪ್ರಧಾನಿಗೆ ಕ್ಷಮೆ ಕೇಳಬೇಕು ಷಡ್ಯಂತ್ರ ನಡೆಸಿದೆ ವರು ಮತ್ತು ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಒತ್ತಾಯಿಸಿದರು,


ಇದೇ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ನರೇಂದ್ರ ಮೋದಿ ಅಭಿಮಾನಿ ಬಳಗದ ಸಂಚಾಲಕರುಗಳಾದ ಜಯಸಿಂಹ ಶ್ರೀಧರ್ ,ವಿಕ್ರಂ ಅಯ್ಯಂಗಾರ್ ,ಸಂದೇಶ್ ಸಾವರ್ಕರ್ ,ಶ್ರೀನಿವಾಸ್ ಪ್ರಸಾದ್ ,ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ , ಶಿವರಾಜ್ ,ಸುಚೀಂದ್ರ, ಚಕ್ರಪಾಣಿ ,ಟಿ ಎಸ್ ಅರುಣ್ ,ರಂಗನಾಥ್ ,ಹಾಗೂ ಇನ್ನಿತರರು ಹಾಜರಿದ್ದರು.