ತಮಿಳರೇ ಹಾಗೆ, ಅವರಲ್ಲೊಂದು ನೆಲ-ಜಲದ ವ್ಯಾಮೋಹವಿದೆಯಾ?, ಇಲ್ಲಾ ಅವರ ನಾಡಿಗಾಗಿ ಯಾರನ್ನು ಬೇಕಾದರು ಎದುರು ಕಟ್ಟಿಕೊಳ್ಳುವ ಮೊಂಡುತನವಿದೇಯಾ ?, ಇಲ್ಲಾ ತಮ್ಮ ತಮ್ಮಲ್ಲಿ ಅದೇಷ್ಟೆ ವೈರತ್ವವಿದ್ದರೂ, ಅಧಿಕಾರಕ್ಕಾಗಿ ಹೊರ ಜಗತ್ತಿನ ಮುಂದೆ ಒಂದೇ ರೂಪದಂತೆ ನಿಲ್ಲುವ ಒಗ್ಗಟ್ಟಿದೆಯಾ ?. ಇಲ್ಲಾ ಮತ ರಾಜಕೀಯಕ್ಕಾಗಿ ಒಮ್ಮೊಮ್ಮೆ ಒಳ್ಳೆಯದನ್ನು ತಿರಸ್ಕರಿಸುವ ಮೂರ್ಖತನವಿದೆಯಾ ? ಗೋತ್ತಿಲ್ಲ. ಅವರು ಸ್ವಲ್ಪ ವಿಚಿತ್ರ. ನಾನಿಲ್ಲಿ ಅವರನ್ನು ಹೊಗಳುವ ಅಥವ ತೆಗಳುವ ಮಾತನಾಡುತ್ತಿಲ್ಲ,
ಈ ನಾಡು, ನುಡಿ, ನೆಲ, ಜಲ, ಸಿನಿಮಾ ಮತ್ತು ಅಧಿಕಾರ ಇವುಗಳು ಇವರಿಂದ ಒಮ್ಮೊಮ್ಮೆ ಯಾವ ರೀತಿಯ ತಪ್ಪು ಮಾಡಿಸಿ ಬಿಡುತ್ತದೆ ಎಂದರೆ, ಇದಕ್ಕೆ ಸೂಕ್ತ ಉದಾಹರಣೆ ಕಾವೇರಿಗಾಗಿ ದೇವೇಗೌಡರು ಕಟ್ಟಲು ಯೋಜಿಸಿದ್ದ ಮೇಕೆದಾಟು ಅಣೆಕಟ್ಟೆ ಬೇಡವೆ೦ದಿದ್ದು!.. ಹೌದು ಅಂದು ಗೌಡರು ತಮಿಳುನಾಡು ಮತ್ತು ಕರ್ನಾಟಕದ ಮದ್ಯೆ ವಿವಾದವಾಗಿರುವ ಕಾವೇರಿ ನದಿ ನೀರಿಗೆ ಒಂದು ಶಾಶ್ವತ ಮತ್ತು ಮುಹತ್ವದ ಪರಿಹಾರ ನೀಡಲು ಮುಂದಾಗಿದ್ದರು. ನಮ್ಮ ರಾಜ್ಯದಲ್ಲಿ ನಡೆಯುತ್ತಿದ್ದ ಅನೇಕ ವರ್ಷಗಳ ಕಾವೇರಿ ಹೋರಾಟಕ್ಕೆ ತಕ್ಕ ಮಟ್ಟಿಗೆ ತಿಲಾಂಜಲಿ ಇಡಲು ಯೋಜಿಸಿದ್ದರು.
ನಾಡಿನ ರೈತರು ಯಾವುದೇ ಕಾರಣಕ್ಕು ನೀರಿಗಾಗಿ ಬೀದಿಗೆ ಬಂದು ಹೋರಾಟ ಮಾಡಬಾರದು, ಅವರು ನೆಮ್ಮದಿಯಾಗಿ ಬದುಕಬೇಕು ಎಂಬ ಕನಸಿನೊಂದಿಗೆ ಒ೦ದು ಬೃಹತ್ ದೂರದೃಷ್ಟಿ ಯೋಜನೆ ರೂಪಗೋಳಿಸಿದ್ದರು. ಆ ಕನಸಿನ ಯೋಜನೆಯೇ “ ಮೇಕೆದಾಟು ಜಲ ಯೋಜನೆಯ ಅಣೆಕಟ್ಟು. ಇದು ಇರುವುದು ನಮ್ಮ ಗಡಿ ಜಿಲ್ಲೆ ಚಾಮರಾಜನಗರ ಮತ್ತು ತಮಿಳುನಾಡಿನ ಮಧ್ಯೆ ಬರುವ ಕಾವೇರಿ ನದಿ ಹರಿಯುವ ಸ್ಥಳ, ಅರಣ್ಯ ಪ್ರದೇಶ.ಇಲ್ಲಿ ಗೌಡರು ಸುಮಾರು 40 ಟಿಎಂಸಿ ನೀರು ಸಂಗ್ರಹದ ಅಣೆಕಟ್ಟೆ ಕಟ್ಟಲು ನೀಲಿ ನಕ್ಷೆ ರೂಪಿಸಿದ್ದರು. ಇದಕ್ಕಾಗಿ ಪಕ್ಕದ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕರುಣಾನಿಧಿಯವರನ್ನು ಭೇಟಿ ಮಾಡಿ ಅಣೆಕಟ್ಟೆಯ ಬಗ್ಗೆ, ಅದರ ನೀರು ಸಂಗ್ರಹದ ಬಗ್ಗೆ, ಅದರಿಂದಾಗುವ ಉಪಯೋಗಗಳ ಬಗ್ಗೆ ವಿವರಿಸಿದ್ದರು.
ಆದರೆ ಬರಿ ಅಧಿಕಾರದ ಮಹತ್ವಾಕಾಂಕ್ಷೆ ಹೊಂದಿದ್ದ ತಮಿಳುನಾಡು ಸಿಎಂಗೆ, ದೇವೇಗೌಡರ ನದಿನೀರಿನ ಸಮಸ್ಯೆ ನಿವಾರಣೆಯ ದೂರದೃಷ್ಟಿ ಅರ್ಥವಾಗಲೇ ಇಲ್ಲಾ..ಕೇವಲ ವಿರೋದ ಪಕ್ಷದಲ್ಲಿ ಕುಳಿತಿದ್ದ ಕುಮಾರಿ ಜಯಲಲಿತಾರಿಗೆ(ಅಮ್ಮ) ಹೆದರಿ ಈ ಯೋಜನೆಗೆ ತಿಲಾಂಜಲಿ ಹೇಳಿದರು. ಅಂದು ಕರುಣಾನಿಧಿ ದೇಹಲಿಯಲ್ಲಿ ಪ್ರಧಾನಿ ದೇವೇಗೌಡರ ಬಳಿ ಕೊನೆಯದಾಗಿ ಹೇಳಿದ ಮಾತು ಏನು ಗೋತ್ತಾ?, “ನಿಮ್ಮ ಈ ಯೋಜನೆಗೆ ನನ್ನ ಮನಸ್ಸು ಒಪ್ಪುತ್ತಿದೆ, ಆದರೆ ನಾನು ಇದನ್ನು ಒಪ್ಪಿ, ಸಹಿ ಮಾಡಿ ಇಲ್ಲಿಂದ ತಮಿಳುನಾಡಿಗೋದರೆ ನನ್ನನ್ನು ಜಯಲಲಿತಾ ಬಿಡುವುದಿಲ್ಲಾ(ರಾಜಕೀಯವಾಗಿ)..”ಯೋಜನೆಯ ವಿಶೇಷ: ಇದೊಂದು ಯೋಜನೆ ಜಾರಿಯಾಗಿದಿದ್ದರೆ, ಬಹುಶಹ ಕಾವೇರಿ ನದಿ ನೀರಿನ ಸಮಸ್ಯೆಗೆ ಒಂದು ಸುಭದ್ರವಾದ ಪರಿಹಾರ ಸಿಕ್ಕಿರುವುದೇನೊ ?. ಈ ಯೋಜನೆಯ ಪ್ರಮುಖ ಉದ್ದೇಶ ನೀರು ಸಂಗ್ರಹ ಮತ್ತು ವಿದ್ಯುತ್ ಶಕ್ತಿ ಉತ್ಪಾದನೆ,
ಸಾಮಾನ್ಯವಾಗಿ ನಮಗೆ ನೀರಿನ ಅಭಾವ ಬರುವುದು ಬೇಸಿಗೆ ಕಾಲದಲ್ಲಿ, ಕಾವೇರಿ ನದಿ ಮತ್ತು ಅದರ ಉಪನದಿಗಳ ನೀರಿಗಾಗಿ ನಮ್ಮಲ್ಲಿರುವ ಪ್ರಮುಖ ಡ್ಯಾಂಗಳು ಹಾರಂಗಿ(8.5 ಟಿಎಂಸಿ), ಹೇಮಾವತಿ (37 ಟಿಎಂಸಿ), ಕಬಿನಿ 21 ಟಿಎಂಸಿ), ಕೆಆರ್‌ಎಸ್ (49 ಟಿಎಂಸಿ), ಇದಿಷ್ಟು ಬಿಟ್ಟು ಇನ್ಯಾವುದೆ ನೀರು ಸಂಗ್ರಹ ದಾರಿಗಳಿಲ್ಲ. ಮಳೆ ಬಂದಾಗ ಡ್ಯಾಂ ತುಂಬಿದರೆ ನಾವು ನೀರು ಹರಿಬಿಡಲೆ ಬೇಕು. ಕೆಲ ತೀರ ಬರಗಾಲವಾದಾಗ ನದಿ ಹರಿವು ಕಡಿಮೆಯಾಗಿದ್ದು ಬಿಟ್ಟರೇ, ಕಾವೇರಿ ಮೈದುಂಬಿ ಹರಿದು ಸಮುದ್ರ ಸೇರಿದ್ದೆ ಹೆಚ್ಚು. ಇಂತ ಸಮುದ್ರ ಸೇರುವ ನೀರಿನ ಸಂಗ್ರಹಕ್ಕೆ ಗೌಡರು ಯೋಜನೆ ಹಾಕಿದ್ದು. ಮಳೆಗಾಲದಲ್ಲಿ ನಾವು ಬಿಟ್ಟ ನೀರು ಏತೆಚ್ಚವಾಗಿ ಸಮುದ್ರ ಸೇರುತ್ತದೆ, ನಾವು ಬಿಟ್ಟಿದ್ದಕ್ಕು, ಅವರು ಪಡೆದದ್ದಕ್ಕೂ ಲೆಕ್ಕವಿಲ್ಲಾ.
ಇದೆ ನೀರನ್ನು ಮತ್ತೊಂದು ಡ್ಯಾಂ ಮೂಲಕ ಸಂಗ್ರಹಿಸಿದರೆ, ಸಂಗ್ರಹಿಸಿದ ನೀರನ್ನು ಬೇಸಿಗೆಯ ಕಾಲದಲ್ಲಿ ತಮಿಳುನಾಡಿಗೆ ಬಿಟ್ಟು, ನಮ್ಮ ಹಾರಂಗಿ, ಕಬಿನಿ, ಹೇಮಾವತಿ, ಕೆಆರ್‌ಎಸ್ ಡ್ಯಾಂಗಳ ನೀರನ್ನು ನಾಡಿನ ರೈತರು, ನದಿಪಾತ್ರದ ಮತ್ತು ಬೆಂಗಳೂರಿನ ಜನರು ಕುಡಿಯುವುದಕ್ಕಾಗಿ ಬಳಸಿಕೊಂಡರೆ!, (ಅಬ್ಬ ಎಂಥಹ ದೂರದೃಷ್ಟಿ ಗೌಡರದ್ದು!.) ಎಂಬ ಅದ್ಭುತ ಯೋಚನೆಯೊಂದಿಗೆ ಶುರುವಾಗಿದ್ದೆ ಈ ಮೇಕೆದಾಟು ಅಣೆಕಟ್ಟು. ನೋಡಿ ಒಂದು ಯೋಜನೆಯಲ್ಲಿ ಎಷ್ಟು ಉಪಯೋಗಗಳಿವೆ. ಒ೦ದೋಮ್ಮೆ ತಮಿಳುನಾಡಿನವರು ನೀರು ಕೇಳಿದರೆ ಕೆಆರ್‌ಎಸ್ ನಿಂದ ನೀರು ಬಿಡುವ ಪ್ರಮೆಯವೇ ಬರುತ್ತಿರಲಿಲ್ಲಾ, ಬಂದರು ಅದು ಅಲ್ಪ. ದುರಾದೃಷ್ಟವೆಂದರೆ ಇಂಥ ಯೋಜನೆ ಜಾರಿಯಾಗಲಿಲ್ಲಾ. ಮುಖ್ಯ ಮಂತ್ರಿಯಾಗಿದ್ದಾಗ ಕೇಳಿ ಒಪ್ಪದ ಕರುಣಾನಿಧಿಯವರನ್ನು ಗೌಡರು ಪ್ರಧಾನಿಯಾದಾಗಲು ಕೇಳಿ ಒಪ್ಪಿಸಲು ಇನ್ನಿಲ್ಲದ ಶ್ರಮ ಪಟ್ಟರು, ನಾಡಿನ ಅನ್ನದಾತರ ಗೋಳು ಕಣ್ಣಾರೆ ಕಂಡಿದ್ದ ಗೌಡರು ಯೋಜನೆಯ ಸ೦ಪೂರ್ಣ ಹಣವನ್ನು ಎರಡು ರಾಜ್ಯದವರು ನೀಡಬೇಕಿದ್ದರೂ, ಕರುಣಾನಿಧಿಯವರನ್ನು ಒಪ್ಪಿಸಲು ಕೇ೦ದ್ರವೇ ಸಂಪೂರ್ಣ ಹಣ ನೀಡಲಿದೆ, ಆ ಡ್ಯಾಂ ನೀರನ್ನು ಪೂರ್ಣವಾಗಿ ನೀವೆ ಬಳಸಿಕೊಳ್ಳಿ,
ನಮಗೆ ಒ೦ದು ಹನಿಯೂ ಬೈಡವೆಂದು ಕೈಮುಗಿದು ಮನವಿ ಮಾಡಿದರು ಒಪ್ಪಲಿಲ್ಲಾ ಈ ತಮಿಳರ ದೊರೆ,ಅಡೆ-ತಡೆಗಳೇನು:1962 ರಲ್ಲಿ ಮೊದಲ ಬಾರಿಗೆ ಪಕ್ಷೇತರ ಶಾಸಕರಾಗಿದ್ದ ದೇವೇಗೌಡರು ಸದನದಲ್ಲಿ ಒಂದು ಖಾಸಗಿ ವಿಧೇಯಕ ಮಸೂದೆ ಮಂಡಿಸುತ್ತಾರೆ, ಅದು “ಕಾವೇರಿ ನದಿ ನೀರಿನ 1924ರ ಒಪ್ಪಂದದ ಬಗ್ಗೆ!. ಇದರಂತೆ 1974ರಲ್ಲಿ (50 ವರ್ಷಕ್ಕೆ)’ ಈ ಒಪ್ಪಂದದ ಅವಧಿ ಮುಗಿಯಲಿದ್ದು, ಹೊಸ ಒಪ್ಪಂದ ಜಾರಿಯಾಗುವುದರೊಳಗೆ ನಮ್ಮ ಪಾಲಿನ ನೀರು ಸಂಗ್ರಹಕ್ಕೆ ಸರಿಯಾದ ಮಾರ್ಗಸೂಚಿ ನಿರ್ದರಿಸಬೇಕು ಎಂದು ಸದನದಲ್ಲಿ ಏಕಾಂಗಿಯಾಗಿ ಮಸೂದೆ ಮಂಡಿಸುತ್ತಾರೆ. ಇದರ ಕೊಡುಗೆ ಎಂಬಂತೆ ಕಾವೇರಿಗೆ 1974ರಲ್ಲಿ ಕಬಿನಿ, ಹಾರಂಗಿ, ಹೇಮಾವತಿ ಡ್ಯಾಂಗಳು ಎದ್ದು ನಿಲ್ಲುತ್ತವೆ. ಗೌಡರು ಈ ಮೂಲಕ ಸದ್ದಿಲ್ಲದೆ ನಾಡಿನ ರೈತರಿಗೆ ಕಾವೇರಿ ಉಳಿಸಿಕೊಡುತ್ತಾರೆ. ಇವು ನಮ್ಮ ನೆಲದಲ್ಲಿದ್ದವು, ಯಾರಿಗೂ (ತಮಿಳುನಾಡಿಗೆ ತಿಳಿಯದಂತೆ, ಹೆಚ್ಚು ಪ್ರಚಾರ ನೀಡದೆ ಡ್ಯಾಂ ಕಟ್ಟಿಬಿಟ್ಟೆವು(ಸ್ವಲ್ಪ ತೊಂದರೆಯಾಯ್ತು). ಆದರೆ ಮೇಕೆದಾಟು ಯೋಜನೆ ಮಾಡಬೇಕಿದ್ದುದ್ದು ನಮ್ಮ ಮತ್ತು ತಮಿಳುನಾಡಿನ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ!, ಅಲ್ಲಿ ಡ್ಯಾಂ ಕಟ್ಟಲು ನಮಗೆ ತಮಿಳು ನಾಡು ಮತ್ತು ಕೇಂದ್ರ ಸರ್ಕಾರದ ಅನುಮತಿ ಬೇಕೇ ಬೇಕು. ಇವರ ಒಪ್ಪಿಗೆ ಇಲ್ಲದಿದ್ದರೇ ಇದು ಸಾಧ್ಯವೇ ಇಲ್ಲಾ.. ಈ ಕಾರಣದಿಂದಾಗಿ ಇನ್ನು ಈ ಯೋಜನೆ ಜಾರಿಯಾಗುತ್ತಿಲ್ಲಾ
.
ಕೊನೆ ಸತ್ಯ: ಶಾಸಕರಾಗಿದ್ದಾಗ ಕಾವೇರಿಗಾಗಿ ಖಾಸಗಿ ವಿಧೇಯಕ ಮಂಡಿಸಿದ್ದ, ಕಬಿನಿ, ಹಾರಂಗಿ, ಹಾಗೂ ಹೇಮಾವತಿ ಜಲಾಶಯಗಳ ನಿರ್ಮಾಣಕ್ಕೆ ಕಾರಣವಾಗಿದ್ದ, ಮ೦ತ್ರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಿದ್ದಾಗ“ ಉತ್ತರ ಕರ್ನಾಕದ ಜೀವ ನದಿಯಾದ ಕೃಷ್ಣಗಾಗಿ ಹೋರಾಟ ಮಾಡಿ ಸಾವಿರಾರು ಕೋಟಿ ಹಣ ತಂದಿದ್ದ, ಕೃಷ್ಣ ಮೇಲ್ದಂಡೆ ಯೋಜನೆಯ ಮೂಲಕ ಲಕ್ಷಾಂತರ ರೈತರ ಜಮೀನಿಗೆ ನೀರು ಹರಿಸಿದ್ದ, ಆಲಮಟ್ಟಿ ಡ್ಯಾಂನ ಎತ್ತರವನ್ನು 519ಮೀಟರ್ ನಿಂದ 524ಮೀಟರ್‌ಗೆ ಎತ್ತರಿಸಲು ಒಪ್ಪಿಗೆ ಕೊಟ್ಟು, ಆ ಭಾಗದ 734 ಟಿಎಂಸಿ ನೀರು ಉಳಿಸಿಕೊಟ್ಟಿದ್ದ ದೇವೇಗೌಡರು,” ಕಾವೇರಿಗೂ ಒಂದು ಶಾಶ್ವತ ಪರಿಹಾರ ನೀಡಲು ಹಾಕಿದ ಶ್ರಮ 25 ವರ್ಷಗಳಾದರು ಕೈಗೂಡಲಿಲ್ಲಾ..
ಅದೇನೆ ಇರಲಿ, ಕೃಷ್ಣ, ಕಾವೇರಿಗಾಗಿ ಗೌಡರು ಶ್ರಮ ಪಟ್ಟಿರುವಷ್ಟು ರಾಜ್ಯದ ಮತ್ಯಾವ ರಾಜಕಾರಣಿಯು ಶ್ರಮ ಪಟ್ಟಿಲ್ಲಾ, ರಾಜ್ಯದ ನದಿ ನೀರಿನ ಬಗ್ಗೆ ಅವರಿಗೆ ತಿಳಿದಿರುವಷ್ಟು ಮಾಹಿತಿ ಮತ್ಯಾವುದೇ ನಾಯಕರಿಗೆ ತಿಳಿದಿಲ್ಲಾ ಎಂಬುದು ಕಡು ಸತ್ಯ |. ಇದಕ್ಕಾಗೆ ಇವರನ್ನು “ರಾಜ್ಯದ ಶ್ರೇಷ್ಟ ನೀರಾವರಿ ತಜ್ಞ” ಎನ್ನುವುದು. ರಾಜಕೀಯ ಏನೆ ಇರಲಿ, ರಾಜಕಾರಣಿ ಯಾರೆ ಇರಲಿ, ದೇವೇಗೌಡರಿಗೆ ದೇವೇಗೌಡರೆ ಸಾಟಿ!, ಹುಟ್ಟು ಹೋರಾಟಗಾರ ನದಿ ನೀರಿನ ಕಾವಲುಗಾರ ದೇವೇಗೌಡರಿಗೆ ನಮ್ಮದೊಂದು ಸಲಾಮ್. ಕೊನೆಯದಾಗಿ. ಈಗ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ, ಇಗಲಾದರು ದೇವೇಗೌಡರ ಬಹುದಿನಗಳ ಕನಸು ನನಸಾಗಲಿ, ಕಾವೇರಿ ಉಳಿಸುವ ಅವರ ಹೋರಾಟಕ್ಕೆ ಜಯಸಿಗಲಿ, ನಾಡಿನ ರೈತರ ಬಹುದಿನಗಳ ಬೇಡಿಕೆ ಈಡೇರಲಿ
ಸಾರ್ಥಿಕ್..
ಬೆಂಗಳೂರು..