ನ್ಯೂ ಡಯಾ ಕೇರ್ ಸೆಂಟರ್ & ಪಾಲಿ ಕ್ಲಿನಿಕ್, ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ ಹಾಗೂ ಹಾರ್ಟ್ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರು ವಕೀಲರ ಸಂಘದ ವತಿಯಿಂದ ವಕೀಲರು ಹಾಗೂ ಸಾರ್ವಜನಿಕರಿಗೆ ಉಚಿತ ಮಧುಮೇಹ ಹಾಗೂ ಕಣ್ಣಿನ ತಪಾಸಣೆ ಶಿಬಿರವನ್ನು ವಕೀಲರ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಮಹಾದೇವಸ್ವಾಮಿ ಎಂ, ಪುಟ್ಟಸಿದ್ದೇಗೌಡ, ಉಮೇಶ್ ಎಸ್, ಮಹದೇವಸ್ವಾಮಿ(ಖಜಾಂಚಿ) , ಮಧುಮೇಹ ತಜ್ಞರಾದ ಡಾ.ರೇಣುಕಾಪ್ರಸಾದ್ ಎ ಆರ್, ಡಾ. ನವ್ಯ ಪಿ, ಹಾರ್ಟ್ ಸಂಸ್ಥೆಯ ವಿಜೆ ಮಿಂಚು , ಡಾ. ಅಗರ್ವಾಲ್ ನ ರವಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಹೆಚ್ಚಿನ ಜನರು ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.