ಕಲಿಕೆಯನ್ನು ಮತ್ತಷ್ಟು ವಿನೋದ, ತೊಡಗಿಸಿಕೊಳ್ಳುವ ಮತ್ತು ಸಂವಾದಾತ್ಮಕವಾಗಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿರುವ ವಂಡರ್‍ಸ್ಲೇಟ್, ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಮಾನಗಳನ್ನು ಅರಿಯಲು ಮತ್ತು ಎಂಸಿಕ್ಯೂನಲ್ಲಿ ಭಾಗವಹಿಸಲು ತಮ್ಮ ಆದ್ಯತೆಗೆ ತಕ್ಕಂತೆ ಆಟಗಳು, ಟೆಸ್ಟ್‍ಗಳೊಂದಿಗೆ

ಕಲಿಯಲು ನೆರವಾಗುವ ಆಶಯದಿಂದ ಗೇಮ್ ಇ-ಬುಕ್ ಆ್ಯಪ್ ಅಭಿವೃದ್ಧಿಪಡಿಸಿದೆ. ಉತ್ಕøಷ್ಟ ಕಲಿಕಾ ಅನುಭವ ನೀಡಲು ಈ ಆ್ಯಪ್ 150 ಪ್ರಕಾಶಕರಿಂದ ಓದುವ ಪರಿಕರ ಸಾಮಗ್ರಿ ಮತ್ತು ವಿಡಿಯೊಗಳನ್ನು ಒಳಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವರಿಗಾಗಿ ಇದು ಅತ್ಯುತ್ತಮ ಆ್ಯಪ್ ಆಗಿದೆ ಮತ್ತು ಯುಪಿಎಸ್‍ಸಿ, ಬ್ಯಾಂಕಿಂಗ್, ರೈಲ್ವೆ, ರಾಜ್ಯ ಸರಕಾರಗಳ ಉದ್ಯೋಗ ಪರೀಕ್ಷೆಗಳು, ನೀಟ್, ಜೆಇಇ ಮೊದಲಾದ ಪ್ರವೇಶ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವವರಿಗೂ ಬಹಳ ಉಪಯುಕ್ತವಾಗಿದೆ. ಈ ಆ್ಯಪ್ ಆವಿಷ್ಕಾರಿಯಾಗಿದ್ದು, ವೆಚ್ಚ ಪರಿಣಾಮಕರಿಯಾಗಿದೆ ಮತ್ತು ಇಂಗ್ಲೀಷ್ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿಯೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
“ನಮ್ಮ ಈ ಹಿಂದಿನ ಕರೆಂಟ್ ಅಫೇರ್ಸ್ ಗೇಮ್ ಆ್ಯಪ್‍ಗೆ ದೊರೆತ ಅಭೂತಪೂರ್ವ ಸ್ಪಂದನೆಯಿಂದಾಗಿ ನಾವು ಈಗ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗೇಮ್ ಇ ಬುಕ್‍ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಇಂತಹ ಗೇಮ್ ಇ-
ಬುಕ್ ಹೊರಬರುತ್ತಿರುವುದು ಇದೇ ಮೊದಲು. ವಂಡರ್‍ಸ್ಲೇಟ್‍ನಲ್ಲಿ ನಾವು, ಕಲಿಕೆಯು ಸದಾ ವಿನೋದ ಮತ್ತು ಆಟದಿಂದ ಕೂಡಿರುವಂತೆ ಮಾಡುವ ಸಲುವಾಗಿ ಸುಲಭ, ಕಿರಿಕಿರಿ ಇಲ್ಲದ ಮತ್ತು ಉತ್ಕøಷ್ಟ ಕಲಿಕಾ ಅನುಭವ ನೀಡಲು ಬಯಸುತ್ತೇವೆ. ಈ ಆ್ಯಪ್ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿಯಲು, ಆನ್‍ಲೈನ್ ಚಾಲೆಂಜರ್ ಜತೆ ಸ್ಪರ್ಧೆ ನಡೆಸಲು, ಪ್ರಗತಿ ಪರಿಶೀಲಿಸಿಕೊಳ್ಳಲು ಮತ್ತು ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಳ್ಳಲು ಸಹಾಯಕವಾಗಿದೆ. ಸಮಯದ ಸದ್ಬಳಕೆ ಜತೆಗೆ ಈ ಆ್ಯಪ್ ಬಳಕೆದಾರರು ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಲು ಸಹಾಯವಾಗಲಿದೆ,’’ ಎಂದು ಶ್ರೀ ಆನಂದ್ ಅಚ್ಯುತ್, ಸ್ಥಾಪಕರು ಮತ್ತು ಸಿಇಒ, ವಂಡರ್‍ಸ್ಲೇಟ್ ಅವರು ಹೇಳಿದರು.