

ಕೊರಟಗೆರೆ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಆಗತಾನೆ ಜನಿಸಿರುವ ನವಜಾತ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು ಈ ಕೃತ್ಯ ವೆಸಗಿದವರ ಬಗ್ಗೆ ಶೀಘ್ರ ಪತ್ತೆಹಚ್ಚಲು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಪುಪ್ಪಲತಾ ತಿಳಿಸಿದ್ದಾರೆ. ಅವರು ಪತ್ರಿಕೆಗೆ ಮಾಹಿತಿ ನೀಡಿ ಕಳೆದ ರಾತ್ರಿ ಈ ಕೃತ್ಯ ನಡೆದಿದ್ದು ಅನುಮಾನಾಸ್ಪದವಾಗಿ ಹೆಣ್ಣು ಮಗು ಬೇಡ ಎನ್ನುವ ದೃಷ್ಠಿಯಿಂದ ಈ ರೀತಿ ಹಾಕಿರುವುದೋ ಅಥವಾ ಯಾವುದೋ ಅನೈತಿ ಸಂಬಂಧದಿಂದ ಈ ಕೃತ್ಯ ನಡೆದಿರ ಬಹುದು ಎಂದು ಅನುಮಾನ ವ್ಯಕ್ತಪಡೆಸಿ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ ಎಂದು ತಿಳಿಸಿದ ಅವರು ಆಸ್ಪತ್ರೆಯಲ್ಲಿ ರಾತ್ರಿ ಪಾಳೆಯದಲ್ಲಿರುವ ವೈದ್ಯರಿಗೂ ಹಾಗೂ ಸಿಬ್ಬಂದಿಗೂ ಕಣ್ಣುತಪ್ಪಿಸಿ ಈ ಕೃತ್ಯ ವೆಸಗಿದ್ದು ಬೆಳಿಗ್ಗೆ ಆಸ್ಪತ್ರೆ ಸಿಬ್ಬಂದಿ ಶೌಚಾಲಯವನ್ನು ಶುಚಿಕೊಳಿಸಲು ಹೋದಂತ ಸಂದರ್ಬದಲ್ಲಿ ಆಗ ತಾನೇ ಜನಿಸಿಸಂತಹ ಹೆಣ್ಣು ಮಗುವಿನ ಶವ ಪತ್ತೆಯಾಗಿದ್ದು ವಿಷಯ ತಿಳಿದ ತಕ್ಷಣ

ಪೊಲೀಸ್ ಠಾಣೆಗೆ ಮತ್ತು ತಾಲೂಕು ಆರೊಗ್ಯಧಿಕಾರಿಗಳಿಗೆ ತಿಳಿಸಿರುವುದಾಗಿ ತಿಳಿಸಿರುವದಾಗಿ ತಿಳಿಸಿದರು. ಪೊಲೀಸ್ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ಬೇಟಿ ನೀಡಿದ ಪಿಎಸೈ ಮಂಜುಳಾ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡು ಆಸ್ಪತ್ರೆಯಲ್ಲಿ ಆಳವಡಿಸಿರುವ ಸಿಸಿ ಟಿವಿ ಕ್ಯಾಮರಾ ಪುಟೇಜ್ ಪರೀಶೀಲಿಸಿ ಅನುಮಾಸ್ಪದವಾಗಿ ರಾತ್ರಿ ಸಂಚರಿಸಿದ ಕೆಲ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಿದ್ದು ಶೀಘ್ರವೇ ಅರೋಪಿಗಳನ್ನು ಪತ್ತೆ ಹಚ್ಚುವುದಾಗಿ ಪತ್ರಿಕೆಗೆ ತಿಳಿಸಿದಿದ್ದಾರೆ.
ದಾಖಲಸಿಕೊಂಡು ತನಿಖೆ ಕೈಗೊಂಡು ಆಸ್ಪತ್ರೆಯಲ್ಲಿ ಆಳವಡಿಸಿರುವ ಸಿಸಿ ಟಿವಿ ಕ್ಯಾಮರಾ ಪುಟೇಜ್ ಪರೀಶೀಲಿಸಿ ಅನುಮಾಸ್ಪದವಾಗಿ ರಾತ್ರಿ ಸಂಚರಿಸಿದ ಕೆಲ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಿದ್ದು ಶೀಘ್ರವೇ ಅರೋಪಿಗಳನ್ನು ಪತ್ತೆ ಹಚ್ಚುವುದಾಗಿ ಪತ್ರಿಕೆಗೆ ತಿಳಿಸಿದಿದ್ದಾರೆ. ಇತ್ತೀಚೆಗೆ ಕೊರಟಗೆರೆ ಸಾರ್ವಜನಿಕರ

ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರುಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಈಗ ಬಹುತೇಕ ಮಹಿಳಾ ವೈದ್ಯರುಗಳೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ರಾತ್ರಿ ವೇಳೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ವೈದ್ಯರು ಬಹಿತೇಕೆ ಕೊಠಡಿಯಲ್ಲಿ ಇರುತ್ತಾರೆ ಆಸ್ಪತ್ರೆಯ ವಾರ್ಡ್‌ಗಳಿಗೆ ಬೇಟಿ ನೀಡುವುದು ಬಹುತ್ತೇಕ ಇಲ್ಲದಂತ್ತಾಗಿದ್ದು ಈ ರೀತಿಯ ಕೃತ್ಯ ನಡೆಯಲು ಕಾರಣವಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
