
ಮೈಸೂರು, ಫೆಬ್ರವರಿ 05 – ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2013-14ನೇ ಸಾಲಿನಿಂದ 2015-16 ನೇ ಸಾಲಿನವರೆಗಿನ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಹಾಗೂ ಬಿ.ಸಿ.ಎಂ ಯೋಜನೆಯಡಿಯಲ್ಲಿ ಬಾಕಿಯಿರುವ ಪರಿಶಿಷ್ಟ ಜಾತಿಯ-10, ಪರಿಶಿಷ್ಟ ಪಂಗಡದ-07 ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ-39 ಸೇರಿದಂತೆ ಒಟ್ಟು 56 ಪ್ರವಾಸಿ ಟ್ಯಾಕ್ಸಿ ವಿತರಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿಬೇಕು, 20 ರಿಂದ 45 ವಯೋಮಿತಿ ಹೊಂದಿರಬೇಕು, 10 ನೇ ತರಗತಿ ಪಾಸಾದ ಪ್ರಮಾಣ ಪತ್ರ ಹಾಗೂ ಟೂರಿಸ್ಟ್ ಟ್ಯಾಕ್ಸಿ ಬ್ಯಾಡ್ಜ್ ಹೊಂದಿರುವ ಪರವಾನಿಗೆ ಪ್ರತಿಯನ್ನು ಸಲ್ಲಿಸಿ ಅರ್ಜಿಯನ್ನು 2022ರ ಫೆಬ್ರವರಿ 7 ರಂದು ಸಂಜೆ 4.30 ರ ಒಳಗಾಗಿ ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರು ಹೊಯ್ಸಳ ಕಾಂಪ್ಲೆಕ್ಸ್‍ನಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆಗೆ ದ್ವಿ ಪ್ರತಿಯಲ್ಲಿ ಭರ್ತಿಮಾಡಿ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0821-2422096 ನ್ನು ಸಂಪರ್ಕಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.