ಗುಂಡ್ಲುಪೇಟೆ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಗಳನ್ನು ತಿದ್ದುಪಡಿಗೆ ಮುಂದಾಗಿತ್ತು. ಇದರಿಂದ ರೈತರ ದಂಡೆದ್ದು ವರ್ಷಗಟ್ಟಲೆ ಪ್ರತಿಭಟನೆ ನಡೆಸಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ. ಇಷ್ಟೆಲ್ಲ ರೈತ ವಿರೋಧಿ ಧೋರಣೆ ಅನುಸರಿಸಿರುವ ಬಿಜೆಪಿ ಇದೀಗ ಎಪಿಎಂಸಿ ಚುನಾವಣೆ ಎದುರಿಸುತ್ತಿರುವುದನ್ನು ಜನರು ಮನಗಂಡು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ತಿರಸ್ಕರಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಮನವಿ ಮಾಡಿದರು.
ಏ.17ರ ಭಾನುವಾರ ಎಪಿಎಂಸಿ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಪ್ರಭುದ್ಧ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಕೃಷಿ ಕಾಯ್ದೆ, ಎಪಿಎಂಸಿ ಖಾಸಗೀಕರಣ, ಗೊಬ್ಬರದ ಮೇಲೆ 12%, ರೈತರ ಉಪಕರಣದ ಮೇಲೆ 8%, ಬಿತ್ತನೆ ಬೀಜಗಳ ಮೇಲೆ ಜಿಎಸ್‍ಟಿ ಸೇರಿದಂತೆ ಸಾರ್ವಜನಿಕರ ದಿನ ಬಳಕೆ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿ ಜನರ ವಿರೋಧಿ ನೀತಿ ಅನುಸರಿಸುತ್ತಿದೆ. ಆದ್ದರಿಂದ ಬಿಜೆಪಿ ಬೆಂಬಲಿತರನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸಿದರು.
ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ರೈತರ ಮೇಲೆ ಯಾವುದೇ ತೆರಿಗೆ ಅವರ ಬೆನ್ನಿಗೆ ನಿಂತಿತ್ತು. ಜೊತೆಗೆ ದೇಶದ ಕೃಷಿ ಉತ್ಪಾದನೆಗೆ ಒತ್ತು ನೀಡುತ್ತಿತ್ತು. ಆದ್ದರಿಂದ ರೈತರ ಪರವಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕೋರಿದರು.
ವರದಿ: ಬಸವರಾಜು ಎಸ್.ಹಂಗಳ