ತಮಸೋಮ ಜ್ಯೋತಿರ್ಗಮಯ….. ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್‌ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲ ದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿಗಳಲ್ಲೊಂದು. ದಾ[ಮಾ]ನವರು ತ್ರಿಮೂರ್ತಿಗಳಿಗೆ/ಕೋಟಿದೇವತೆಗಳಿಗೆ ಯಾವುದಾದರು ಹರಕೆ ಸಲ್ಲಿಸಲು ಅಥವ ಅವರಿಂದ ಏನಾದರು ವರ ಪಡೆಯಲು ಅಗ್ನಿಯ ಮೂಲಕವೆ ಎಂಬುದು ವಿಪ್ರಉವಾಚ?! ಈನಿಯಮ ಪಾಲಿಸದೆ ತಮ್ಮ ಭ[ಶ]ಕ್ತಿ ಯಿಂದ ನೇರವಾಗಿ ದೈವ ಸಾಕ್ಷಾತ್ಕಾರ ಕಂಡುಕೊಂಡ; ಗೋರಕುಂಬಾರ, ಬೇಡರಕಣ್ಣಪ್ಪ, ಕನಕದಾಸ, ಕಾಳಿದಾಸ, ಪುರಂದರದಾಸ ಮುಂತಾದ ವರು ನಿಜಭಕ್ತರಾದರು! ಅಗ್ನಿಹಾದಿಯನ್ನು ಹಿಂದಿಕ್ಕಿ ಮುಕ್ತಿ ಪಡೆದವರಲ್ಲಿ ಮಂತ್ರಾಲಯ ಗುರುರಾಘವೇಂದ್ರ, ಜಾತ್ಯಾತೀತ ಶ್ರೇಷ್ಠ ಶಿರಡಿ ಸಾಯಿ ಬಾಬ, ನಿಸ್ವಾರ್ಥ ಸಂತ ಶಿಶುನಾಳ ಷರೀಫ಼ ಮುಂತಾದವರು ಉತ್ತಮ ಉದಾ! ಇವರಲ್ಲದೇ ಅನೇಕ ಸಾಧಕರು ಅವರದ್ದೆ ಸರಿದಾರಿ ಮೂಲಕ ಲೋಕ ಕಲ್ಯಾಣಕ್ಕಾಗಿ ಸಕಲವನ್ನು ಸಮರ್ಪಿಸಿ ತ್ಯಾಗಮೂರ್ತಿ ಆದವರು ಇದ್ದಾರೆ! 

Happy Deepavali 2021 Wishes, Quotes, Images : ದೀಪಾವಳಿ 2021: ಆಚರಣೆ, ಮಹತ್ವ,  ಪ್ರೀತಿ ಪಾತ್ರರಿಗೆ ಶುಭ ಸಂದೇಶಗಳು - Kannada Oneindia

 ರಾಮಕೃಷ್ಣಪರಮಹಂಸ, ಸ್ವಾಮಿವಿವೇಕಾನಂದ, ಕಿತ್ತೂರುಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಲಾಲ್-ಬಾಲ್-ಪಾಲ್, ಗಾಂಧೀಜಿ, ನೇತಾಜಿ ಸು.ಚ.ಬೋಸ್, ಸರ್ದಾರ್ಪಟೇಲ್, ಲಾ.ಬ.ಶಾಸ್ತ್ರಿ, ಅಬ್ದುಲ್ಕಲಾಂ, ರವೀಂದ್ರನಾಥ್ಠಾಗೂರ್, ಕುವೆಂಪು, ಕೆ.ಹನುಮಂತಯ್ಯ, ಎಸ್.ನಿಜಲಿಂಗಪ್ಪ ಮುಂತಾದವರು ಪರಮ ಜೀವಿಗಳಿಗಿಂತ ಕಡಿಮೆಯೇನಿಲ್ಲ?! ಇವರೂ ಒಂದಿಲ್ಲೊಂದು ರೀತಿ ಕತ್ತಲೆಯಲ್ಲಿದ್ದವರನ್ನು ಬೆಳಕಿನೆಡೆಗೆ ಕರೆತಂದವರೇ ಆಗಿಹರು! ಭ[ಶಕ್ತಿ]ಯಾಗಲೀ ಪವಿತ್ರತೆಯಾಗಲೀ, ದೇಶಪ್ರೇಮವಾಗಲೀ, ಮಾರುಕಟ್ಟೆಯಲ್ಲಿ ಸಿಗುವಂಥದ್ದಲ್ಲ.  ಇದನ್ನು ಪುಷ್ಟೀಕರಿಸುವಂಥ ವಿವೇಕಾನಂದರ ವಾಣಿ : [೧]sಸಾಧನೆ ಮಾಡಲು ಹೊರಡುವ ಹಾದಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚು ಜನಗಳೆ ಅಡ್ಡಬರುತ್ತಾರೆ.[೨]ನಿಮ್ಮನ್ನು ನೀವು ಜಯಿಸಿದಾಗ ಜಗತ್ತೇ ನಿಮ್ಮದಾಗುತ್ತದೆ. [೩]ಮಾನವನಲ್ಲಿ ಅಡಗಿರುವ ದೈವತ್ವ ಪ್ರಕಾಶಪಡಿಸುವುದೇ ಧರ್ಮ.[೪]ಬಡವರು-ಅಶಕ್ತರು-ರೋಗಿಗಳಲ್ಲಿ ಶಿವನನ್ನು ಕಾಣುವವರೇ ನಿಜವಾದ ಶಿವಭಕ್ತರು [೫]ಜ್ಞಾನಿಗಳು ತಮ್ಮ ದೋಷವನ್ನು ಮೊದಲು ಕಂಡುಕೊಳ್ಳುವರು. ಜಾನಪದ ರೀತಿಯಲ್ಲಿ ಅಥವ ಆದಿನಿವಾಸಿ[ಸ್ಥಳೀ]ಯರ ಪದ್ಧತಿ ಪ್ರಕಾರ ೩ದಿನದ ಹಬ್ಬವೆಂದರೆ: ಮೊದಲದಿನ ಎಲ್ಲ ಬಗೆಯ ಕಸ ಕಲ್ಮಶ ತೆಗೆದು ಬಿಸಾಡುವ ಶುಚಿತ್ವ ದಿನ, ಎರಡನೇ ದಿನ ನೀರು[ಲಕ್ಷ್ಮೀ] ತುಂಬಿಸಿ[ಬರಮಾಡಿ]ಕೊಳ್ಳುವದಿನ ಹಾಗೂ ೩ನೇ ದಿನದಂದು ದೀಪಗಳ ಹಚ್ಚುವ ಮೂಲಕ ನವಜ್ಯೋತಿ ಬೆಳಗಿಸಿ ಹೊಸಬಟ್ಟೆ ಧರಿಸಿ  ಸಿಹಿತಿಂಡಿ[ಕೊಟ್ಟು]ತಿಂದು  ಸವಿನುಡಿಗಳನ್ನಾಡುತ್ತ ಶುಭ-ಲಾಭ ಕೋರಿ ಸಂಭ್ರಮಿಸುವುದು!

  ಆಶ್ವಯುಜ ಅಮಾವಾಸ್ಯೆ ಹಿಂದಿನ ದಿನ ನರಕಾಸುರನ ಸಂಹಾರಗೈದ ಪ್ರಯುಕ್ತ ‘ನರಕ ಚತುರ್ದಶಿ’ಯಂದು ಕಷ್ಟಕಾರ್ಪಣ್ಯ ನಷ್ಟನೋವು ಎಂಬ ನರಕಗಳನ್ನು ನಾಶಗೊಳಿಸಿ ದರಿದ್ರ ಲಕ್ಷ್ಮಿಯನ್ನು ಓಡಿಸಿ ಹಳೆಕೊಳೆಗಳನ್ನು ತೆಗೆದೊಗೆದು ಮನ-ಮನೆ ಪರಿಶುದ್ಧಗೊಳಿಸಿ ಸುಖ ಸಂತೋಷ ನೆಮ್ಮದಿ ಬರಮಾಡಿಕೊಂಡು ಧನಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಮಾವಾಸ್ಯೆ ಮರುದಿನ ಕಾರ್ತಿಕ ಮಾಸದ ಪಾಡ್ಯಮಿಯಂದು ವಾಮನಾವತಾರಿ ವಿಷ್ಣುವಿನಿಂದ ವರಪಡೆದ ಬಲಿಚಕ್ರವರ್ತಿ ಆಸೆಯಂತೆ ಅಜ್ಞಾನ-ಅಹಂಕಾರದ ಅಂಧಕಾರ ಅಳಿಸಿ ಸುಜ್ಞಾನ-ಸದಾಚಾರವೆಂಬ ಬೆಳಕು ಮೂಡಿಸಲು ಪ್ರತಿಯೊಂದು ಮನೆಯ ಒಳಗೆ-ಹೊರಗೆ ಹಣತೆಗಳ ಪ್ರಕಾಶದ ಹಬ್ಬ ಕಣ್ಮನ ಸೂರೆಗೊಳ್ಳುತ್ತದೆ. ಈ ತೆರದಲ್ಲಿ ಪ್ರತಿಯೊಬ್ಬ ಮನುಷ್ಯನೂ ತನ್ನ ಕಳೆದ ವರ್ಷದ ದುಃಖದುಮ್ಮಾನ ಮಾಯವಾಗಿಸಿ ಮುಂಬರುವ ಹೊಸ ವರ್ಷದಲ್ಲಿ ಹರುಷದ ಹೊನಲು ಹರಿಸುವಂತೆ ದೇವರನ್ನು ಬೇಡುವ,  ದೀಪದಿಂದ ದೀಪ ಹಚ್ಚುವ ರೀತಿ ಒಬ್ಬರು ಮತ್ತೊಬ್ಬರಿಗೆ [ಜಾತಿ-ಮತ-ಧರ್ಮ-ವರ್ಣ ಭೇದ ತೊರೆದು] ಕೈಲಾದಷ್ಟು ಸಹಾಯ ಸಹಕಾರನೀಡಲು ಪ್ರತಿಜ್ಞೆ ಮಾಡುವ ಹಬ್ಬವೇ ದೀಪಾವಳಿ. ಒಳಿತು-ಕೆಡಕುಗಳ ಪರಿಧಿಯಲ್ಲಿ ವಿವೇಕಚಿತ್ತರಾಗಿ ಸಹಬಾಳ್ವೆ ನಡೆಸುವ ಬದಲು, ಶಬ್ಧಮಾಲಿನ್ಯ ವಾಯುಮಾಲಿನ್ಯ ಜಲಮಾಲಿನ್ಯ ಮುಂತಾದ ಪರಿಸರ ಹಾಳು ಮಾಡುವ ಕಾರ್ಯಗಳ ಜತೆಗೆ ವೃದ್ಧರ, ಮಕ್ಕಳ, ಮಹಿಳೆಯರ, ವಿಶೇಷವಾಗಿ ದುರ್ಬಲಹೃದಯದವರ/ರೋಗಿಗಳ ಸಾವಿಗೂ ಕಾರಣವಾಗುವ ಮಾರಕ ಕೆಲಸಗಳನ್ನು ಟನ್ ಗಟ್ಟ್ಟಲೆ ಪಟಾಕಿ ಸುಡುವ ಮೂಲಕ ಆ[ಅನಾ]ಚರಿಸಲಾಗುವುದು.  ವಿಕಾರದ ಅಕಾರ್ಯವನ್ನು ಅಹಂಕಾರದಿಂದ, ಡೌಲು-ಡಂಭಾಚಾರದಿಂದ ಯಾರನ್ನೊ ಮೆಚ್ಚಿಸಲು, ಯಾವುದನ್ನೊ ಬಹಿರಂಗಪಡಿಸಲು ಘನಂದಾರಿ ಕೈಂಕರ್ಯ ಕೈಗೊಳ್ಳುವರು!  ಇದು ಎಷ್ಟರ ಮಟ್ಟಿಗೆ ಸರಿ? ಯಾರು ಯಾರನ್ನು ಯಾವ ಕತ್ತಲೆಯಿಂದ ಯಾವ ಬೆಳಕಿನೆಡೆಗೆ ಕರೆದೊಯ್ದ ಅರ್ಥ ಬರುತ್ತದೆ?!  ಶ್ರೀಸಾಮಾನ್ಯನ ಜೀವ[ವಾ]ದ ಗಾಳಿ-ನೀರು-ಹಸಿರು ಪ್ರಕೃತಿಯೊಡನೆ ಚೆಲ್ಲಾಟವಾಡುತ್ತ ಎಲ್ಲರ ಸುಖ ಸಂತೋಷ ನೆಮ್ಮದಿ ಹಾಳುಗೆಡಹುವುದು ಯಾವ ನ್ಯಾಯ, ಯಾರ ಪುರುಷಾರ್ಥ? ಹೀಗೆಲ್ಲ ಮಾಡಲೇಬೇಕೆಂದು ಯಾವ ವೇದೋಪನಿಷತ್/ಧರ್ಮಗ್ರಂಥದಲ್ಲಿ ಬರೆಯಲಾಗಿದೆ?

ಮನೆ-ಮನ ಬೆಳಗುವ ಬೆಳಕಿನ ಹಬ್ಬ ದೀಪಾವಳಿ - Janaprathinidhi

   ಇತ್ತೀಚೆಗಂತೂ ಯುವಪೀಳಿಗೆಯು ಹತ್ತುಹಲವು ಅಡ್ಡದಾರಿ ಹಿಡಿದು ಬೆಳಕಿನಿಂದ ಕತ್ತಲೆಯೆಡೆಗೆ ಹೆಚ್ಚು ಸಾಗುತ್ತಿರುವುದು ಅತ್ಯಂತ ವಿಷಾದ. ಇಂಥ ದುರಂತಕ್ಕೆ ಕಾರಣವಾದ ಕೆಲವು ಉದಾ:-ಅತಿಯಾದ ಟಿವಿ/ಮೊಬೈಲ್ ಬಳಕೆಯಿಂದ ಯುವಕರಲ್ಲಿ ವ್ಯಸನತೆ, ಮಕ್ಕಳಲ್ಲಿ ಖಿನ್ನತೆ, ದಿನೇ ದಿನೇ ಹೆಚ್ಚಾಗುತ್ತಿರುವುದು?  ಹದಿವಯಸ್ಸಲ್ಲೆ ಧೂಮಪಾನ, ಮದ್ಯಪಾನ, ತಂಬಾಕುಸೇವನೆ, ಡ್ರಗ್ಸ್ ಮುಂತಾದ ಅನಿಷ್ಟ ದುಷ್ಟಚಟಕ್ಕೆ ಬಲಿಯಾಗಿ ಅಕಾಲ ಮರಣಕ್ಕೆ/ಆತ್ಮಹತ್ಯೆಗೆ ಶರಣಾಗುತ್ತಿರುವುದು! ಎಲ್ಲಕ್ಕಿಂತ ಮಿಗಿಲಾಗಿ ಭಯೋತ್ಪಾದಕ/ದೇಶದ್ರೋಹದ ಸಂಘ/ಸಂಸ್ಥೆ ಸೇರಿ ತರಬೇತಿ ಪಡೆದು ತನ್ನದೆ ದೇಶ ಭಾಷೆ ಸಂಸ್ಕೃತಿ ಪರಂಪರೆ ಬಂಧು ಬಳಗಕ್ಕೆ ತಾನೇ ಕಂಟಕನಾಗುವುದು? ಇಂಥ ದುಷ್ಕೃತ್ಯಗಳು ಯಾವ ವಿಧದಲ್ಲಿ ದೀಪದಿಂದ ದೀಪ ಬೆಳಗು ವಾಕ್ಯಕ್ಕೆ ಅನ್ವರ್ಥ ಆಗುತ್ತದೆ? 

ದೀಪಾವಳಿ ಎಂದರೆ ಕೇವಲ ದೀಪದ ಹಬ್ಬವಲ್ಲ. ಕತ್ತಲೆಯನ್ನು ದೂರವನ್ನು ಬೆಳಕನ್ನು ಹರಡುವ ಹಬ್ಬ  ದೀಪಾವಳಿ - Kannada News Now | DailyHunt Lite

 ಉತ್ತರ ಭಾರತದಲ್ಲಿ ದೀವಾಲಿ ಹೆಸರಲ್ಲಿ ರಾವಣ ಸಂಹಾರ ದಿನವನ್ನಾಗಿ ಆಚರಿಸುವ ಪದ್ಧತಿಯುಂಟು?!  ರಾವಣ ಒಬ್ಬನನ್ನೇ ಏಕೆ ಟಾರ್ಗೆಟ್ ಮಾಡಬೇಕು? ಹಾಗೆ ನೋಡಿದರೆ ರಾವಣನು ಅತಿಯಾದ ಮಾತೃಭಕ್ತಿ ಉಳ್ಳವನಾಗಿದ್ದ.  ತನ್ನ ಕುಟುಂಬದ ಕ್ಷೇಮವನ್ನು, ಪ್ರಜೆಗಳ ಯೋಗಕ್ಷೇಮವನ್ನು, ಕಾಪಾಡುವ ಸಮರ್ಥ ರಾಜ್ಯಭಾರದ ಉತ್ತಮ ಚಕ್ರವರ್ತಿಯೂ ಆಗಿದ್ದ. ಹಾಗೆ ನೋಡಿದರೆ, ದಶಕಂಠನಿಗಿಂತಲೂ ಕೆಟ್ಟ ಚಾರಿತ್ರ್ಯವುಳ್ಳ ಕಂಸ ಜರಾಸಂಧ ಶಿಶುಪಾಲ ಮುಂತಾದವರ ವಧೆಯನ್ನಾಗಲೀ ಅಥವಾ ತನ್ನನ್ನು ಮಾತ್ರ ಪೂಜಿಸುವಂತೆ ಮೂರು ಲೋಕಕ್ಕೂ ಕಂಟಕ ಪ್ರಾಯನಾಗಿದ್ದ ಹಿರಣ್ಯಾಕ್ಷ/ಹಿರಣ್ಯಕಶ್ಯಪರ ಪುತ್ಥಳಿಯನ್ನಾಗಲೀ ಸುಡುವ ಪದ್ಧತಿಯಾಗಲೀ ಜಾರಿಯಲ್ಲಿಲ್ಲ.  ವಸ್ತುಸ್ಥಿತಿ ಹೀಗಿರುವಾಗ ಕೇವಲ ರಾವಣನನ್ನೇ ಏಕೆ ಸುಟ್ಟು ಬೂದಿ ಮಾಡಬೇಕು?  ಅದೇನೇ ಇರಲಿ ಭಾರತೀಯರು ನಾವು ‘ಮಾನವ’ರಾಗಿ ಕೂಡಿ ಬಾಳೋಣ, ಎಲ್ಲರೂ ಒಟ್ಟಿಗೆ ಸಾಗೋಣ ಕತ್ತಲೆಯಿಂದ…ಬೆಳಕಿನೆಡೆಗೆ…!ಬನ್ನಿರಿ

       

ಕುಮಾರಕವಿ ಬಿ.ಎನ್.ನಟರಾಜ್[೯೦೩೬೯೭೬೪೭೧]

                    ಬೆಂಗಳೂರು-೫೬೦೦೭೨