ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸಾಮಿ ದೇವಾಲಯದ ಆವರಣದಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ ರವರ ಅಧ್ಯಕ್ಷತೆಯಲ್ಲಿ ಸಿಡಿಲು ಮಲ್ಲಿಕಾರ್ಜುನ ಬ್ರಹ್ಮ ರಥೋತ್ಸವದ ಪೂರ್ವ ಭಾವಿ ಸಭೆ ನಡೆಯಿತು.
ಹುಣಸೂರು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ ಮಾತನಾಡಿ ರಾಜ್ಯದಲ್ಲಿ ಕೋವಿಂಡ -19 ಸಾಂಕ್ರಮಿಕ ರೋಗ ಹಾಗೂ ಒಮೈಕ್ರಾನ್ ರೂಪಾಂತರ ವೈರಸ್ ಉಲ್ಬಣಗೊಳ್ಳುತ್ತಿರುವ ದರಿಂದ ಇರುವುದರಿಂದ ಸರ್ಕಾರವು ಜನಸಂದಣಿ ಸೇರುವಂಥ ಜಾತ್ರೆಗಳು, ಹಬ್ಬಗಳು, ಮೆರವಣಿಗೆಗಳನ್ನು, ನಡೆಸದಂತೆ ಆದೇಶಿಸಿದೆ. ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಉತ್ಸವವು ದೇವಾಲಯದ ಒಳ ಪ್ರಾಂಗಣದಲ್ಲಿ ಸರಳವಾಗಿ ಮತ್ತು ಸಂಪ್ರದಾಯಬದ್ಧವಾಗಿ ಸೀಮಿತ ಸಂಖ್ಯೆಯ ಭಕ್ತಾದಿಗಳ ಸಮ್ಮಖದಲ್ಲಿ ಆಚರಿಸಲಾಗುವುದು ಭಕ್ತಾದಿಗಳು ಸಹಕರಿಸಬೇಕು ಎಂದರು.ಭಕ್ತಾದಿಗಳು ಸಹಕರಿಸಬೇಕು ಎಂದರು .
ಬೆಟ್ಟದಪುರ ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ್ ಹಾಗೂ ಗ್ರಾಮದ ಮುಖಂಡರುಗಳು ಮಾತನಾಡಿ ಶ್ರೀ ಸಿಡಿಲು ಮಲ್ಲಿಕಾರ್ಜುನ ಬ್ರಹ್ಮ ರಥೋತ್ಸವ ಆಚರಿಸಲು ಅನುಮತಿ ನೀಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ತಿಳಿಸುತ್ತೇನೆ ಎಂದರು.
ಪ್ರಧಾನ ಅರ್ಚಕ ಸತೀಶ್ ಕಶ್ಯಪ್ ಮಾತನಾಡಿ ದಿನಾಂಕ 11 ರಂದು ಗಣಪತಿ ಪೂಜೆ ಪುಣ್ಯ ,12 ರಂದು ಮೂಲದೇವರ ಪ್ರಾರ್ಥನೆ, 13 ರಂದು ಗಜಾರೋಹಣ ಉತ್ಸವ ,14ರಂದು ಭೂತ ಉತ್ಸವ ,15ರಂದು ವೃಷಭ ರೋಹಣ ಉತ್ಸವ ,16ರಂದು ಅಶ್ವ ರೋಹಣ ಹಾಗೂ ಗಿರಿಜಾ ಕಲ್ಯಾಣ ಉತ್ಸವ ,17 ರಂದು ದೇವಾಲಯದ ಒಳ ಪ್ರಾಂಗಣದಲ್ಲಿ ದೇವರ ಉತ್ಸವ ,18 ರಂದು ಶಯನೋತ್ಸವ ,19 ರಂದು ತೆಪ್ಪೋತ್ಸವ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಸೌಮ್ಯಾ, ತಾಲ್ಲೂಕು ದಂಡಾಧಿಕಾರಿ ಚಂದ್ರಮೌಳಿ ,ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್, ಪಿರಿಯಾಪಟ್ಟಣ ಪೊಲೀಸ್ ವೃತ್ತ ನಿರೀಕ್ಷ ಪ್ರಕಾಶ್, ಬೆಟ್ಟದಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಾಶ್ ಎತ್ತಿಮನಿ,ಉಪ ತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಿಗ ಧನಂಜಯ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿವಾಕರ್, ವೈದ್ಯಾಧಿಕಾರಿ ಡಾ। ರಚನ್, ಗ್ರಾಮ ಪಂಚಾಯತಿ ಸದಸ್ಯರಾದ ಶಂಕರ್, ರಾಜಶೇಖರ್’, ರಜನಿಕಾಂತ್,ಈಶ್ವರಾಚಾರ್,ತಾಪಂ ಮಾಜಿ ಸದಸ್ಯ ಬಿ ವಿ ಅನಿತಾ ,ಗ್ರಾಮದ ಮುಖಂಡರಾದ ಪಟೇಲ್ ನಟೇಶ್, ಪ್ರಭಾಶಂಕರ್, ಮಲ್ಲೇಶ್, ರಮೇಶ್ , ರವಿಕುಮಾರ್ , ಸಮಾಜ ಸೇವಕ ನಮೋ ಮಲ್ಲೇಶ್ ,ಕೃಷ್ಣ ಪ್ರಸಾದ್ ಸೇರಿದಂತೆ ಮುಂತಾದವರು ಹಾಜರಿದ್ದರು.