ಕಾರವಾರ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರಪ್ರೇಮಿ, ಜನಪದ ಕಲಾವಿದ ಮಹಾದೇವ ವೇಳಿಪ (೯೦)
ಅಸ್ತಂಗತರಾಗಿದ್ದಾರೆ.

ಜೋಯಿಡಾ ತಾಲೂಕಿನ ಕಾರ್ಟೋಳಿ ಗ್ರಾಮದ ಮಹಾದೇವವೇಳಿಪ ವಯೋ ಸಹಜತೆಯ ಅನಾರೋಗ್ಯದಿಂದ ಇಂದುಕೊನೆಯುಸಿರೆಳೆದಿದ್ದಾರೆ. ಜನಪದ ಕಲೆ ಹಾಗೂ ಪರಿಸರರಕ್ಷಣೆಗೆ ನಿಂತಿದ್ದ ಹಾಗೂ ರಾಜ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆಭಾಜನರಾಗಿದ್ದ ಮಹಾದೇವ ವೇಳಿಪ ಈಗ ಕೇವಲ ನೆನಪು ಮಾತ್ರ.ಕಲಾವಿದ ಮಹಾದೇವ ವೇಳಿಪ ನೂರಾರು ಬಗೆಯ ಗೆಡ್ಡೆಗೆಣಸುಗಳನ್ನು ಉಳಿಸಿ ಬೆಳಸುವ ಜೊತೆಗೆ ಅರಣ್ಯ ಸಂರಕ್ಷಣೆಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿ ಪರಿಸರ ಪ್ರೇಮಿಯಾಗಿದ್ದರು.ಜನಪದ ಹಾಡುಗಳನ್ನು ಸಾವಿರ ಲೆಕ್ಕದಲ್ಲಿ ನಿರಂತರ ಹಾಡುತಿದ್ದ ಮಹಾದೇವ ವೇಳಿಪ ಅವರ ಸಾಧನೆ ಅಪಾರ.