ರಾಗಿ ಸ್ವಚ್ಛ (ಸೆಲ್ಲಿಂಗ್) ಮಾಡುವ ಯಂತ್ರಕ್ಕೆ ವ್ಯಕ್ತಿಯೋರ್ವ ಸಿಕ್ಕಿ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬಿಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿಲ್ಲಹಳ್ಳಿ ಗ್ರಾಮದ ಬಸಪ್ಪನವರ ಮಗ ರಾಜು 35 ವರ್ಷ ಭಾನುವಾರ ರಾತ್ರಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ರಾಗಿಯನ್ನು ಸ್ವಚ್ಛಗೊಳಿಸಲು ಪಿರಿಯಾಪಟ್ಟಣದ ಮುರುರ್ಗೇಶ್
ಎಂಬುವರಿಂದ ರಾಗಿ ಸೆಲ್ಲಿಂಗ್ ಯಂತ್ರವನ್ನು ತರಿಸಿ ಸ್ವಚ್ಛಗೊಳಿಸುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಯಂತ್ರದ ಒಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ .
ಯಂತ್ರದ ಮಾಲಿಕ ಮುರುಗೇಶ್ ರವರ ಬೇಜವಾಬ್ದಾರಿತನ ಹಾಗೂ ಸರಿಯಾದ ಸುರಕ್ಷತೆ ಅನುಸರಿಸದೆ ಇರುವುದೇ ಈ ಘಟನೆಗೆ ಕಾರಣ ಎಂದು ಸಹೋದರ ರಮೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿ ಮುರುಗೇಶ್ ಮೇಲೆ ಪಿರಿಯಾಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.