**ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ :ದಾಸ ಶ್ರೇಷ್ಠ ಕನಕದಾಸರು ಮನುಕುಲದ ಬೆಳಕು ಉಪಪ್ರಾಂಶುಪಾಲ ಬಿ
ರೇವಣ್ಣ ಅಭಿಮತ * *

ಬೆಟ್ಟದಪುರ :ಕನಕದಾಸರ ಕೀರ್ತನೆಗಳ ಸಾರ ನಮ್ಮ ಬದುಕಿನ ಆದರ್ಶವಾಗಬೇಕು ಎಂದು ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಬಿ.ಎಸ್ ರೇವಣ್ಣನವರು ತಿಳಿಸಿದರು. ಅವರು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಸರಳವಾಗಿ ಆಯೋಜಿಸಿದ್ದ ಕನಕ ಜಯಂತಿ ಆಚರಿಸಿ ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾದ ಕನಕದಾಸರು ದಾಸಶ್ರೇಷ್ಠರಾಗಿ,ತತ್ವಜ್ಞಾನಿಯಾಗಿ,ಮಾನವತಾವಾದಿಯಾಗಿ,ಕವಿಯಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರಾದವರು.ಇವರ ಕೀರ್ತನೆಗಳಲ್ಲಿ ಆತ್ಮನಿವೇದನೆ,ಮೌಢ್ಯ ವಿರೋಧಿ ಭಾವನೆ,ಸಮಾನತೆಯ ಆಶೋತ್ತರಗಳು,ಮಾನವೀಯ ಮೌಲ್ಯಗಳು, ಭಕ್ತಿಯ ಪರಾಕಾಷ್ಠೆ ಮತ್ತು ಸುಖೀ ಜೀವನದ ಅಂಶಗಳು ಮಡುಗಟ್ಟಿವೆ.ಕನಕದಾಸರು ಮಾದರಿ ಬದುಕಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್.ಎಸ್ ನಾರಾಯಣಗೌಡ, ಮೋಹನ್ ಕುಮಾರ್,ಆಲನಹಳ್ಳಿ ಕೆಂಪರಾಜು,ಗೊರಳ್ಳಿ ಜಗದೀಶ್, ಸೋಮಯ್ಯನಾಯ್ಕ್,ಅಮಿತಾ,ಜ್ಯೋತಿ,ಇಂದ್ರಮ್ಮ ,ಶಶಿಕಲಾ ಮುಂತಾದವರು ಹಾಜರಿದ್ದರು.

By admin