ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಹಾಸ್ಪಿಟಲ್ ವತಿಯಿಂದ ನ್ಯೂ ಡಯಾ ಕೇರ್ ಸೆಂಟರ್/ನವಾಯು ಕೇರ್ ಸೆಂಟರ್, ಹಾರ್ಟ್ ಆರ್ಗನೈಜೇಷನ್, ಮೈಸೂರು ವಿವಿ, ದಿ ಟೈಮ್ಸ್ ಕ್ರಿಯೇಶನ್ ಮೀಡಿಯಾ ಹಾಗೂ ರೆಡ್ ಎಫ್ ಎಂ ನ ಸಂಯುಕ್ತಾಶ್ರಯದಲ್ಲಿ ಫೆ 19 ರಂದು ಬೆ. 7 ಗಂಟೆಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೈಕ್ಲೋಥಾನ್ ಜಾಥವನ್ನು ಆಯೋಜಿಸಲಾಗಿತ್ತು.ಮೈಸೂರಿನ ಚಾಮರಾಜ ವೃತ್ತದ ಬಳಿಯ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಸೈಕ್ಲೋಥಾನ್ ಗೆ ರಾಜ ವಂಶಸ್ಥರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಚಾಲನೆ ನೀಡಿದರು.

ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ.ಅವಿನಾಶ್ ರವರು ಕ್ಯಾನ್ಸರ್ ನ ಕುರಿತು ಮಾತನಾಡುತ್ತಾ ಭಾರತವೊಂದರಲ್ಲೇ ಪ್ರತಿವರ್ಷ ಸುಮಾರು 12 ಲಕ್ಷಕ್ಕೂ ಹೆಚ್ಚಿನ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ, ಶೇಕಡ 30ರಷ್ಟು ಕ್ಯಾನ್ಸರ್ ಗಳನ್ನು ಜೀವನ ವಿಧಾನಗಳನ್ನು ಸರಿಪಡಿಸಿಕೊಳ್ಳುವುದರ ಮೂಲಕ ತಡೆಯಬಹುದೆಂದರು. ಮೈಸೂರು ವಿವಿಯ ಪ್ರೊ.ಶಿವಪ್ಪ ಹಾಗೂ ಜಿಲ್ಲಾ ಆರೋಗ್ಯಧಿಕಾರಿ ಡಾ. ಪ್ರಸಾದ್ ಮಾತನಾಡಿ ಜೀವನ ಶೈಲಿಯಬದಲಾವಣೆಗೆ ಸಲಹೆ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರತಿಯೊಂದು ಕುಟುಂಬಕ್ಕೂ ಪರಿಚಯವಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳಿಂದ ಅದನ್ನು ದೂರಮಾಡುವುದು ಉತ್ತಮವೆನ್ನುತ್ತಾ, ಇಂತಹ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಎಂದೆಂದಿಗೂ ತಮ್ಮ ಸಹಕಾರವಿದೆ ಎಂದರು.

ವೇದಿಕೆಯಲ್ಲಿನ್ಯೂ ಡಯಾ ಕೇರ್ ಸೆಂಟರ್ ನ ಡಾ.ರೇಣುಕಾಪ್ರಸಾದ್. ಎ ಆರ್,ಕಾರ್ಪೊರೇಷನ್ ಆರೋಗ್ಯಾಧಿಕಾರಿ ಡಾಕ್ಟರ್ ನಾಗರಾಜ್ ಟೈಮ್ ಕ್ರಿಯೇಷನ್ ನಿರ್ದೇಶಕರಾದ ಹರೀಶ್ ಎಂಎಸ್, ರೇಡಿಯಂಟ್ ಆಸ್ಪತ್ರೆಯ ಮುಖ್ಯ ವ್ಯವಸ್ಥಾಪಕರು ಮಂಜುನಾಥ್, ಆಸ್ಪತ್ರೆ ಕ್ಯಾನ್ಸರ್ ತಜ್ಞರು ಉಪಸ್ಥಿತರಿದ್ದರು. ಸೈಕ್ಲೋಥಾನ್, ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭವಾಗಿ ಅಲ್ಬರ್ಟ್ ವಿಕ್ಟರ್ ರಸ್ತೆ, ಹಾರ್ಡಿಂಗ್ ವೃತ್ತ ,ಬೆಂಗಳೂರು ನೀಲಗಿರಿ ರಸ್ತೆ, ನೆಹರು ವೃತ್ತ,ಇರ್ವಿನ್ ರಸ್ತೆ ,ಅಶೋಕ ರಸ್ತೆಯ ಮೂಲಕ ಸಾಗಿ ಚಾಮರಾಜ ವೃತ್ತದಲ್ಲಿ ಕೊನೆಗೊಂಡಿತು. ಕಾರ್ಯಕ್ರಮದಲ್ಲಿ 450ಕ್ಕೂ ಹೆಚ್ಚಿನ ಮಂದಿ ಪಾಲ್ಗೊಂಡು , ಕಾರ್ಯಕ್ರಮ ಯಶಸ್ವಿಯಾಯಿತು.