– ಅಗರಬತ್ತಿ ತಯಾರಿಕಾ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಉತ್ಪಾದಕ ಸಂಸ್ಥೆಯಾಗಿರುವ ಎನ್ ರಂಗರಾವ್ ಅಂಡ್ ಸನ್ಸ್(ಎನ್‍ಆರ್‍ಆರ್‍ಎಸ್) ಅವರ ಬ್ರಾಂಡ್ ಆದ ಸೈಕಲ್‍ಪ್ಯೂರ್ ಅಗರಬತ್ತಿ ಈಗ ತನ್ನ ರೀತಿಯ ಅನನ್ಯವಾದ ಮತ್ತು ಮೊಟ್ಟಮೊದಲ ಆನ್‍ಲೈನ್ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಲಿದೆ. ಈ ಕಾರ್ಯಕ್ರಮವನ್ನು ಜುಲೈ 24, 2021ರಂದು ಶುಕ್ರವಾರ ಬೆಳಿಗ್ಗೆ 8-00 ಗಂಟೆಗೆ ನಡೆಸಲು ನಿಗದಿಪಡಿಸಲಾಗಿದೆ.

 

ಇದು ಆಷಾಢಮಾಸದ ಹುಣ್ಣಿಮೆಯ(ಆಷಾಢ ಪೂರ್ಣಿಮಾ) ದಿನವಾಗಿರುತ್ತದೆ. ಪ್ಯೂರ್‍ಪ್ರೇಯರ್ ಫೇಸ್‍ಬುಕ್ ಪೇಜ್‍ನಲ್ಲಿ ಈ ಪೂಜಾ ಕಾರ್ಯಕ್ರಮ ಲೈವ್ ಆಗಿ ಪ್ರಸಾರವಾಗಲಿದೆ. ಆನ್‍ಲೈನ್ ಪೂಜೆಯ ಈ ಮಾದರಿ ಕಾರ್ಯಕ್ರಮಕ್ಕೆ ಭಕ್ತಾದಿಗಳನ್ನು ಆಹ್ವಾನಿಸಲು ಬ್ರಾಂಡ್ ಇಚ್ಛಿಸುತ್ತದೆ. ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಸಾಮಾನ್ಯವಾಗಿ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುತ್ತದೆ.

ಶ್ರೀ ಸತ್ಯನಾರಾಯಣ ಸ್ವಾಮಿ ರೂಪದಲ್ಲಿರುವ ಮಹಾವಿಷ್ಣುವಿಗೆ ಸಂಕಲ್ಪ ಮಾಡಿಕೊಂಡು ಶ್ರೀ ಸತ್ಯನಾರಾಯಣ ಪೂಜಾ ವ್ರತವನ್ನು ನಡೆಸಲಾಗುತ್ತದೆ. ತಮ್ಮ ಎಲ್ಲಾ ಪರಿಶ್ರಮಗಳಲ್ಲಿ ಜಯ ಅಥವಾ ಯಶಸ್ಸಿಗೆ ದಾರಿ ಮಾಡಿಕೊಡಲು ಮತ್ತು ನಕಾರಾತ್ಮಕ ಶಕ್ತಿಗಳು ಹಾಗೂ ಎಲ್ಲಾ ಅಡೆತಡೆಗಳನ್ನು ದೂರವಾಗಿಸುವಲ್ಲಿ ಪರಮಾತ್ಮನ ಅನುಗ್ರಹವನ್ನು ಭಕ್ತಾದಿಗಳು ಕೋರುತ್ತಾರೆ. ತೊಂದರೆ ಇಲ್ಲದೆ ಮತ್ತು ಶ್ರೇಷ್ಟ ರೀತಿಯಲ್ಲಿ ಪೂಜೆ ನಡೆಸಲು ಬ್ರಾಂಡ್ ಬಳಸಲು ಸಿದ್ಧವಾಗಿರುವ ರೆಡಿ-ಟು-ಯೂಸ್ ಸತ್ಯನಾರಾಯಣ್ ಕಿಟ್ ಅನ್ನು ಪರಿಚಯಿಸಿದೆ. ಇದರಲ್ಲಿ ಅಧಿಕೃತ ರೀತಿಯಲ್ಲಿ ಪೂಜೆಯನ್ನು ನಡೆಸಲು ಎಲ್ಲಾ ಅಗತ್ಯ ವಸ್ತುಗಳು ಇರುತ್ತವೆ. ಬ್ರಾಂಡ್ ಈ ಕಿಟ್ ಅನ್ನು ಖರೀದಿಸಿ ಆನ್‍ಲೈನ್‍ನಲ್ಲಿ ಪೂಜೆ ಕಾರ್ಯಕ್ರಮದಲ್ಲಿ ಪುರೋಹಿತರೊಂದಿಗೆ ಭಾಗವಹಿಸಲು ಅವಕಾಶವನ್ನು ರೂ. 599/-ಗಳಿಗೆ ಸಾದರಪಡಿಸುತ್ತಿದೆ.

ವೈದಿಕ ಪರಂಪರೆಯ ಸಂಪೂರ್ಣ ಶ್ರೀ ಸತ್ಯನಾರಾಯಣ ಪೂಜಾ ಕಿಟ್ ಎಲ್ಲಾ ಅಗತ್ಯ ವಸ್ತುಗಳು ಮತ್ತು ಮಹಾವಿಷ್ಣು ಹಾಗೂ ಮಹಾಲಕ್ಷ್ಮೀಯ ವಿಗ್ರಹಗಳನ್ನು ಹೊಂದಿದ್ದು, ಇವು ಪೂಜೆಯ ಉದ್ದೇಶವನ್ನು ಸಂಪೂರ್ಣಗೊಳಿಸುತ್ತವೆ.
ಆನ್‍ಲೈನ್ ಪೂಜೆ ಕುರಿತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ ಅವರು ಮಾತನಾಡಿ, “ಸಮಯದೊಂದಿಗೆ ಆಧುನಿಕ ರೀತಿಯಲ್ಲಿ ನಮ್ಮ ಸಂಪ್ರದಾಯವನ್ನು ಅನುಸರಿಸುವಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಈ ಸತ್ಯನಾರಾಯಣ ಪೂಜೆಯ ಆತಿಥ್ಯವನ್ನು ನಾವು ಮೊದಲ ಬಾರಿಗೆ ಆನ್‍ಲೈನ್‍ನಲ್ಲಿ ನಡೆಸುತ್ತಿದ್ದೇವೆ. ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ಸೇರಿಕೊಂಡು ಮಹಾವಿಷ್ಣುವಿನ ಅನುಗ್ರಹ ಮತ್ತು ಕೃಪೆಗೆ ಪಾತ್ರರಾಗಬೇಕೆಂದು ನಾವು ಇಚ್ಛಿಸುತ್ತೇವೆ. ಈ ಕಠಿಣ ಸಮಯದಲ್ಲಿ ಎಲ್ಲರೂ ಆರೋಗ್ಯವಂತರಾಗಿ ದೃಢಕಾಯರಾಗಿ ಇರಬೇಕೆಂದು ನಾವು ಪ್ರಾರ್ಥಿಸುತ್ತಿದ್ದೇವೆ’’ ಎಂದರು.
`

`ಆಚರಣೆಗಳನ್ನು ಉಳಿಸಿಕೊಳ್ಳಲು ಇಚ್ಛಿಸುವ ಆದರೆ, ಶ್ರೇಷ್ಠ ರೀತಿಯಲ್ಲಿ ಪೂಜೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯದೆ ಇರುವ ಸಾಂಪ್ರದಾಯಿಕ ಮನೋಭಾವದ ಜನರ ಅನುಕೂಲಕ್ಕಾಗಿ ವಿಶೇಷ ಪೂಜಾ ಪ್ಯಾಕ್‍ಗಳನ್ನು ನಾವು ನಿರ್ದಿಷ್ಟವಾಗಿ ರೂಪಿಸಿದ್ದೇವೆ. ನಮ್ಮ ಗುಣಮಟ್ಟದ ಪೂಜಾ ಉತ್ಪನ್ನಗಳು ಮತ್ತು ನಮ್ಮ ಸೇವೆಗಳ ಮೂಲಕ ನಮ್ಮ ಗ್ರಾಹಕರ ಅನುಭವವನ್ನು ವಿಸ್ತರಿಸುವಲ್ಲಿ ನಾವು ನಂಬಿಕೆ ಹೊಂದಿದ್ದೇವೆ’’ ಎಂದರು.

By admin