ಮೈಸೂರು: ೪ ವಿಶ್ವಕ್ಯಾನ್ಸರ್ ದಿನದ ಪ್ರಯುಕ್ತ ಸುವರ್ಣಬೆಳಕು ಫೌಂಡೇಷನ್ ವತಿಯಿಂದ ಸೈಕ್‌ಲ್ ಜಾಥ ನಡೆಯಿತು.

ಮುಂಜಾನೆ ಸಮಯ ಸಾರ್ವಜನಿಕರು ಕ್ರೀಡಾಪಟುಗಳು ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ಸೈಕ್‌ಲ್ ಜಾಥ ಮಾಡುವ ಮೂಲಕ ಜಾಗೃತಿ ಮೂಡಿಸಿ, ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯಿತು.

ಮೈಸೂರು ವಿಶ್ವವಿದ್ಯಾಲಯದ ಓವೆಲ್ಸ್ ಮೈದಾನದಿಂದ ಆರಂಭಗೊಂಡ ಸೈಕಲ್ ಜಾಥ ಹುಣಸೂರು ರಸ್ತೆ ಮಾರ್ಗವಾಗಿ ಸಾಗಿ, ಮೆಟ್ರೋಪಾಲ್ ಸರ್ಕ್‌ಲ್ ನಲ್ಲಿ ಎಡಕ್ಕೆ ತಿರುಗಿ. ಧನ್ವಂತ್ರ್ಳಿ ರಸ್ತೆಯ ಮಾರ್ಗವಾಗಿ ಪಶುವೈದ್ಯಕೀಯ ಆಸ್ಪತ್ರೆಯ ಬಲಗಡೆ ತಿರುಗಿ ಅರಸು ರಸ್ತೆಯ ಮುಖಾಂತರ ಬಂದು ಓವೆಲ್ಸ್ ಮೈದಾನದಲ್ಲೇ ಅಂತ್ಯಗೊಂಡಿತು.

ಭಯಾನಕ ಕ್ಯಾನ್ಸರ್ ರೋಗದಿಂದ ಚೇತರಿಕೆ ಕಂಡು ರಾಜ್ಯಾದ್ಯಂತ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುತ್ತಿರುವ ರಮೇಶ್ ಬಿಳಿಕೆರೆ ಅವರು ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿದ್ದರು. ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಯಾವುದೇ ರೋಗಗಳಿಗೆ ಮಾನಸಿಕ ಧೈರ್ಯವೇ ಅತ್ಯಂತ ಪ್ರಬಲವಾದ ಚಿಕಿತ್ಸೆ ಎಂದರು. ಯೋಗ, ವ್ಯಾಯಾಮ, ಒಳ್ಳೆಯ ಹವ್ಯಾಸಗಳು ನಮ್ಮನ್ನು ಸುಧಾರಿಸುತ್ತವೆ ಎಂದರು.
ಸುವರ್ಣಬೆಳಕು ಫೌಂಡೇಷನ್ ಅಧ್ಯಕ್ಷ ಮಹೇಶ್ ನಾಯಕ್, ರವಿ ಭಗೀರಥ್, ಮಂಜುನಾಥ್, ಚಿ.ಮ.ಬಿ.ಆರ್ ಪ್ರಭುಶಂಕರ್, ರವಿ.ಟಿ.ಎಸ್, ದೈಹಿಕ ಶಿ.ವಿಭಾಗ ಮೈ.ವಿ.ವಿ. ಅಕ್ಷಯ ಕ್ರೀಡಾಪಟು, ಡಾ.ಪ್ರಭುಶಂಕರ್, ಮೈಸೂರು ಮೆಡಿಕಲ್ ಸಿಸ್ಟಮ್.ಶ್ರೀಕಾಂತ್, ಭಾಸ್ಕರ್, ಯೋಗ ಶಿಕ್ಷಕರು ಅಕ್ಷಯ,ತೇಜಸ್, ಸಂದೇಶ್, ರಾಕೇಶ, ಸೃಷ್ಟಿ, ಪವನ್, ಮನೋಜ್. ಅರುಣ್,ಸಮರ್ಥ್, ಯತೀಶ್,ಸೇರಿದಂತೆ ಇತರರು ಹಾಜರಿದ್ದರು.