ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮುಖ್ಯ ಮಂತ್ರಿ ಯಡಿಯೂರಪ್ಪ ರವರನ್ನು ಅಸಮರ್ಥ ಎಂದು ಹೇಳಿರುವುದು ಖಂಡನೀಯ ಇದು ವಿರೋಧ ಪಕ್ಷ ನಾಯಕರಿಗೆ ಗೌರವ ತರುವಂತಹದ್ದಲ್ಲಾ ಎಂದು ಸಿಂಡಿಕೇಟ್ ಸದಸ್ಯರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಬಿ ಜೆ ಪಿ ಜಿಲ್ಲಾ ಮೈಸೂರು ಗ್ರಾಮಾಂತರ ಜಿಲ್ಲೆ ವಕ್ತಾರರು ಡಾ.ಕೆ .ವಸಂತ ಕುಮಾರ್ ತಿಳಿಸಿದರು.
.
ಕಾಂಗ್ರೆಸ್ ದಿನದಿಂದ ದಿನಕ್ಕೆ ಜನರ ವಿಶ್ವಾಸವನ್ನು ಕಳೆದು ಕೋಳ್ಳುತ್ತಿರುವದರಿಂದ ಹತಾಷೆ ಯಿಂದ ವಿರೋಧ ಪಕ್ಷದ ನಾಯಕರು ಈ ರೀತಿಯ ಬೇಜಾವಬ್ದಾರಿ ಕಾಂಗ್ರೆಸ್ ಪಕ್ಷದ ರಾಜಕೀಯ ಅಸ್ಥಿರತೆಯನ್ನು ಎತ್ತಿ ತೋರಿಸುತ್ತದೆ, ವಿರೋಧ ಪಕ್ಷದ ನಾಯಕರಿಗೆ ಶೋಭೆ ತರುವಂತಹದಲ್ಲ, ವಿರೋಧ ಪಕ್ಷದ ನಾಯಕರೆ ಯಡಿಯೂರಪ್ಪ ರವರ ಸಾಮಾರ್ಥ್ಯವನ್ನು ಇಡಿ ರಾಜ್ಯದ ಜನ ಹಾಗೂ ದೇಶದ ಜನ ನೋಡಿದ್ದಾರೆ ಈ ರಾಜ್ಯದಲ್ಲಿ ನುಡಿದಂತೆ ನಡೆಯುವ ರಾಜಕಾರಣಿ ಯಾರಾದರು ಇದ್ದರೆ ಅದು ಯಡಿಯೂರಪ್ಪ ರವರು. ತಾವು ಅವರನ್ನು ಅಸಮರ್ಥರು ಎಂದು ಹೇಳುತ್ತಿರಿ, ತಾವು ಮುಖ್ಯ ಮಂತ್ರಿ ಇದ್ದಾಗ ವಿಧಾನ ಸಭೆ ಚುನಾವಣಾಯನ್ನು ನಿಮ್ಮ ನೇತೃತ್ವದಲ್ಲಿ ಮಾಡಿದ್ದೀರಿ ತಾವು ಗೆಲ್ಲಿಸಿದ ಶಾಸಕರು ಎಷ್ಟು, ಯಡಿಯೂರಪ್ಪ ರವರು ಗೆಲ್ಲಿಸಿದ ಶಾಸಕರ ಸಂಖ್ಯೆ ಎಷ್ಟು, ತಮ್ಮ ನೇತೃತ್ವದಲ್ಲಿ ಪಾರ್ಲಿಮೆಂಟ್ ಚುನಾವಣಾ ನಡೆದ ಸಂದರ್ಭದಲ್ಲಿ ತಾವು ಗೆಲ್ಲಿಸಿದ ಸಂಸದರು ಒಂದು ಯಡಿಯೂರಪ್ಪ ರವರು ಗೆಲ್ಲಿಸಿದ ಸಂಸದರು ಇಪ್ಪಾತ್ತಾರು, ನಿಮ್ಮ ನೇತೃತ್ವದಲ್ಲಿ ನಡೆದ ಬೆಂಗಳೂರು ಬಿ ಬಿ ಎಂ ಪಿ ಚುನಾವಣೆಯಲ್ಲಿ ನೀವು ಗೆಲ್ಲಿಸಿದ ಸಂಖ್ಯೆ ಎಷ್ಟು ಯಡಿಯೂರಪ್ಪ ಗೆಲ್ಲಿಸಿದ ಸಂಖ್ಯೆ ಎಷ್ಟು ಎಂಬುದೆ ಯಡಿಯೂರಪ್ಪ ರವರ ಸಾಮಾರ್ಥ್ಯವನ್ನು ಸಾಬಿತು ಮಾಡಿದೆ.
ಇತ್ತಿಚೆಗೆ ನಡೆದ ಉಪ ಚುನಾವಣೆಗಳಲ್ಲಿ ಯಡಿಯೂರಪ್ಪ ರವರು ಭಾರತೀಯ ಜನತಾ ಪಕ್ಷದ ವರ್ಚಸ್ಸು ಎಷ್ಟು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ,ಇದು ರಾಜ್ಯದ ಜನತೆ ಮತದಾರರು ಯಡಿಯೂರಪ್ಪ ರವರ ಸಾಮಾರ್ಥ್ಯ ಹಾಗೂ ಕಾರ್ಯ ವೈಖರಿಯನ್ನು ನೋಡಿ ಅರ್ಶಿವಾದವನ್ನು ಮಾಡಿರುವುದು. ಯಡಿಯೂರಪ್ಪ ರವರು ಮುಖ್ಯ ಮಂತ್ರಿ ಆದ ಸಂದರ್ಭದಲ್ಲಿ ಉಂಟಾದ ಉತ್ತರ ಕರ್ನಾಟಕ ದ ನೆರೆ ಸಂದರ್ಭದಲ್ಲಿ ಜನರಿಗೆ ದೈರ್ಯ ತುಂಬಿ ಅವರು ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಪರಿಹಾರ ಒದಗಿಸಿ ಕೊಡುವ ಮೂಲಕ ಜನ ಜಾನುವಾರು ಗಳ ಪ್ರಾಣ ಹಾನಿಯನ್ನು ತಡೆಯುವ ಕೆಲಸ ನಿರ್ವಹಿಸಿದ್ದಾರೆ ಹಾಗೆಯೇ ರಾಜ್ಯದಲ್ಲಿ ಕೋವಿಡ್ ಮಹಾಮಾರಿಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್ಥಿಕ ಸಂಕಷ್ಟಗಳು ಇದ್ದಾಂತಹ ಸಂದರ್ಭದಲ್ಲಿಯೂ ಕೂಡಾ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಸ್ವತಃ ಕರೋನ ಮಾರಿಗೆ ತುತ್ತಾದರು ಕೂಡಾ ಎದೆಗುಂದದೆ ಸಕ್ರಿಯವಾಗಿ ರಾಜ್ಯದಾದ್ಯಂತ ಪ್ರವಾಸವನ್ನು ಮಡಿದ್ದಾರೆ ಈ ಸಂದರ್ಭಗಳಲ್ಲಿ ನೇಕರಾರು ,ಬಡಗಿಳು ,ವರ್ತಕರು,ರೈತರು ,ಸಣ್ಣ ಸಣ್ಣ ವ್ಯಾಪಾರಿಗಳು, ಚಾಲಕರುಗಳು ,ಅಸಂಘಟಿತ ಕಾರ್ಮಿಕರು, ಉದ್ಯಮಿಗಳು ,ಸರ್ಕಾರಿ ನೌಕರರು ಸೇರಿದಂತೆ ಎಲ್ಲರ ಕಷ್ಟ ಗಳಿಗೆ ಸ್ಪಂದಿಸಿ ಪರಿಹಾರ ವನ್ನು ಒದಗಿಸಿ ಕೊಟ್ಟಿರುವ ಯಡಿಯೂರಪ್ಪ ರವರನ್ನು ಅವರ ಆಡಳಿತವನ್ನು ಅಸಮರ್ಥ ಎಂದು ಟೀಕಿಸುವ ಕಾರ್ಯ ವನ್ನು ತಾವು ಮಾಡುತ್ತಿರುವುದು ರಾಜಾಕಾರಣದ ಅಪಹಾಸ್ಯ ,ತಾವು ವಿರೋಧ ಪಕ್ಷದ ನಾಯಕರಾಗಿ ಜವಬ್ಬಾರಿಯುತ ಸರ್ಕಾರಕ್ಕೆ ಸಹಕಾರ ಮಾರ್ಗದರ್ಶನ ಮಾಡದೆ ಸರ್ಕಾರ ಮತ್ತು ಯಡಿಯೂರಪ್ಪ ವಿರುದ್ದ ಬರೀ ಅಂತೆ ಕಂತೆ ಗಳ ಬಾಲಿಷ ಹೇಳಿಕೆಗಳನ್ನು ನೀಡುತ್ತಿರುವುದು ವಿರೋಧ ಪಕ್ಷದ ನಾಯಕರ ಘನತೆಗೆ ಕುಂದುಂಟು ಮಾಡುತ್ತಿದೆ ..ಜನರು ಕರೋನ ಸಂಕಷ್ಟದಲ್ಲಿದ್ದಾಗ ಜನರ ಜೋತೆಗೆ ಸೇರುವ ಅವರ ಸಮಸ್ಯೆಯನ್ನು ಆಲಿಸುವಂತಹ ಕೆಲಸವನ್ನು ವಿರೋಧ ಪಕ್ಷವಾಗಿ ಕಾಂಗ್ರೆಸ್ ಮಾಡಲಿಲ್ಲ .ಜನಪರ ಆಡಳಿತವನ್ನು ಸರ್ವ ಸಮಾಜಕ್ಕು ನೀಡುತ್ತಿರುವ ಬಿ ಎಸ್ ಯಡಿಯೂರಪ್ಪ ರವರ ವಿರುದ್ದ ಈ ರೀತಿಯ ಹೇಳಿಕೆ ಕೊಡುವುದನ್ನು ತಾವು ನಿಲ್ಲಿಸಿ ಸರ್ಕಾರಕ್ಕೆ ಮಾರ್ಗದರ್ಶನ ಸಲಹೆ ಸೂಚನೆಗಳನ್ನು ಕೊಡುವ ಮೂಲಕ ರಾಜ್ಯದ ಅಭಿವೃದ್ಧಿ ಗೆ ಸಹಕರಿಸಿ ಎಂದು ಸಿಂಡಿಕೇಟ್ ಸದಸ್ಯರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಬಿ ಜೆ ಪಿ ಜಿಲ್ಲಾ ಮೈಸೂರು ಗ್ರಾಮಾಂತರ ಜಿಲ್ಲೆ ವಕ್ತಾರರು ಡಾ.ಕೆ .ವಸಂತ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.