ಮೈಸೂರು, ಡಿಸೆಂಬರ್ : ಮೈಸೂರು ನಗರ ಪೊಲೀಸ್ ಘಟಕದಿಂದ ಸೋಮವಾರ ಪೊಲೀಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಅಪರಾಧ ತಡೆ ಮಾಸಾಚರಣೆ ಸಭೆಯನ್ನು ನಡೆಸಿದೆ.
ಡಿಸೆಂಬರ್ ಮಾಹೆಯಲ್ಲಿ “ಅಪರಾಧ ತಡೆ ಮಾಸಾಚರಣೆ ಸಭೆಯಲ್ಲಿ ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ರವರು ಭಾಗವಹಿಸಿ, ಸಭೆಯಲ್ಲಿ ಅಪರಾಧ ತಡೆ ಮಾಸಾಚರಣೆ ಸಂಬಂಧ ಕೈಗೊಳ್ಳಬೇಕಾದ ಕರ್ತವ್ಯಗಳ ಬಗ್ಗೆ ನಗರದ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಠಾಣಾ ದಾಖಲಾತಿಗಳನ್ನು ಅಪ್‍ಡೇಟ್, ಸ್ವತ್ತು ಕಳುವುಗಳ ನಿಯಂತ್ರಣ ಮತ್ತು ಪ್ರಕರಣಗಳ ಪತ್ತೆ, ಮಾನವ ಕಳ್ಳಸಾಗಣೆ ಮತ್ತು ಕಾಣೆ ಪ್ರಕರಣಗಳನ್ನು ಪತ್ತೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಮತ್ತು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಳ್ಳುವುದು, ಮಾಧಕ ವಸ್ತುಗಳ ಸಾಗಾಣಿಕೆ, ಮಾರಾಟ ತಡೆಗಟ್ಟುವುದು ಮತ್ತು ಮಾಧಕ ವಸ್ತುಗಳ ಬಳಕೆಯ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಪ್ರಚಾರ ಕಾರ್ಯಗಳು, ಪೊಲೀಸ್ ಠಾಣೆಗಳಲ್ಲಿ ಅಮಾನತ್ತು ಪಡಿಸಿಕೊಂಡಿರುವ ವಾಹನಗಳ ವಿಲೇವಾರಿ ಕುರಿತಂತೆ ಹೆಚ್ಚು ಗಮನಹರಿಸುವಂತೆ ಸೂಚನೆಗಳನ್ನು ಸಭೆಯಲ್ಲಿ ನೀಡಲಾಯಿತು.
ಮೇಲ್ಕಂಡಂತೆ ಕ್ರಮ ವಹಿಸುವ ಮೂಲಕ ನಗರದಲ್ಲಿ ಅಪರಾಧಗಳ ನಿಯಂತ್ರಣ, ಪ್ರಕರಣಗಳ ಪತ್ತೆ ಮತ್ತು ಸಾರ್ವಜನಿಕರಿಗೆ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಡಿಸೆಂಬರ್ ಮಾಹೆಯಲ್ಲಿ ಅಪರಾಧ ಮಾಸಾಚರಣೆ ಸಂಬಂಧ ಕೈಗೊಳ್ಳಲಾಗುವುದು ಎಂದು ಮೈಸೂರು ನಗರದ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By admin