ಚಾಮರಾಜನಗರ: ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.
ಭೀಮನಬೀಡು ಗ್ರಾಮದ ಬಸವಶೆಟ್ಟಿ ಎಂಬಾತನೇ ಅನೈತಿಕ ಸಂಬಂಧದಿಂದ ಸಾವನ್ನಪ್ಪಿದ ದುರ್ದೈವಿ. ಈತ ಅದೇ ಗ್ರಾಮದ ಶಿವಣ್ಣ ಅಲಿಯಾಸ್ ಶಿವ ಎಂಬಾತನ ಪತ್ನಿ ಸೌಭಾಗ್ಯಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎನ್ನಲಾಗಿದೆ.
ಗಂಡ ಶಿವ ಇಲ್ಲದ ಸಮಯದಲ್ಲಿ ಸೌಭಾಗ್ಯ ಳೊಂದಿಗೆ ಬಸವಶೆಟ್ಟಿ ಪಲ್ಲಂಗದಾಟವಾಡುತ್ತಿದ್ದನು. ಇದರ ಚಿತ್ರಗಳನ್ನು ತೆಗೆದಿಟ್ಟುಕೊಂಡಿದ್ದರು ಎನ್ನಲಾಗಿದೆ. ಇವರ ಸಂಬಂಧದ ಬಗ್ಗೆ ಗ್ರಾಮದಲ್ಲಿ ಗುಸುಗುಸು ಸುದ್ದಿ ಹರಿದಾಡಿ ಅದು ಗಂಡ ಶಿವಣ್ಣನ ಕಿವಿಗೂ ಬಿದ್ದಿತು. ಆದರೆ ಈ ಬಗ್ಗೆ ಮೌನವಾಗಿಯೇ ಇದ್ದ ಆತ ರೆಡ್ ಹ್ಯಾಂಡ್ ಆಗಿ ಹಿಡಿಯುವ ಸಲುವಾಗಿ ಕಾಯುತ್ತಿದ್ದನು ಎನ್ನಲಾಗಿದೆ.
ಬುಧವಾರ ರಾತ್ರಿ ಬಸವಶೆಟ್ಟಿ ಗಂಡ ಶಿವಣ್ಣ ಇಲ್ಲದ ವೇಳೆಯಲ್ಲಿ ಸೌಭಾಗ್ಯಳ ಮನೆಗೆ ತೆರಳಿ ಆಕೆಯೊಂದಿಗೆ ಪಲ್ಲಂಗದಾಟ ಶುರು ಮಾಡಿದ್ದನು. ಈ ವೇಳೆ ಹಠಾತ್ತಾಗಿ ಬಂದ ಶಿವಣ್ಣ ಇಬ್ಬರು ಜತೆಯಲ್ಲಿ ಇರುವುದನ್ನು ನೋಡಿ ಅಲ್ಲಿಯೇ ಇದ್ದ ದೊಣ್ಣೆಯಿಂದ ಬಸವಶೆಟ್ಟಿಯ ಮೇಲೆ ಹಲ್ಲೆ ಮಾಡಿದ್ದಾನೆ. ದೊಣ್ಣೆಯಿಂದ ಬಲವಾದ ಪೆಟ್ಟು ತಲೆಗೆ ಬಿದ್ದ ಕಾರಣ ತೀವ್ರ ರಕ್ತ ಸ್ರಾವವಾಗಿ ಬಸವಶೆಟ್ಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ

ಘಟನೆಯ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವಣ್ಣನನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

By admin