ಚಾಮರಾಜನಗರ: ಭಗೀರಥ ಯುವಸೇನೆ ವತಿಯಿಂದ ನಗರದ ಹೊರವಲಯದ ಕಾಳನಹುಂಡಿ ಗ್ರಾಮಸಂಪರ್ಕ ರಸ್ತೆ ಮೈದಾನದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವದದ ಅಂಗವಾಗಿ ಒಂದು ದಿನದ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು.
ಸುವರ್ಣ ಕರ್ನಾಟಕ ರಕ್ಷಣಾವೇದಿಕೆ ಅಧ್ಯಕ್ಷ ಸುರೇಶ್ ವಾಜಪೇಯಿ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲುಗೆಲುವು ಸಹಜ, ಸೋತನೆಂದು ಕುಗ್ಗಬಾರದು,
ಗೆದ್ದನೆಂದು ಹಿಗ್ಗಬಾರದು, ಮಾನಸಿಕ ಹಾಗೂ ದೈಹಿಕವಾಗಿ ಸದೃಡಗೊಳಿಸುವ ಶಕ್ತಿಹೊಂದಿರುವ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕರ್ನಾಟಕ ಕನ್ನಡರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿ, ಕನ್ನಡರಾಜ್ಯೋತ್ಸವ ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗಬಾರದು, ವರ್ಷಪೂರ್ತಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುವ ಮನೋಭಾವ ಪ್ರತಿಯೊಬ್ಬರ ಕನ್ನಡಿಗರಲ್ಲೂ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರಿಕೆಟ್ ಕ್ರೀಡೆಯಲ್ಲಿ ವಿಜೇತರಾದ ಪವರ್ ಹಂಟರ್(ಪ್ರ), ರೆಡ್ ವಿಂಗ್ಸ್(ದ್ವಿ), ಯುವಸಾಮ್ರಾಟ್(ತೃ), ಸೂಪರ್ ಕಿಂಗ್ಸ್ ತಂಡಕ್ಕೆ ಜಯಕರ್ನಾಟಕ ಕಪ್ ಬಹುಮಾನ ವಿತರಿಸಲಾಯಿತು.
ಭಗೀರಥ ಯುವಸೇನೆ ಅಧ್ಯಕ್ಷ ರಾಜೇಂದ್ರ, ಸುವರ್ಣ ಕನ್ನಡ ರಕ್ಷಣಾ ವೇದಿಕೆ ಉಪಾಧ್ಯಕ್ಷ ಪ್ರೇಮ್ ಕುಮಾರ್, ಕ್ರೀಡಾಪಟುಗಳಾದ ಅಜಯ್, ಕುಮಾರ್, ನಾಗೇಶ್, ಜವರಶೆಟ್ಟಿ, ಆನಂದ್, ಗೋಪಾಲ್, ಪ್ರಶಾಂತ್ ಜಗ್ಗ ಸೇರಿದಂತೆ ಇತರರು ಭಾಗವಹಿಸಿದ್ದರು.
