ಚಾಮರಾಜನಗರ : ಕನ್ನಡ ಸಾಹಿತ್ಯ ಪರಿ?ತ್ ಅಧ್ಯಕ್ಷ ಸ್ಥಾನ ಮೌಲ್ಯ ಹಾಗೂ ಜವಾಬ್ದಾರಿಯಿಂದ ಕೂಡಿದ್ದು, ಕನ್ನಡದ ಕೆಲಸವನ್ನು ನಿರಂತರವಾಗಿ ನಿರ್ವಹಿಸುವ ಮೂಲಕ ಕನ್ನಡದ ಭಾ?, ಸಂಸ್ಕೃತಿಯ ಕಾರ್ಯವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿ?ತ್ ಜಿಲ್ಲಾಧ್ಯಕ್ಷ ಎಂ ಶೈಲ ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ ಸಂಸ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿ?ತ್ ತಾಲೂಕು ಘಟಕದ ಪದಾಧಿಕಾರಿಗಳಿಗೆ ಆದೇಶಪತ್ರ ವಿತರಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿ?ತ್ ಮಾಜಿ ಅಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ ಮಾತನಾಡಿ, ಕನ್ನಡ ಸಾಹಿತ್ಯ ಪರಿ?ತ್ ಪದಾಧಿಕಾರಿಗಳು ಸಂಘಟನೆಯ ಮೂಲಕ ಜಿಲ್ಲೆಯಲ್ಲಿ ಕನ್ನಡಭಾಷೆಯ ಬೆಳವಣಿಗೆಯ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಬೇಕು. ಸಾಹಿತ್ಯ ಪರಿ?ತ್ ನಿಯಮಾವಳಿಯ ಪ್ರಕಾರ ಕಾರ್ಯಕ್ರಮಗಳನ್ನು ರೂಪಿಸಿ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡ ಸಾಹಿತ್ಯ ಪರಂಪರೆಯನ್ನು ಎತ್ತರಕ್ಕೆ ಬೆಳೆಸುವ ಪ್ರಯತ್ನ ಮಾಡಬೇಕು ಎಂದರು.
ತಾಲೂಕು ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಕನ್ನಡ ಸಾಹಿತ್ಯ ಪರಿ?ತ್ ನ ಎಲ್ಲಾ ಸದಸ್ಯರ ವಿಶ್ವಾಸ, ಪ್ರೀತಿ ಹಾಗು ಮನಸ್ಸುಗಳನ್ನು ಗಟ್ಟಿಗೊಳಿಸಿ, ಗಡಿ ಭಾಗದ ಪ್ರದೇಶ ಗಳಲ್ಲಿ ವಿಶೇ? ಕಾರ್ಯಕ್ರಮಗಳ ರೂಪುರೇಷೆ,
ಮಹಿಳೆಯರು, ಯುವಕರು, ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರುವ ಕೆಲಸ ನಮ್ಮೆಲ್ಲರಿಂದ ಆಗಬೇಕಿದೆ ಎಂದರು.
ಚಾಮರಾಜನಗರ ತಾಲೂಕು ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ, ಗುಂಡ್ಲುಪೇಟೆಘಟಕದ ಜಗತ್ ಪ್ರಕಾಶ್, ಯಳಂದೂರು ಘಟಕದ ಯರಿಯುರು ನಾಗೇಂದ್ರ, ಕೊಳ್ಳೇಗಾಲದ ಘಟಕದ ನಾಗರಾಜು, ಪ್ರಧಾನ ಕಾರ್ಯದರ್ಶಿಗಳಾದ ಮಹಾಲಿಂಗ ಗಿರ್ಗಿ, ನಾಗಲಕ್ಷ್ಮಿ, ಖಜಾಂಚಿ ನಿರಂಜನ್ ಕುಮಾರ್ ರವರಿಗೆ ಕನ್ನಡ ಶಾಲು, ಕನ್ನಡ ಪುಸ್ತಕಗಳನ್ನು ನೀಡಿ ಆದೇಶಪತ್ರ ನೀಡಿ ಗೌರವಿಸಲಾಯಿತು.
