ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಮೇಲುಕಾಮನಹಳ್ಳಿ ಬಳಿ ಹುಲಿ ಹಸುವನ್ನು ಕೊಂದಿದೆ.
ಗ್ರಾಮದ ಅನುಸೂಯ ಎಂಬುವವರು ಹಸುವನ್ನು ಮೇಯಲು ಬಿಟ್ಟಿದ್ದಾಗ ಹುಲಿ ಹಸುವನ್ನು ಬೇಟೆಯಾಡಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹುಲಿ ಸೆರೆಗೆ ಕ್ಯಾಮರಾ ಅಳವಡಿಸಿಟ್ಟಿದ್ದಾರೆ.
ಮಗುವಿನಹಳ್ಳಿ ಬಳಿ ಹುಲಿ ಸೆರೆ ಹಿಡಿದ ನಂತರ ಕಳೆದ ಒಂದು ವರ್ಷದಿಂದ ಯಾವುದೇ ಹುಲಿ ದಾಳಿ ಸಂಭವಿಸಿರಲಿಲ್ಲ. ಸೆರೆಗೂ ಮುಂಚೆ ಸುಮಾರು ಇಪ್ಪತ್ತು ಹಸುಗಳು ಹುಲಿ ದಾಳಿಗೆ ಬಲಿಯಾಗಿತ್ತು. ಇದೀಗ ಹುಲಿ ಹಸುವನ್ನು ಕೊಂದಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ.
ವರದಿ: ಬಸವರಾಜು ಎಸ್ ಹಂಗಳ