ಇಂದಿನ ಜಗತ್ತಿನಲ್ಲಿ ಕೋವಿಡ್ ನಂತಹ ಸೂಕ್ಷ್ಮಾಣು ವೈರಸ್ ನಿಂದದ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಸಮಾಧಾನವನ್ನು ಪ್ರತಿಯೊಬ್ಬರೂ ಹುಡುಕುತ್ತಲೇ ಇದ್ದಾರೆ. ನಮ್ಮೆಲ್ಲರ ಮೊದಲ ಪ್ರಾಧಾನ್ಯತೆ ಮೊದಲು ನಮ್ಮನ್ನು ನಾವು ಸುರಕ್ಷತೆಯೊಂದಿಗೆ ರಕ್ಷಿಸಿಕೊಳ್ಳುವುದಾಗಿದೆ. ನಂತರ ನಮ್ಮ ಜನರನ್ನು ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಸಂರಕ್ಷಿಸುವುದಾಗಿದೆ.

ಕೋವಿಡ್ ಒಂದು ವೈರಸ್ ಅಷ್ಟೇ. ಪ್ರಾರಂಭಿಕ ಹಂತದಲ್ಲೇ ಅದರ ಲಕ್ಷಣಗಳನ್ನು ಗುರುತಿಸುವುದು ಇದು ನಮ್ಮ ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಏಕೆಂದರೆ ನಾವೆಲ್ಲರೂ ಒಂದು ಸರಪಳಿ ಯಲ್ಲಿ ಬಂಧಿಸಿಕೊಂಡಿದ್ದೇವೆ. ನಾವು ನಮ್ಮ ಪರಿವಾರದ ಸದಸ್ಯರು, ನಮ್ಮ ‌ಕಾರ್ಯಕ್ಷೇತ್ರವನ್ನು ತಡವಾಗಿ ಗುರುತಿಸಿದರೆ ಬಹಳ ನಷ್ಟವಾಗುತ್ತದೆ.ಅಂತಹ ಯಾವುದಾದರೂ ಕೋವಿಡ್ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ತಮ್ಮನ್ನು ತಾವು ಐಸೋಲೇಟ್ ಮಾಡಿಕೊಳ್ಳುವ ಅವಶ್ಯಕತೆಯಿದೆ. ಈ ಕೆಲಸ ತಮ್ಮ ಮೇಲೆ ಅಷ್ಟೇ ಅಲ್ಲ ಇಡೀ ವಿಶ್ವದ ಮೇಲೆ ದಯೆ ತೋರಿಸಿದ ಹಾಗೆ.

 ‌ಜೀವನದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮನಸ್ಸಿನ ಸ್ಥಿತಿಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಬಹಳ ಅಗತ್ಯವಿದೆ. ಹೊರಗಡೆ ನಾವೆಷ್ಟು ಸುರಕ್ಷಿತವಾಗಿರುತ್ತೇವೆ ಅದೇ ರೀತಿ ಒಳಗಡೆಯಿಂದಲೂ ಸುರಕ್ಷಿತವಾಗಿರಬೇಕು. ಅದಕ್ಕಾಗಿ ಆರೋಗ್ಯ ಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು.101 ವರ್ಷದ ವ್ಯಕ್ತಿ ಕೋವಿಡ್ ಗೆದ್ದಿರುವುದು ಆರೋಗ್ಯಕರ ಜೀವನ ಶೈಲಿಯಿಂದಲೇ. ಸರಿಯಾದ ಸಮಯದಲ್ಲಿ ಏಳು ವುದು, ಸರಿಯಾದ ಸಮಯದಲ್ಲಿ ಮಲಗುವುದು, ಧ್ಯಾನದ ಅಭ್ಯಾಸ ಪ್ರಾಣಾಯಾಮದ ಅಭ್ಯಾಸ ಮಾಡಬೇಕು. ಮನಸ್ಸು ಮತ್ತು ಶರೀರವನ್ನು ಸಾತ್ವಿಕವಾಗಿ ಇಟ್ಟು ಕೊಳ್ಳಬೇಕು. ಸರಿಯಾಗಿ ಯೋಚಿಸುವ ಅಭ್ಯಾಸದಿಂದ ಎಲ್ಲವೂ ಸರಿಯಾಗಿ ಆಗುವುದು. ನಮ್ಮ ಯೋಚನಗಳು ಸರಿಯಾಗಿದ್ದರೆ   ಅದು  ಮನಸ್ಸಿಗೂ ಸುರಕ್ಷತೆಯನ್ನು ಒದಗಿಸುತ್ತದೆ.

ಸಂಕಲ್ಪದಿಂದಲೇ ಸಿದ್ದಿ. ನಮ್ಮ ಸಂಕಲ್ಪದಲ್ಲಿ ಹೀಲಿಂಗ್ ಪವರ್ ಇದೆ.  ನಮ್ಮ ಯೋಚನೆಗಳ ಪ್ರಭಾವ ನಮ್ಮ ಶರೀರದ ಮೇಲೆ ಅಷ್ಟೇ ಅಲ್ಲ. ವಾಯುಮಂಡಲದ ಮೇಲೂ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ಎರಡು ಶಬ್ದಗಳನ್ನು ನೆನಪಿಟ್ಟುಕೊಳ್ಳಬೇಕು ಒಂದು ಧನ್ಯವಾದ ಇನ್ನೊಂದು ಆಶೀರ್ವಾದ.

ಬೆಳಗ್ಗೆ ಎದ್ದ ಕೂಡಲೇ ಮೊದಲು ಭಗವಂತನಿಗೆ ಧನ್ಯವಾದಗಳನ್ನು ಹೇಳಿರಿ. ನಂತರ ನಿಮ್ಮ ಶರೀರಕ್ಕೆ ಧನ್ಯವಾದಗಳನ್ನು ಹೇಳಿ ನಂತರ ನಮ್ಮ ಪರಿವಾರದ ಸದಸ್ಯರಿಗೆ ಧನ್ಯವಾದಗಳು ನಂತರ ಯಾರು ಹಗಲು ರಾತ್ರಿ ಇಡೀ ದೇಶದಲ್ಲಿ ಪರಿಶ್ರಮ ಪಡುತ್ತಿದ್ದಾರೆ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ದೇಶದ ಎಲ್ಲಾ ಆಸ್ಪತ್ರೆಯಲ್ಲಿರುವ ಲಕ್ಷಾಂತರ ಕೋವಿಡ್  ಕಾಯಿಲೆಯಿಂದ ಹೋರಾಟ ಮಾಡುತ್ತಿರುವ ಎಲ್ಲರಿಗೂ ಆಶೀರ್ವಾದ ಮಾಡಿ. ಆಶೀರ್ವಾದ ಅಸಾಧ್ಯವನ್ನು ಸಾಧ್ಯ ಮಾಡುತ್ತದೆ ಅನೇಕ ಚಮತ್ಕಾರಗಳನ್ನು ತೋರಿಸುತ್ತದೆ.

By admin