ಮೈಸೂರು 2.: ಸುವರ್ಣ ಬೆಳಕು ಫೌಂಡೇಷನ್ ಮತ್ತು ಫೈಟರ್ ಸ್ಪೋರ್ಟ್ಸ್ ವೇರ್, ಕುವೆಂಪುನಗರ ಮೈಸೂರು ವತಿಯಿಂದ ದಿನಸಿ ಕಿಟ್ ವಿತರಣೆ

ನಾರಯಣ ಶಾಸ್ತ್ರಿ ರಸ್ತೆ ಸುಣ್ಣದಕೇರಿ ಕೆಲ ಬಡ ನಿವಾಸಿಗಳಿಗೆ ದಿನಕೂಲಿ ಕಾರ್ಮಿಕರ ನೌಕರರಿಗೆ ಪೈಟರ್ ಸ್ಪೋಟ್ಸ್ ವೇರ್ ಮಾಲೀಕರಾದ ಮಂಜುನಾಥ ಅವರಿಂದ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಬಳಿ ಮಾತನಾಡಿದ ಮಂಜುನಾಥ್ ಅವರು ಕೋವಿಡ್ ಮಹಾಮಾರಿ 2 ನೇ ಅಲೆ ಹಿನ್ನಲೆಯಲ್ಲಿ ಮೈಸೂರಿನ ದಿನಗೂಲಿ ನೌಕರರ ಹಾಗು ಕಾರ್ಮಿಕರ ನೌಕರರ ದಿನ ಕಷ್ಟಕರವಾಗಿದ್ದು , ನಿತ್ಯ ಬಳಸುವ ಜೀವನ ಸಾಗಿಸಲು ತುಂಬಾ ದಿನಗೂಲಿ ನೌಕರರ ಪಾಲು ಬೀದಿ ಪಾಲಾಗಿದ್ದು ಆಟೋ ಚಾಲಕರ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಅಂದು ದುಡಿದಿದ್ದು ಅಂದೆ ಖರ್ಚು ಆಗುತಿದ್ದು ನಾವು ಬಾಡಿಗೆ ಮನೆ ವಾಸ ಮಾಡುತಿದ್ದು ಬಾಡಿಗೆ ಕಟ್ಟಲು ಸಾಧ್ಯ ಆಗುತ್ತಿಲ್ಲ ನಮ್ಮ ಬಳಿ ಯಾವುದೇ ಹಣ ಇಲ್ಲದಂತ ಆಗಿದೆ ಆದರಿಂದ  ದಿನಾಂಕ ಮೇ.2-05-2021 ರಂದು ಸಮಯ 9.30 ಕ್ಕೆ ಬೆಳಿಗ್ಗೆ ಪೈಟರ್ ಸ್ಪೋಟ್ಸ್ ವೇರ್‌ ಮಾಲೀಕರಾದ ಮಂಜುನಾಥ ಅವರು ಸುಣ್ಣದಕೇರಿ ಕೆಲ ಬಡ ನಿವಾಸಿಗಳ ಮನೆಗೆ ಹೋಗಿ ದಿನಸಿ ಕಿಟ್ ವಿತರಣೆ ಮಾಡಿದರು.ಇಂತಹ ಸಂದರ್ಭದಲ್ಲಿ ಮಾನವೀಯತೆಯ ಮತ್ತು ಸೇವೆ ಸಲ್ಲಿಸಬೇಕಾದ ಸುಸಂದರ್ಭ ಎಂದರು.

ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷರಾದ ಮಹೇಶ್ ನಾಯಕ್. ಎಸ್ , ಪುರುಷೋತ್ತಮ್ ಅಗ್ನಿ. ಎಸ್, ಮಹೇಶ್ ಬಿ.ಎಂ, ಶಿವು ಹಾಗೂ ಇನ್ನಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು ಎಂದು ಫೌಂಡೇಶನ್ ನ ಕಾರ್ಯದರ್ಶಿಗಳಾದ ಹರೀಶ್ ಅವರು ಹಾಜರಿದ್ದರು.

ವರದಿ: ಮೈಸೂರು ಮಿರರ್

By admin