• ಬ್ಯಾಲಾಳು ಗ್ರಾಮದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಮುಖರ ಸಭೆ
• ಅಧಿಕಾರ ಕೊಟ್ಟ ಜನರ ಋಣ ತೀರಿಸಲು ಕರೆ
• ಪಂಚಾಯತಿ ಸಮಿತಿ ರಚಿಸಲು ಸೂಚನೆ
• ಕೆಲಸದ ಮೂಲಕ ಟೀಕೆ ಮಾಡುವವರ ಉತ್ತರಿಸಲು ಸಲಹೆ
ಬೆಂಗಳೂರು: ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ, ನಾವು ಅವರ ಋಣ ತೀರಿಸಬೇಕಿದೆ. ಅವರಿಗೆ ಯಾವುದೇ ಕಷ್ಟ ಬಾರದಂತೆ ನೋಡಿಕೊಳ್ಳಿ, ಸೋಂಕಿತರಿಗೆ ತಕ್ಷಣ ವೈದ್ಯಕೀಯ ನೆರವು ಸಿಗಬೇಕು, ಅವರ ಕುಟುಂಬಗಳಿಗೆ ಪಡಿತರ ಹಾಗೂ ವೈದ್ಯಕೀಯ ವ್ಯವಸ್ಥೆಯಾಗಬೇಕು. ಅದಕ್ಕೆ ನನ್ನಿಂದ ಬೇಕಿರುವ ಸಂಪೂರ್ಣ ಸಹಕಾರ ಕೊಡುತ್ತೇನೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಬ್ಯಾಲಾಳು ಗ್ರಾಮದಲ್ಲಿ ಬಿಜೆಪಿ ಗ್ರಾಮಾಂತರ ಮಂಡಳ ಪದಾಧಿಕಾರಿಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರ ಸಹಿತ ಬಿಜೆಪಿ ಪ್ರಮುಖರೊಂದಿಗೆ ಕೋವಿಡ್ ನಿರ್ವಹಣೆ ಕುರಿತು ಸಭೆ ನಡೆಸಿದ ಸಚಿವರಾದ ಸೋಮಶೇಖರ್ ಅವರು, ಯಶವಂತಪುರ ವಿಧಾನಸಭಾ ಕ್ಷೇತ್ರದ ಎಲ್ಲ 16 ಗ್ರಾಮ ಪಂಚಾಯಿತಿಗಳಲ್ಲಿಯೂ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಗ್ರಾಪಂ ಅಧ್ಯಕ್ಷರು-ಉಪಾಧ್ಯಕ್ಷರು ನಮ್ಮವರೇ ಆಗಿದ್ದಾರೆ. ಈಗ ನಿಮಗೆ ಕೆಲಸ ಮಾಡಲು ಮತ್ತಷ್ಟು ಅನುಕೂಲವಾಗಿದೆ. ನಾಗರಿಕೆರಿಗೆ ಹೆಚ್ಚಿನ ಸಹಕಾರ ನೀಡುವಲ್ಲಿ ಎಲ್ಲರೂ ಶ್ರಮವಹಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಕಾರ್ಯಕರ್ತರು ಒಳಗೊಂಡಂತೆ ಗ್ರಾಮ ಪಂಚಾಯಿತಿ ಸಮಿತಿ ರಚಿಸಿ
ಯಶವಂತಪುರ ವಿಧಾನಸಭಾ ಕ್ಷೇತ್ರದ ಕಟ್ಟಕಡೆಯ ಹಳ್ಳಿ ಜನರ ಯೋಗಕ್ಷೇಮವೂ ನಮಗೆ ಅತಿ ಮುಖ್ಯ. ಹೀಗಾಗಿ ಎಲ್ಲರ ನೆರವಿಗೆ ನಾವುಗಳು ಮುಂದಾಗಬೇಕು. ಇದಕ್ಕಾಗಿ ಅವರ ಅಗತ್ಯತೆಗಳನ್ನು ಮೊದಲು ತಿಳಿದುಕೊಳ್ಳಬೇಕಿದೆ. ಹೀಗಾಗಿ ಇಂದೇ ಸಮಿತಿ ರಚಿಸಿ, ಸದಸ್ಯರು ಗ್ರಾಮಗಳಲ್ಲಿ ಪ್ರತ್ಯೇಕವಾಗಿ ಸಂಚರಿಸಿ ಸಮಸ್ಯೆಗಳನ್ನು ಅರಿಯಿರಿ, ಜನತೆಗೆ ಸ್ಪಂದಿಸಿ ಎಂದು ಸಚಿವರು ಕರೆ ನೀಡಿದರು.
ಸಮಿತಿ ಸದಸ್ಯರ ಕಾರ್ಯನಿರ್ವಹಣೆ
ಕೋವಿಡ್ ಸೋಂಕಿತರಿದ್ದು, ಹೋಂ ಐಸೋಲೇಶನ್ ನಲ್ಲಿದ್ದರೆ, ಅಥವಾ ಅವರ ಕುಟುಂಬದವರಿಗೆ ಏನೇನು ಅವಶ್ಯಕತೆ ಇದೆ? ಅಕ್ಕಿ, ಗೋದಿ ಹಿಟ್ಟು, ಎಣ್ಣೆ ಸೇರಿದಂತೆ ಅವಶ್ಯಕ ದಿನಸಿಗಳ ಪಡಿತರ ಕಿಟ್ ನೀಡುವುದು, ವೈದ್ಯಕೀಯ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವುದು, ಔಷಧಗಳ ಅಗತ್ಯವಿದ್ದರೆ ತಲುಪಿಸುವುದು, ಹಳ್ಳಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರ ಮನೆಗಳಲ್ಲಿ ಸಾವಾದರೆ ತಕ್ಷಣ ಅಂಥವರ ನೆರವಿಗೆ ಧಾವಿಸಿ, ಧನಸಹಾಯ ಮಾಡುವ ಕ್ರಮಗಳನ್ನು ನಾವು ಮಾಡಬೇಕು. ಈ ಕೆಲಸವನ್ನು ಸಮಿತಿ ಸದಸ್ಯರು ಮಾಡಬೇಕು ಎಂದು ಸಚಿವರಾದ ಸೋಮಶೇಖರ್ ಸೂಚನೆ ನೀಡಿದರು.
ವಿರೋಧಿಗಳ ಟೀಕೆ ಉತ್ತರಿಸಬೇಡಿ
ಜನ ಸಂಕಷ್ಟದಲ್ಲಿದ್ದಾರೆ, ನಮ್ಮದೇನಿದ್ದರೂ ಅವರಿಗೆ ಸಹಾಯ ಮಾಡುವುದು, ಅವರಿಗೆ ನೆರವು ನೀಡಿ ಈ ಮಹಾಮಾರಿಯಿಂದ ರಕ್ಷಿಸುವುದು. ಈ ಬಗ್ಗೆ ವಿರೋಧ ಪಕ್ಷದವರು ಏನೇ ಆರೋಪಗಳನ್ನು ಮಾಡಿದರೂ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಜನರ ಬಳಿ ತಾವು ಜಾಗೃಕತೆ ಯಿಂದ ಕೆಲಸ ಮಾಡಿ, ಅವರಿಗೆ ಸಹಾಯ ಮಾಡೋಣ. ಬಳಿಕ ಇಂಥವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ಸೇವೆಗೆ ಏನು ಬೇಕು ಎಂದು ಗಮನಕ್ಕೆ ತನ್ನಿ. ಅದನ್ನು ನಾನು ಒದಗಿಸುತ್ತೇನೆ. ಸರ್ಕಾರದ ಮಟ್ಟದಲ್ಲಿ ಆಗಬೇಕಿದ್ದರೆ ಮುಖ್ಯಮಂತ್ರಿಗಳ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇನೆ. ನಾಗರಿಕರ ಚಿಕಿತ್ಸೆಗೆ ಬೆಡ್ ಕೊಡಿಸುವುದು ಸೇರಿದಂತೆ ಏನು ಬೇಕಾದರೂ ನಾನು ತಮ್ಮೊಂದಿಗೆ ನೆರವಿಗೆ ನಿಲ್ಲುತ್ತೇನೆ ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.
ಬಾಕ್ಸ್
ಸೋಂಕಿತರ ಮನೆಗೆ ಫಾಗಿಂಗ್; ಸಚಿವ ಸೋಮಶೇಖರ್
• ಯಶವಂತಪುರ ಕ್ಷೇತ್ರದ 5 ಬಿಬಿಎಂಪಿ ವಾರ್ಡ್ ವ್ಯಾಪ್ತಿಯ ಬಿಜೆಪಿ ಪ್ರಮುಖರ ಸಭೆ
ಕೋವಿಡ್ ಸೋಂಕಿತರಿಗೆ ಮನೋಬಲ ತುಂಬ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರು ಇಚ್ಛಿಸಿದಲ್ಲಿ ಅವರ ಮನೆಗಳಿಗೆ ಫಾಗಿಂಗ್ ವ್ಯವಸ್ಥೆ ಮಾಡುವುದು ಹಾಗೂ ಪ್ರತಿ ಬೀದಿಗಳಲ್ಲಿಯೂ ಫಾಗಿಂಗ್ ಮಾಡುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಮಾಡಬೇಕು ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಅವರು ಕೆಂಗೇರಿ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಬಿಬಿಎಂಪಿ ವಾರ್ಡ್ ನ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವರು, ಬಿಜೆಪಿ ಪ್ರಮುಖರು ಕ್ಷೇತ್ರದೆಲ್ಲಡೆ ಜನರ ಸಮಸ್ಯೆ ಅರಿಯಲು ವಾರ್ಡ್ ವಾರು ಸಮಿತಿ ರಚಿಸಿ ಕಾರ್ಯಪ್ರವೃತ್ತರಾಗಬೇಕು. ಈ ಮೂಲಕ ಕೂಡಲೇ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.
ಸೋಂಕಿತರ ಮನೆಗಳಿಗೆ ಅಗತ್ಯ ಪಡಿತರ ಕಿಟ್ ಗಳನ್ನು ವಿತರಣೆ ಮಾಡಬೇಕು. ಜೊತೆಗೆ ಅವರಿಗೆ ವೈದ್ಯಕೀಯ ನೆರವುಗಳು ಬೇಕಿದ್ದರೆ, ಔಷಧಗಳ ಅವಶ್ಯಕತೆ ಇದ್ದರೆ, ಬೆಡ್ ವ್ಯವಸ್ಥೆಗಳು ಬೇಕಿದ್ದರೆ, ಆಸ್ಪತ್ರೆಗಳಲ್ಲಿ ಸಮಸ್ಯೆಗಳಾಗುತ್ತಿದ್ದರೆ ತಕ್ಷಣ ಸ್ಪಂದಿಸುವ ಕೆಲಸವನ್ನು ಸಮಿತಿಯವರು ಮಾಡಬೇಕು ಎಂದು ಸಚಿವರು ತಿಳಿಸಿದರು
*ಕೋವಿಡ್ ಕೇರ್‌ಸೆಂಟರ್‌ನಲ್ಲಿ ಆಕ್ಸಿಜನ್ ಸಿಲಿಂಡರ್; ವ್ಯವಸ್ಥೆಗೆ ಸಚಿವ ಎಸ್ ಟಿ ಎಸ್ ಸೂಚನೆ*
• ಬಿಬಿಎಂಪಿ ಕೋವಿಡ್ ನಿರ್ವಹಣೆ ಅಧಿಕಾರಿಗಳು, ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಜೊತೆ ಸಭೆ
• ಮಂಜೂರಾದ 8 ಶವ ಸಾಗಣೆ ವಾಹನದ ಸಮರ್ಪಕ ಉಪಯೋಗಕ್ಕೆ ಸೂಚನೆ
• ಪ್ರತಿಯೊಬ್ಬರಿಗೂ ಶವ ಸಾಗಣೆ ವಾಹನದ ಸಂಖ್ಯೆ ತಲುಪಿಸಿ
ಬೆಂಗಳೂರು: ಕೊರೋನಾ ಎರಡನೇ ಅಲೆಯಲ್ಲಿ ಕೆಲವು ಮಾರ್ಪಾಡುಗೊಂಡ ವೈರಸ್ ಗಳು ಹೆಚ್ಚಿನ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಇದು ಶ್ವಾಸಕೋಶದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಹೀಗಾಗಿ ಆಕ್ಸಿಜನ್ ಸಿಲಿಂಡರ್ ಗಳ ಅವಶ್ಯಕತೆ ಬಹಳವೇ ಇದ್ದು, ಇದರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕೋಸ್ಕರ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಸದಾ ಇರುವಂತ ನೋಡಿಕೊಳ್ಳಬೇಕು ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಕೆಂಗೇರಿಯಲ್ಲಿ ಬಿಬಿಎಂಪಿ ಕೋವಿಡ್ ನಿರ್ವಹಣೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಜ್ಞಾನಭಾರತಿ ಆವರಣದಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಅಳವಡಿಸುವ ಬಗ್ಗೆ ಪ್ರಸ್ತಾಪಿಸಿದಾಗ ಕೂಡಲೇ ಸಂಬಂಧಪಟ್ಟವರೊಂದಿಗೆ ಮಾತನಾಡಿ ನಾಳೆಯಿಂದಲೇ 10 ಆಕ್ಸಿಜನ್ ಸಿಲೆಂಡರ್ ಗಳು ಸಿಗುವಂತೆ .ಕ್ರಮ ಕೈಗೊಳ್ಳಿಲಾಯಿತು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯವಿರುವ ಸಹಕಾರವನ್ನು ಪ್ರಸ್ತಾಪಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಕುಂಬಳಗೋಡು ಗ್ರಾಪಂ ಕಂಬಿಪುರದಲ್ಲಿ ಶೀಘ್ರವಾಗಿ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಅನ್ನು ಕಾರ್ಯಾರಂಭಗೊಂಡ ಸಾರ್ವಜನಿಕರಿಗೆ ತೆರೆಯವಂತೆ ಅಲ್ಲಿಯ 10 ಆಕ್ಸಿಜನ್ ಬೆಡ್ ನಿರ್ಮಾಣ ಮಾಡಬೇಕು. ಜೊತೆಗೆ ಆಕ್ಸಿಜನ್ ಸಿಲಿಂಡರ್ ಕೊರತೆ ಬರದಂತೆ ನಿಗಾ ವಹಿಸಬೇಕು. ಎಲ್ಲಿಯೂ ಯಾವುದೇ ಕಾರಣಕ್ಕೂ ಸಹ ಸಾರ್ವಜನಿಕರಿಗೆ ತೊಂದರೆಯಾಗಕೂಡದು ಎಂದು ಸಚಿವರಾದ ಸೋಮಶೇಖರ್ ಅವರು ಹೇಳಿದರು.
ಬಿಯು ನಂಬರ್ ವಿಳಂಬಕ್ಕೆ ತರಾಟೆ
ಕೋವಿಡ್ ಲಕ್ಷಣಗಳು ಕಂಡ ಕೂಡಲೇ ಜನ ಪರೀಕ್ಷೆಗೆ ಬರುತ್ತಾರೆ. ಆದರೆ, ಅವರಿಗೆ ಸೋಂಕು ಪತ್ತೆಯಾದರೂ ಬಿಯು ನಂಬರ್ ನೀಡುವಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಇದನ್ನು ಸಹಿಸಲಾಗದು ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಬಿಎಂಪಿ ವಾರ್ ರೂಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜರಾಜೇಶ್ವರಿನಗರ ವಲಯಾಧಿಕಾರಿಗಳಿಗೆ ಈ ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು. ಎಲ್ಲರಿಗೂ ತಕ್ಷಣವೇ ಬಿಯು ನಂಬರ್ ಸಿಗುವಂತೆ ನೋಡಿಕೊಳ್ಳಬೇಕು ಎಂದರು. ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್ಒ ಶ್ರೀನಿವಾಸ್ ಅವರು, ಬಿಯು ನಂಬರ್ ಬರುತ್ತಿರುವ ವಿಳಂಬವನ್ನು 24 ಗಂಟೆ ಸೀಮಿತವಾಗುವಂತೆ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ತಿಳಿಸಿದರು.
ಶವಸಾಗಣೆ ವಾಹನದ ಸಹಾಯವಾಣಿ ಸಂಖ್ಯೆ ತಲುಪಿಸಿ
8 ಶವ ಸಾಗಣೆ ವಾಹನ ಮಂಜೂರಾಗಿದ್ದು, ಅದರ ಸಮರ್ಪಕ ನಿರ್ವಹಣೆ ಆಗಬೇಕು. ಅದರ ಸಹಾಯವಾಣಿ ಸಂಖ್ಯೆಯನ್ನು ಕ್ಷೇತ್ರದ ಎಲ್ಲ ಜನರಿಗೂ ತಲುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಶವಾಗಾರ ಆವರಣದ ಸುತ್ತಲೂ ಎತ್ತರಿಸಲು ಸೂಚನೆ
ತಾವರೆಕರೆ ಚಿತಾಗಾರದಲ್ಲಿ ಶವಗಳನ್ನು ಸುಡಲು ದುಡ್ಡು ತೆಗೆದುಕೊಳ್ಳುತ್ತಿರುವ ಆರೋಪಗಳು ಕೇಳಿಬರುತ್ತಿದೆ. ದುಡ್ಡು ಕೊಟ್ಟವರಿಗೆ ತಕ್ಷಣ ಶವ ಸಂಸ್ಕಾರ ನಡೆಸಿಕೊಡುತ್ತಿದ್ದಾರೆಂದು ಜನ ದೂರುತ್ತಿದ್ದಾರೆ. ಇದಾಗ ಕೂಡದು. ತಕ್ಷಣವೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದ ಸಚಿವರಾದ ಸೋಮಶೇಖರ್ ಅವರು, ಶವ ಸುಡುವ ಹೊಗೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗುತ್ತಿದ್ದು, ಅವರಿಂದ ವಿರೋಧ ವ್ಯಕ್ತವಾಗುವ ಮುನ್ನ ಕ್ರಮಕೈಗೊಳ್ಳುವಂತೆ ಹೇಳಿದರು.
ಪಡಿತರ ವಿತರಣೆ
ಕೆ. ಗೊಲ್ಲಹಳ್ಳಿ ಗ್ರಾಮದಲ್ಲಿ ಸಾಂಕೇತಿಕವಾಗಿ ಕೋವಿಡ್ ಸೋಂಕಿತರ ಮನೆಗಳಿಗೆ ಪಡಿತರ ಕಿಟ್ ಅನ್ನು ಯಶವಂತಪುರ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಾಂಕೇತಿಕವಾಗಿ ವಿತರಣೆ ಮಾಡಿದರು.
*ನಾಗರಿಕರ ಕುಟಂಬಕ್ಕೆ ತುರ್ತು ನೆರವು ಒದಗಿಸಿ; ಸಚಿವ ಸೋಮಶೇಖರ್*

ಬಾಕ್ಸ್ ಸೋಂಕಿತರ ಮನೆಗೆ ಫಾಗಿಂಗ್; ಸಚಿವ ಸೋಮಶೇಖರ್