ಚಾಮರಾಜನಗರ: ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಪೋಸ್ಟ್ ಮೆಟ್ರಿಕ್ ಬಾಲಕರ ವಸತಿ ನಿಲಯ, ಹನೂರಿನ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿ ನಿಲಯ, ಹನೂರು ತಾಲೂಕಿನ ಜೀರಿಗೆ ಗದ್ದೆಯ ಆಶ್ರಮ ಶಾಲೆ, ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ ಇಂಧಿರಾ ಗಾಂಧಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಗಳಾಗಿ ಪರಿವರ್ತಿಸಿ ಹಾಗೂ ಸಂಬಂಧಿಸಿದ ಕೋವಿಡ್ ಕೇರ್ ಸೆಂಟರ್ ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶಿಸಿದ್ದಾರೆ.

ವಿವಿಧೆಡೆ ಕಂಟ್ರೋಲ್ ರೂಂ, ಸಹಾಯವಾಣಿ ಆರಂಭ: ಸಾರ್ವಜನಿಕ ಸುರಕ್ಷತೆ ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್-೧೯ರ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಸೋಂಕಿತರು ಹಾಗೂ ಅವರ ಅವಲಂಬಿತರಿಗೆ ನೆರವು ಪಡೆಯಲು ಜಿಲ್ಲಾದ್ಯಂತ ಕಂಟ್ರೋಲ್ ರೂಂ, ಸಹಾಯವಾಣಿಗಳನ್ನು ಆರಂಭಿಸಲಾಗಿದೆ.

ಜಿಲ್ಲಾ ಕೋವಿಡ್ ಕಂಟ್ರೋಲ್ ರೂಂ ದೂ.ಸಂ. ೦೮೨೨೬-೨೨೩೧೬೦, ೨೨೩೧೬೧, ೨೨೩೧೬೪, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಚಾಮರಾಜನಗರ ದೂ.ಸಂ. ೦೮೨೨೬-೨೨೨೪೨೧, ಜಿಲ್ಲಾ ಕಣ್ಗಾವಲು ಘಟಕ ದೂ.ಸಂ. ೦೮೨೨೬-೨೨೬೫೬೧, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಚಾಮರಾಜನಗರ ದೂ.ಸಂ. ೦೮೨೨೬-೨೨೨೭೪೫, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಗುಂಡ್ಲುಪೇಟೆ ದೂ.ಸಂ. ೦೮೨೨೯-೨೨೩೮೫೦, ತಾಲೂಕು ಆಸ್ಪತ್ರೆ ಗುಂಡ್ಲುಪೇಟೆ ದೂ.ಸಂ. ೦೮೨೨೯-೨೨೨೨೦೫, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕೊಳ್ಳೇಗಾಲ ದೂ.ಸಂ. ೦೮೨೨೪-೨೫೫೦೧೧, ತಾಲೂಕು ಆಸ್ಪತ್ರೆ ಕೊಳ್ಳೇಗಾಲ ದೂ.ಸಂ. ೦೮೨೨೪-೨೫೬೪೪೪, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಯಳಂದೂರು ದೂ.ಸಂ. ೦೮೨೨೬-೨೪೦೧೦೮, ತಾಲೂಕು ಆಸ್ಪತ್ರೆ ಯಳಂದೂರು ದೂ.ಸಂ. ೦೮೨೨೬-೨೪೦೧೭೪.

ಕೋವಿಡ್ ೧೯ ಸೋಂಕಿತರು, ಅವರ ಕುಟುಂಬದವರು ಮತ್ತು ಅವಲಂಬಿತರು ದೂರವಾಣಿ ಸಂಪರ್ಕಿಸಿ ಅನುಕೂಲ ಪಡೆಯಬೇಕೆಂದು ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಒಡೆಯರಪಾಳ್ಯದಲ್ಲಿ ಕೋವಿಡ್ ಕೇರ್ ಸೆಂಟರ್: ಕೋವಿಡ್-೧೯ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹನೂರು ತಾಲೂಕು ಒಡೆಯರ ಪಾಳ್ಯ ಗ್ರಾಮದಲ್ಲಿರುವ ಟಿಬೆಟಿಯನ್ ಸೆಟಲ್‌ಮೆಂಟ್‌ಗೆ ಸೇರಿರುವ ಆಸ್ಪತ್ರೆ ಹಾಗೂ ಕಮ್ಯೂನಿಟಿ ಹಾಲ್ ಕಟ್ಟಡಗಳನ್ನು ವಿವಿಧ ಷರತ್ತಿಗೆ ಒಳಪಡಿಸಿ ಖಾಸಗಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.