ಬೆಂಗಳೂರು: ಮೊದಲನೇ ಬಾರಿಗೆ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರು ಎರಡನೇ ಲಸಿಕೆ ಪಡೆಯಲು ಈ ಹಿಂದೆ 6 ರಿಂದ 8 ವಾರಗಳ ಅಂತರವಿತ್ತಾದರೂ ಇದೀಗ ಅದನ್ನು12 ರಿಂದ 16 ವಾರಗಳಿಗೆ ವಿಸ್ತರಿಸಲಾಗಿದೆ.
ರಾಷ್ಟ್ರೀಯ ರೋಗ ನಿರೋದಕ ತಾಂತ್ರಿಕ ಸಲಹಾ ಸಮಿತಿ (ಎನ್ ಟಿ ಎ ಜಿ ಐ) ಮತ್ತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ (ಎನ್ಇಜಿವಿಎಸಿ) ಈ ಶಿಫಾರಸ್ಸು ಮಾಡಿದೆ. ಇದರ ಆಧಾರದ ಮೇಲೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ಮೊದಲ ಡೋಸ್ ಪಡೆದ ನಂತರ 12 ರಿಂದ 16 ವಾರಗಳ ಅಂತರದಲ್ಲಿ ನೀಡಲಾಗುತ್ತಿದೆ.
ಈಗಾಗಲೇ ಕೋವಿಶೀಲ್ಡ್ ಮೊದಲ ಡೋಸ್ ಪಡೆದವರು ಈ ಹಿಂದೆ ಹೇಳಿದಂತೆ ಎಂಟು ವಾರಗಳ ಬದಲಾಗಿ ಹನ್ನೆರಡು ವಾರಗಳ ನಂತರ ಲಸಿಕಾ ಕೇಂದ್ರಗಳಿಗೆ ತೆರಳುವುದು ಅಗತ್ಯವಾಗಿದೆ. ಈ ಕುರಿತಂತೆ ಸರ್ಕಾರವೇ
ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದವರು 12 ವಾರಗಳನ್ನು ಪೂರ್ಣಗೊಳಿಸಿದ ನಂತರವೇ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡುವಂತೆ ಕೋರಲಾಗಿದೆ. ಆದರೆ ಇಲ್ಲಿ ಸಾರ್ವಜನಿಕರು ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯ ಏನೆಂದರೆ ನೀವು ಯಾವ ಲಸಿಕೆಯನ್ನು ಪಡೆದಿದ್ದೀರ ಎನ್ನುವುದು ಮುಖ್ಯವಾಗುತ್ತದೆ. ಇದು COVISHIELD ಲಸಿಕೆ ಪಡೆದವರಿಗೆ ಮಾತ್ರ ಅನ್ವಯಿಸಲಿದ್ದು, COVAXIN ಪಡೆದವರಿಗೆ ಅಲ್ಲ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ.

By admin