ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ 3ದಿನಗಳ ಹಿಂದೆ ನಡೆಯುತ್ತಿರುವ ಹೊದಿಕೆ ವಿತರಣಾ ಅಭಿಯಾನವನ್ನು ಇಂದು ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನ ಮುಂಭಾಗ ನಿರಾಶ್ರಿತರಿಗೆ ಕೆಎಂಪಿಕೆ ಟ್ರಸ್ಟ್ ನಡೆಸುತ್ತಿರುವ ಅಭಿಯಾನಕ್ಕೆ ಬೆಂಬಲಿಸಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಹಾಗೂ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ರವರು ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅತ್ಯುತ್ತಮವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಈ ಚಳಿಗಾಲದಲ್ಲಿ ವಿಶೇಷ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದರೆ ಕಳೆದ 3ದಿನಗಳಿಂದ ರಾತ್ರಿ ಸಮಯದಲ್ಲಿ ಫುಟ್ ಪಾತ್ ನಲ್ಲಿ ಮಲಗಿರುವ ನಿರಾಶ್ರಿತರಿಗೆ ಹೊದಿಕೆ ಕೊಡುವ ಮೂಲಕ ನಿರಾಶ್ರಿತರು ನೆಮ್ಮದಿಯಾಗಿ ನಿದ್ದೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ನಂತರ ಮಾತನಾಡಿದ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ಮೈಸೂರು ಪಾರಂಪರಿಕ ನಗರ ಸಾಂಸ್ಕೃತಿಕ ನಗರ ನಗರದಲ್ಲಿ ಈ ಟ್ರಸ್ಟ್ ನವರು ಮಾಡುತ್ತಿರುವ ಕೆಲಸ ಶ್ಲಾಘನೀಯ ಈಗಾಗ್ಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅನುದಾನ ಅಡಿಯಲ್ಲಿ ನೈಟ್ ಶೆಟ್ಟರ್ ಅಂಥ ನಗರಪಾಲಿಕೆ ವತಿಯಿಂದ 3ಭಾಗದಲ್ಲಿ ಮಾಡಿದ್ದು ಉದ್ಘಾಟನೆ ಆಗಿ ಆಗೇ ದುರಸ್ತಿಯಾಗಿದೆ ದಯಮಾಡಿ ಟ್ರಸ್ಟ್ ನವರು ಸ್ಥಳೀಯ ಸಂಸ್ಥೆಗಳಿಗೆ ಅದರಲ್ಲೂ ವಿಶೇಷವಾಗಿ ನಗರ ಪಾಲಿಕೆ ಇದರಿಂದ ಲಕ್ಷಾಂತರ ವೆಚ್ಚ ಮಾಡಿ ನಿರ್ಮಾಣ ಮಾಡಿರುವ ನೈಟ್ ಶೆಲ್ಟರ್ ಗೆ ನಿರ್ಗತಿಕರನ್ನು ನೈಟ್ ಶೆಲ್ಟರ್ ಗೆ ಸೇರಿಸುವ ಮೂಲಕ ಕೆಲಸ ಮಾಡಬೇಕು ಅದರ ಉಪಯೋಗಗಳನ್ನು ಹುಚ್ಚು ಹೆಚ್ಚು ಅರಿವು ಮೂಡಿಸಬೇಕು ಎಂದು ಹೇಳಿದರು ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ,ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ,ನಗರಪಾಲಿಕೆ ಸದಸ್ಯರಾದ ಸಾತ್ವಿಕ್ ಸಂದೇಶ್ ,ಟ್ರಸ್ಟ್ ನ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ,ಮಹೇಂದ್ರ ಸಿಂಗ್ ಕಾಳಪ್ಪ ,ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಎಸ್ ಎನ್ ರಾಜೇಶ್ ,ರಾಕೇಶ್ ಕುಂಚಿಟಿಗ ,ನವೀನ್ ಕೆಂಪಿ ,ಸುಚೀಂದ್ರ,ಹರೀಶ್ ನಾಯ್ಡು , ಚಕ್ರಪಾಣಿ,ಹಾಗೂ ಇನ್ನಿತರರು ಹಾಜರಿದ್ದರು.