ಹಾಸನ: ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಜಿಲ್ಲೆಯಲ್ಲಿ ಮೇ.10ರಂದು(ಸೋಮವಾರ) ಹೊಸದಾಗಿ 1597 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟಾರೆ ಸೋಂಕಿತರ ಸಂಖ್ಯೆ 55841 ಏರಿಕೆಯಾಗಿದ್ದು, ಜಿಲ್ಲೆಯಲ್ಲಿ 26672 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 123 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಈವರೆಗೆ ಕೋವಿಡ್ ಸಾವಿನ ಸಂಖ್ಯೆ 703ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 36461 ಮಂದಿ ಗುಣಮುಖರಾಗಿದ್ದಾರೆ.ಸೋಮವಾರ ಪತ್ತೆಯಾದ 1597 ಕೋವಿಡ್ ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ 387 ಮಂದಿ, ಅರಕಲಗೂಡು 55 ಮಂದಿ, ಅರಸೀಕೆರೆ 436 ಮಂದಿ, ಹೊಳೆನರಸೀಪುರ 161 ಮಂದಿ, ಚನ್ನರಾಯಪಟ್ಟಣ 248 ಮಂದಿಗೆ, ಸಕಲೇಶಪುರ ತಾಲ್ಲೂಕಿನಲ್ಲಿ 120ಮಂದಿ, ಆಲೂರು 58 ಮಂದಿ, ಬೇಲೂರು 118 ಮಂದಿಗೆ, ಇತರೆ ಜಿಲ್ಲೆಯ 14 ಮಂದಿಗೆ ಕೋವಿಡ್ ಪ್ರಕರಣ ದೃಡಪಟ್ಟಿದೆ. ಇಂದು ಮೃತಪಟ್ಟವರಲ್ಲಿ ಹಾಸನ ತಾಲ್ಲೂಕಿನಲ್ಲಿ 11, ಬೇಲೂರು ತಾಲ್ಲೂಕಿನಲ್ಲಿ 2, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 3 ಮಂದಿ, ಆಲೂರು ತಾಲ್ಲೂಕಿನಲ್ಲಿ 5 ಮಂದಿ, ಸಕಲೇಶಪುರ ತಾಲ್ಲೂಕಿನಲ್ಲಿ 1, ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಅವರು ತಿಳಿಸಿದ್ದಾರೆ

By admin