ಚಾಮರಾಜನಗರ: ಕೊರೊನಾ ಮಹಾಮಾರಿಯ ನಿರ್ಮೂಲನೆಗಾಗಿ ಕೊರೊನಾ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿರುವುದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿ ಬಳಿಯ ಬೋಳು ಗುಡ್ಡೆಯಲ್ಲಿ ಬೆಳಕಿಗೆ ಬಂದಿದೆ.
ಮಧುವನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆಯಾಗಿರುವ ಚಾಮುಂಡೇಶ್ವರಿ ಆರಾಧಕಿ ಯಶೋದಮ್ಮ ಅವರು ಮಹಾಮಾರಿ ಕೊರೊನಾ ನಿರ್ನಾಮಕ್ಕಾಗಿ ಕಳೆದ ಕೆಲದಿನಗಳಿಂದ ಕೊರೊನಾ ಮಾರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಇಲ್ಲಿ ದಿನನಿತ್ಯ ವಿಶೇಷ ಹೋಮ ಹವನ ನಡೆಸುವುದರೊಂದಿಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಪ್ರಕೃತಿಯಲ್ಲಿ ದೇವರಿದ್ದಾರೆ. ಆದರೆ ಮರ ಗಿಡಗಳನ್ನು ಕಡಿಯುತ್ತಿರುವುದರಿಂದ ಅವುಗಳ ಉಸಿರಾಟವನ್ನೇ ಕಿತ್ತುಕೊಂಡಂತಾಗಿದ್ದು, ಅದರ ದೋಷ ಮನುಷ್ಯರನ್ನು ಕೊರೊನಾ ರೂಪದಲ್ಲಿ ಕಾಡುತ್ತಿದ್ದು, ಇದರ ಪ್ರಾಯಶ್ಚಿತಕ್ಕಾಗಿ ಕೊರೋನಾ ಮಾರಮ್ಮನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿರುವುದಾಗಿ ಯಶೋದಮ್ಮ ಹೇಳಿದ್ದಾರೆ.
ಈಗಾಗಲೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾಮಾಚಿಪುರಿ ಅಧೀನ ಪೀಠದ ವತಿಯಿಂದ ಕೊರೊನಾ ದೇವಿಯನ್ನು ಪ್ರತಿಷ್ಠಾಪಿಸಿ ಅರ್ಚಕರನ್ನು ನೇಮಿಸಿ ನಲುವತ್ತೆಂಟು ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರ ಗಳು ನಡೆಸುತ್ತಿರುವುದನ್ನು ಒಂದೆಡೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.

By admin