ಮೈಸೂರು: ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿಯ ಅಂಗವಾಗಿ ದಟ್ಟಗಳ್ಳಿಯ ಎಫ್ ಬ್ಲಾಕ್ ನಲ್ಲಿರುವ ಉದ್ಯಾನವನದಲ್ಲಿ ನಗರ ಪಾಲಿಕೆ ಸದಸ್ಯರಾದ ಲಕ್ಷ್ಮಿ ಕಿರಣ್ ಮಾದೇಗೌಡ ರವರ ನೇತೃತ್ವದಲ್ಲಿ ನಡೆದ ವೃಕ್ಷಾರೋಹಣ ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸಿ ವಾರಿಯರ್ಸ್ ಗಳಾದ ಸತ್ಯಮೂರ್ತಿ, ಡಾ ಪ್ರಿಯದರ್ಶಿನಿ, ಪೊಲೀಸ್ ಪೇದೆ ಬಸವೇಗೌಡ, ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಪ್ರಕಾಶ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ, ಪ್ರಭಾರಿಗಳಾದ ಮೈ ವಿ ರವಿಶಂಕರ್, ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾದ ಎನ್ ವಿ ಫಣೀಶ್, ಬಿಜೆಪಿ ರಾಜ್ಯ ವಕ್ತಾರರಾದ ಎಂ ಜೆ ಮಹೇಶ್, ವಕ್ತಾರರಾದ ಮೋಹನ್, ನಗರ ಪಾಲಿಕಾ ಸದಸ್ಯರಾದ ಲಕ್ಷ್ಮೀ ಕಿರಣ್ ಗೌಡ, ನಗರ ಮಂಡಲ ಅಧ್ಯಕ್ಷ ಬಿ ಎಂ ರಘು, ಪ್ರಧಾನ ಕಾರ್ಯದರ್ಶಿ ಈರೇಗೌಡ, ನಾಗೇಂದ್ರ, ದಟ್ಟಗಳ್ಳಿ ಗಿರೀಶ್, ರಾಚಪ್ಪಾಜಿ, ಪುಷ್ಪಾ ಮಚ್ಚಯ್ಯ, ಹೇಮಾ ಗಂಗಪ್ಪ ,ಶಿವಕುಮಾರ್, ಕವಿತಾ, ವಿನುತಾ , ಲಲಿತಾ ಸ್ಥಳೀಯ ನಿವಾಸಿಗಳು ಹಾಜರಿದ್ದರು