ಹಾಸನ: ಕೊರೋನಾ ಸೋಂಕು  ಹೆಚ್ಚುತ್ತಿರುವ ಕಾರಣ ಬೆಡ್ ಗಳ ಸಮಸ್ಯೆ ವುಂಟಾಗಿರುವುದರಿಂದ ಸೋಂಕಿತರ ಅನುಕೂಲಕ್ಕಾಗಿ ನಗರದ ಹೊಸಲೈನ್ ರಸ್ತೆಯಲ್ಲಿರುವ ಷರೀಫ್ ಚ್ಯಾರಿಟೀಸ್ ಕಟ್ಟಡದಲ್ಲಿ 100 ಬೆಡ್ ಗಳುಳ್ಳ ತಾತ್ಕಾಲಿಕ ಕೊರೋನಾ ಕೇರ್ ಕೇಂದ್ರವನ್ನು ನಿರ್ಮಾಣ ಮಾಡಲಾಗಿದ್ದು ಮೇ.14ರಂದು ಲೋಕಾರ್ಪ‍ ಣೆ ಮಾಡಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ  ಹಾಸನ ಹ್ಯುಮೇನಿಟೇರಿಯನ್ ಸರ್ವಿಸ್’ ನ  ಡಾ.ಶರೀಫ್ ಅವರು, ಈಗಿನ ಸಂದಿಗ್ಧ ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ಇಡೀ ವಿಶ್ವವು ಸಾಂಕ್ರಾಮಿಕ ಕೊರೋನದಿಂದ ತತ್ತರಿಸಿ ಹೋಗಿದ್ದು ಇದು ಕೇವಲ ಸರ್ಕಾರಗಳ ಜವಾಬ್ದಾರಿಯಾಗಿರದೆ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಮಾಧ್ಯಮದ ಮಿತ್ರರು ಸೇರಿದಂತೆ ಇಡೀ ಸಮಾಜವು ಒಂದಾಗಿ ಮಾಡುವ ಕಾರ್ಯವಾಗಿದೆ. ಇದನ್ನು ಆಂದೋಲನದ ಮಾದರಿಯಲ್ಲಿ  ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಈ ನಿಟ್ಟಿನಲ್ಲಿ ನಮ್ಮದು ಸಣ್ಣ ಪ್ರಯತ್ನ ವಾಗಿದೆ ಎಂದರು.

ನಮ್ಮೊಂದಿಗೆ ಆಸಕ್ತ ವೈದ್ಯರೂ ಹಾಗೂ ಯುವಕರನ್ನೊ ಳಗೊಂಡ, ಹಾಸನ ಹ್ಯುಮೇನಿಟೇರಿಯನ್ ಸರ್ವಿಸ್’ ಎಂಬ ಸ್ವಯಂ ಸೇವಾ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದ್ದು, ಸಾರ್ವಜನಿಕರಿಗೆ ಸೇವೆ ನೀಡುವ ಸದುದ್ದೇಶದಿಂದ ಸರ್ಕಾರದ ಮಾರ್ಗಸೂಚಿಯಂತ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಗೊಳಿಸುವ ಉದ್ದೇಶ ದಿಂದ ಬೆಂಗಳೂರಿನ ಪ್ರತಿಷ್ಟಿತ ಹೆಚ್ ಬಿಎಸ್ ಆಸ್ಪತ್ರೆ ಹಾಗೂ ಶಮಾ ಚ್ಯಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಕೋವಿಡ್ ಕೇರ್ ಸೆಂಟರ್  ನಡೆಸಲಾಗುವುದು. ಈಗ ಜಿಲ್ಲಾಡಳಿತವು 45 ಬೆಡ್ ಗಳಿಗೆ ಅನುಮತಿ ನೀಡಿದ್ದು ನಂತರ ಅವಶ್ಯಕತೆಗನುಗುಣವಾಗಿ ಆರೋಗ್ಯ ಇಲಾಖೆಯ ನಿಯಮಗಳಿಗನುಸಾರವಾಗಿ ಅನುಮತಿ ಪಡೆದು ಬೆಡ್ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

ನುರಿತ ವೈದ್ಯರು, ದಾದಿಯರು, ಹಾಗೂ ಸಿಬ್ಬಂದಿ ವರ್ಗದವರು ಸ್ವಯಂಸೇವಾ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಕೇವಲ ಔಷದಿ, ಆಮ್ಲಜನಕ ಹಾಗೂ ಲ್ಯಾಬ್ ಟೆಸ್ಟ್ ಗಳಿಗೆ ಮಾತ್ರ ಕನಿಷ್ಠ ಶುಲ್ಕವನ್ನು ಪಡೆಯಲಾಗುವುದು, ಈ ನಮ್ಮ ಪ್ರಯತ್ನಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಮಾರ್ಗದರ್ಶನ, ಪೊಲೀಸ್ ಇಲಾಖೆ ಸಹಕರಿಸುತ್ತಿದೆ ಎಂದರು. ಸೇವೆಗಾಗಿ ಕೇಂದ್ರದ ಸಹಾಯವಾಣಿ 7795323108 , 7795393108  ಸಂಪರ್ಕಿಸಬಹುದು. ಎಂದು ಹೇಳಿದರು.

 

By admin