ಮೈಸೂರು: ಕರ್ನಾಟಕದಲ್ಲಿ ಸೋಮವಾರ 4,867 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, 142 ಮಂದಿ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಬೆಂಗಳೂರು ಬಳಿಕ ಮೈಸೂರಿನಲ್ಲಿ ಸೋಂಕು ಕಡಿಮೆಯಾದಂತೆ ಕಾಣುತ್ತಿಲ್ಲ. ಜತೆಗೆ ಸಾವಿನ ಸಂಖ್ಯೆಯೂ ಇಳಿದಿಲ್ಲ. ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.

ಸದ್ಯ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,62,629 ಕ್ಕೇರಿದ್ದು, ಸಮಾಧಾನದ ಸಂಗತಿ ಏನೆಂದರೆ ಸೋಮವಾರ 1,161 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದುವರೆಗೆ ಮೈಸೂರಿನಲ್ಲಿ 1,53,702 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದೆಲ್ಲದರ ನಡುವೆ ಮೈಸೂರಿನಲ್ಲಿ 22 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಇನ್ನು ರಾಜ್ಯದಾದ್ಯಂತ ಸೋಂಕಿನ ಸಂಖ್ಯೆಯನ್ನು ಗಮನಿಸಿದರೆ, ಬಾಗಲಕೋಟೆ 23, ಬಳ್ಳಾರಿ 106, ಬೆಳಗಾವಿ 93, ಬೆಂಗಳೂರು ಗ್ರಾಮಾಂತರ 134, ಬೆಂಗಳೂರು ನಗರ 1,034, ಬೀದರ್ 12, ಚಾಮರಾಜನಗರ 109, ಚಿಕ್ಕಬಳ್ಳಾಪುರ 128, ಚಿಕ್ಕಮಗಳೂರು 152, ಚಿತ್ರದುರ್ಗ 138, ದಕ್ಷಿಣಕನ್ನಡ 542, ದಾವಣಗೆರೆ 176, ಧಾರವಾಡ 55, ಗದಗ 17, ಹಾಸನ 364, ಹಾವೇರಿ 18, ಕಲಬುರಗಿ 26, ಕೊಡಗು 206, ಕೋಲಾರ 90, ಕೊಪ್ಪಳ 26, ಮಂಡ್ಯ 154, ಮೈಸೂರು 546, ರಾಯಚೂರು 20, ರಾಮನಗರ 21, ಶಿವಮೊಗ್ಗ 217, ತುಮಕೂರು 182, ಉಡುಪಿ 117, ಉತ್ತರಕನ್ನಡ 119, ವಿಜಯಪುರ 34, ಯಾದಗಿರಿ 08 ದಾಖಲಾಗಿದೆ.

ಒಟ್ಟಾರೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,11,320 ಕ್ಕೆ ಏರಿಕೆಯಾಗಿದ್ದು, ಸೋಮವಾರ ಇಂದು 8,404 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 26,54,139 ಮಂದಿ ಗುಣಮುಖರಾಗಿದ್ದಾರೆ.

By admin