ಹಾಸನ : ಕೊರೋನಾಗೆ ಶಿಕ್ಷಕರು ಬಲಿಯಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಕೊರೋನಾಗೆ ಜೆ.ಎಸ್.ಎಸ್ ಶಾಲಾ ಶಿಕ್ಷಕ ಬಲಿಯಾಗಿರುವ ಘಟನೆ ನಡೆದಿದೆ.
ಸಕಲೇಶಪುರ ತಾಲ್ಲೂಕಿನ ಬಾಗೆ ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಶಿಕ್ಷಕ ಆನಂದ್ ಮೃತಪಟ್ಟ ದುರ್ದೈವಿ.
ಇವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಿವಮೊಗ್ಗದ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊರೋನಾಗೆ ಬಲಿಯಾಗಿದ್ದಾರೆ. ಮಕ್ಕಳ ಜೊತೆ ಮಕ್ಕಳಾಗಿ ಬೆರೆತು ಅಪಾರ ಸಂಗೀತದ ಜ್ಞಾನ ಹೊಂದಿದ್ದ ಇವರು ಸ್ನೇಹ ಜೀವಿಗಳು ಮತ್ತು ಮೃದು ಸ್ವಬಾವದವರಾಗಿದ್ದರು. ಇವರ ಅಗಲಿಕೆಗೆ ಪೋಷಕ ವೃಂದ ಕಂಬನಿ ಮಿಡಿದಿದೆ.