ಪೋಲಿಯೊ ಮುಕ್ತ ದೇಶವಾಗಲು ಸಹಕರಿಸಿ: ದೀಪು

ಗುಂಡ್ಲುಪೇಟೆ: ಪಟ್ಟಣದ 8ನೇ ವಾರ್ಡ್ ನ ಹಳ್ಳದ ಕೇರಿಯಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಪುರಸಭಾ ಸದಸ್ಯರಾದ ಶಶಿಧರ್ ಪಿ ದೀಪು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಶಿಧರ್ ಪಿ ದೀಪು, ಪ್ರತಿಯೊಬ್ಬ ಪೋಷಕರು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಕಡ್ಡಾಯವಾಗಿ ಎರಡು ಹನಿ ಲಸಿಕೆ ಹಾಕಿಸಬೇಕು. ಮಕ್ಕಳ ಜೀವಕ್ಕೆ ಮುಂದೆ ಆಗುವ ಅಪಾಯವನ್ನು ತಪ್ಪಿಸುವ ಜೊತೆಗೆ ಪೋಲಿಯೊ ಮುಕ್ತ ದೇಶವನ್ನಾಗಿಸಲು ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಪೂವಮ್ಮ, ಅಂಗನವಾಡಿ ಕಾರ್ಯಕರ್ತೆಯಾದ ಜಿ.ಎಂ. ಸರೋಜಾ, ಆಶಾ ಕಾರ್ಯಕರ್ತೆ ಭಾಗ್ಯಲಕ್ಷ್ಮಿ ಸೇರಿದಂತೆ ಮಕ್ಕಳ ಪೋಷಕರು ಇದ್ದರು.

ವರದಿ: ಬಸವರಾಜು ಎಸ್ ಹಂಗಳ

By admin