ಮೈಸೂರು: ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಈ ಕಾಲದಲ್ಲಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಹಳಷ್ಟು ಆಸ್ಪತ್ರೆಗಳಲ್ಲಿ ಕುಳಿತುಕೊಳ್ಳಲು ಕುರ್ಚಿಗಳಾಗಲೀ, ನೆರಳಾಗಲೀ ಇಲ್ಲದಂತಾಗಿದೆ. ಇದನ್ನರಿತ ಜೀವಧಾರ ರಕ್ತನಿಧಿ ಕೇಂದ್ರವು ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಆಯುಷ್ ಇಲಾಖೆಯ ಚರಕ ಸರ್ಕಾರಿ ಆಯುರ್ವೇದ ಸ್ನಾತಕೋತರ ಕೇಂದ್ರಕ್ಕೆ ನೂರು ಕುರ್ಚಿ ಹಾಗೂ ಶಾಮಿಯಾನದ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.ಇದರಿಂದ ಆಯುರ್ವೇದ ಆಸ್ಪತ್ರೆಗೆ ಪ್ರತಿದಿನವೂ ಕೋವಿಡ್ ಲಸಿಕೆ ಪಡೆಯಲು ಪ್ರತಿನಿತ್ಯವೂ ನೂರಾರು ಮಂದಿ ಬರುತ್ತಿದ್ದು, ಅವರಿಗೆ ಅನುಕೂಲವಾಗಿದೆ. ಈ ಬಗ್ಗೆ ಮಾತನಾಡಿದ ಜೀವಧಾರ ಪದವೀಧರ ಸಮಿತಿಯ ಕಾರ್ಯದರ್ಶಿ ವರಲಕ್ಷ್ಮಿ ಅವರು ಕೋವಿಡ್ ನಿಯಂತ್ರಿಸಲು ಸರ್ಕಾರದ ನಿಯಾಮಾನುಸಾರ ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಲು ನಾಗರಿಕರು ಮುಂದಾಗಬೇಕು. ಯುವಕರು ಕೋವಿಡ್ ಶೀಲ್ಡ್ ಲಸಿಕೆ ಪಡೆಯುವ ಮುನ್ನ ಹೆಚ್ಚಾಗಿ ರಕ್ತದಾನ ಮಾಡಲು ಮುಂದಾಗಬೇಕು, ಒಬ್ಬರ ರಕ್ತದಾನದಿಂದ ಏಕಕಾಲಕ್ಕೆ ಮೂರು ಜೀವವನ್ನು ಉಳಿಸಬಹುದು ಎಂದರು.
ಸಾಮಾಜಿಕ ಚಿಂತಕಿ ಶೀಲಾ ಮಾತನಾಡಿ ಕೋವಿಡ್ ಸೋಂಕು ತಗುಲದಂತೆ ಹಿರಿಯ ನಾಗರಿಕರು ಮತ್ತು ಸಣ್ಣಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕಾಗಿದೆ, ಕೋವಿಡ್ ಶೀಲ್ಡ್ ಲಸಿಕೆ ಪಡೆದರೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಯುವ ಸಂಘ ಸಂಸ್ಥೆಗಳು ಲಸಿಕೆ ಪಡೆಯುವ ಮುನ್ನ ಸ್ವಯಂ ಪ್ರೇರಿತ ರಕ್ತದಾನ ಮಾಡಲು ಮುಂದಾಗುವವರು ೯೮೮೦೭೫೨೭೨೭ನ್ನು ಸಂಪರ್ಕಿಸಬಹುದು ಎಂದರು.
ಈ ಸಂದರ್ಭ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಪರಿಸರ ಜಾಗೃತಿ ಸಮಿತಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ, ಯುವ ಮುಖಂಡ ಅಜಯ್ ಶಾಸ್ತ್ರಿ, ಪ್ರೊ. ಡಾ. ಮುದಾಸ್ಸರ್, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಬಿ. ಮಂಜುನಾಥ್, ಡಾ. ಶ್ವೇತ, ಡಾ. ಲಕ್ಷ್ಮಿಕಾಂತ್, ಡಾ. ಸಂತೋಷ್, ಡಾ.ಹರ್ಷಿನಿ, ಡಾ.ನಿಮಿಷ, ಡಾ.ಉಮಾಕಾಂತ್, ಡಾ.ಸ್ನೇಹಲತಾ, ಸ್ವಯಂಸೇವಕರಾದ ರಾಬರ್ಟ್, ಗುರು, ಸುಲೇಮಾನ್, ಅದ್ವಿತ್, ಜೇಮ್ಸ್, ಮಹೇಶ್, ಉಪಸ್ಥಿತರಿದ್ದರು.