ಚಾಮರಾಜನಗರ: ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ತಿಮ್ಮಯ್ಯ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿಸಿಡಿಸಿ ವಿಜಯೋತ್ಸವ ಆಚರಿಸಿದರು.
ಇದೇ ವೇಳೆ ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ ಮಹಮದ್ ಅಸ್ಗರ್ ಮುನ್ನಾ, ಮಾತನಾಡಿ, ಪ್ರಜ್ಞಾವಂತ ಮತದಾರರು ರಾಜ್ಯದ್ಯಂತ ಕಾಂಗ್ರೆಸ್ ಪರ ಒಲವು ತೋರಿದ್ದು, ಇದರ ಸಂಕೇತವಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಮೈಸೂರು. ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೇಮಾಡಿದ್ದ ತಿಮ್ಮಯ್ಯ ಅವರು ಗೆಲುವು ಸಾಧಿಸಿರುವುದೇ ಕಾರಣವಾಗಿದೆ, ಈ ಚುನಾವಣೆಯ ಗೆಲುವು ಮುಂದಿನ ೨೦೨೩ ರ ವಿಧಾನಸಭೆಗೆ ದಿಕ್ಸೂಚಿಯಾಗಲಿದೆ ಎಂದರು.
ಜಿಲ್ಲಾ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ, ಆರ್.ಮಹದೇವ, ಎಪಿಎಂಸಿ ಅಧ್ಯಕ್ಷ ಡಿ.ನಾಗೇಂದ್ರ, ಜಿಪಂ ಮಾಜಿಸದಸ್ಯ ರಮೇಶ್, ತಾಪಂ ಮಾಜಿಸದಸ್ಯರಾದ ಕಾಗಲವಾಡಿಶಿವಸ್ವಾಮಿ, ಎಚ್.ಎಂ.ಮಹದೇವಶೆಟ್ಟಿ, ಚುಡಾಮಾಜಿ ಅಧ್ಯಕ್ಷ ಸುಹೇಲ್ ಅಲಿಖಾನ್, ಸೇವಾದಳಜಿಲ್ಲಾಧ್ಯಕ್ಷ ರವಿಗೌಡ, ಮುಖಂಡರಾದ ನಾಗವಳ್ಳಿನಾಗಯ್ಯ, ವೀರಭದ್ರಸ್ವಾಮಿ, ಕರಿನಂಜನಪುರಸ್ವಾಮಿ, ಚನ್ನಬಸವಶೆಟ್ಟಿ, ನಗರಸಭೆ ಮಾಜಿ ಸದಸ್ಯ ಮಹೇಶ್, ಹೊಂಗನೂರುಜಯರಾಜು, ಶೇಷಣ್ಣ, ಮಹದೇವಸ್ವಾಮಿ, ಸಿದ್ದರಾಜು, ಕೆ.ನಾಗರಾಜು, ಸಯ್ಯದ್ ನಸ್ರುಲ್ಲಾ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು,ಮುಖಂಡರು ಹಾಜರಿದ್ದರು.