ಹಂಪಿ‌ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಭಾಷಾ ತಜ್ಞರಾದ ಟಿವಿ ವೆಂಕಟಾಚಲ ಶಾಸ್ತ್ರಿ ರವರನ್ನ‌ ಮೈಸೂರು ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಜಯಲಕ್ಷ್ಮಿಪುರಂ ಅವರ ನಿವಾಸದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಧಾರ್ಮಿಕ ಮುಖಂಡರಾದ ಯೊಗಾನರಸಿಂಹ (ಮುರಳಿ),
ಒಂಟಿಕೊಪ್ಪಲಿನ ವೆಂಕಟರಮಣ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸತ್ಯನಾರಾಯಣ್,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,ಕೆ ಎಂ ನಿಶಾಂತ್ , ,ವಿಕಾಸ್ ಶಾಸ್ತ್ರಿ, ಸುಚೇಂದ್ರ ,ಚಕ್ರಪಾಣಿ ,ಟಿ ಎಸ್ ಅರುಣ್ ,ರಂಗನಾಥ್ ಹಾಗೂ ಇನ್ನಿತರರು ಶುಭ ಕೋರಿದರು