ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಹೆಬ್ಬಸೂರಿನ ಶ್ರೀ ಶೃಂಗೇರಿ ಶಂಕರ ಮಠದ ಆವರಣದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ಅವರನ್ನು ಅಭಿನಂದಿಸಲಾಯಿತು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ ಎಂ ಹೆಗಡೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ, ಖಜಾಂಚಿ ಬಾಲಸುಬ್ರಹ್ಮಣ್ಯಂ, ಚಾಮರಾಜನಗರ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ನಾಗರಾಜು, ಕೊಳ್ಳೇಗಾಲ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶೇಖರ ಶಾಸ್ತ್ರಿ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾದ ಗೋಪಾಲಕೃಷ್ಣ, ಯಳಂದೂರುಬ್ರಾಹ್ಮಣ ಸಂಘದ ಅಧ್ಯಕ್ಷರು ಮುರಳಿ, ಶ್ರೀ ಶಂಕರಮಠದ ಹೆಬ್ಬಸೂರು ಶಾಖೆಯ ಧರ್ಮಾಧಿಕಾರಿ ಶ್ರೀಧರ್ ಪ್ರಸಾದ,ಬ್ರಾಹ್ಮಣ ಮಹಿಳಾ ಸಂಘಟನೆಯ ಅನುರಾಧ, ವತ್ಸಲ, ಗೀತಾ ,ಜಯಶ್ರೀ ,ತುಳಸಿ ಬಾಯಿ ಉಪಸ್ಥಿತರಿದ್ದರು.