ಕೋವಿಡ್ ಲಾಕ್ಡೌನ್ ಸಂಧರ್ಭದಲ್ಲಿ ಸಮಾಜಕ್ಕೆ ನೆರವಾದ ಹೃದಯ ಶ್ರೀಮಂತಿಕೆಯ ಸಮಾಜ ಸೇವಕರಿಗೆ ಸುವರ್ಣ ಬೆಳಕು ಪೌಂಡೇಷನ್ ನಿಂದ ಅಭಿನಂದನಾ ಸಮಾರಂಭ.

ಕೋವಿಡ್ ಸಂಧರ್ಭದಲ್ಲಿ ಮೈಸೂರಿನ ಬಡಜನರಿಗೆ ಹಾಗೂ ಸಾರ್ವಜನಿಕರಿಗೆ, ಅಂಗವಿಕಲರಿಗೆ ಆಹಾರ ವಿತರಣೆ ಮತ್ತು ಅವಶ್ಯಕ ವಸ್ತುಗಳ ದಿನಸಿ ಕಿಟ್ ವಿತರಣೆ ಹಾಗೂ ಮೈಸೂರು ಮೃಗಾಲಯದ ಪ್ರಾಣಿ ದತ್ತು ತೆಗೆದುಕೊಂಡಿರುವ ಸಾರ್ಥಕತೆ ಮೆರೆದಿರುವ ಮೂಲಕ ಸಮಾಜ ಸೇವೆ ಮಾಡಿದವರಿಗೆ ಕೋವಿಡ್ ನೆರವು ಅಭಿನಂದನಾ ಪತ್ರ.ಜುಲೈ 19 ರ ಸಂಜೆ 5-00.ಘಂಟೆಗೆ ಸ್ಥಳ ನಮನ ಕಲಾಮಂಟಪ ಕೃಷ್ಣಮುರ್ತಿಪುರಂ.ರಾಮ ಮಂದಿರ ಹಿಂಭಾಗ ಇವರಿಗೆ.ಗೌರವ ಸನ್ಮಾನ ಮಾಡಿ ಅಭಿನಂದಿಸಲಾಗುವುದು.

ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯಸರ್ಕಾರ ಲಾಕ್ಡೌನ್ ನಿಯಮವನ್ನು ಏರಿದ ಸಂಧರ್ಭದಲ್ಲಿ ಸಂಕಷ್ಟದಲ್ಲಿದ್ದ ಮೈಸೂರಿನ ದೀನದಲಿತರಿಗೆ,ಆಟೋಚಾಲಕರಿಗೆ,ಅಂಗವಿಕಲರಿಗೆ ಹಾಗೂ ಸಾರ್ವಜನಿಕರಿಗೆ ಕೋವಿಡ್ ನೆರವು ಅಭಿನಂದನಾ ಪತ್ರವನ್ನು ನೀಡಲಾಗುತ್ತಿದ್ದು ಮುಖ್ಯ ಅತಿಥಿಗಳಾಗಿ ಡಾ. ರೇಣುಕಾ ಪ್ರಸಾದ್ ಮದುಮೇಹ ತಜ್ಞರು, ಶ್ರೀ.ವತ್ಸ ಮೈಸೂರು ನಗರ ಬಿ.ಜೆ.ಪಿ ಅಧ್ಯಕ್ಷರು ಹಿರಿಯ ಸಮಾಜ ಸೇವಕ ರಘುರಾಂ ವಾಜಪೇಯಿ ರವರು ಆಗಮಿಸಲಿದ್ದಾರೆ.

ನಟರಾಜ್ ಜೋಯಿಸ್ ಮೈಸೂರಿನ ಖಾಸಾಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆ ಸೇವೆ ಮಾಡುವ ಸಿಬ್ಬಂದಿಗಳಿಗೆ ದಿನ ನಿತ್ಯ ಊಟ ಉಪಚಾರ ನೀಡುವಲ್ಲಿ ಮಾನವೀಯತೆ ಮೆರದಿದ್ದಾರೆ.

ಎಡಿನ್ ಸಂಸ್ಥೆ :ಎಡಿನ್ ಸಂಸ್ಥೆಯವರು ಎಲೆಮರೆಕಾಯಿಯಾಗಿ ಅಪಾರ ಸಾಮಾಜಿಕ ಸೇವೆಯನ್ನು ನೀಡುತ್ತಿದ್ದಾರೆ.ಎಡಿನ್ ಅವರು ಮೈಸೂರಿನ ಕೆಲ ಬಡ ಕುಟುಂಬಗಳಿಗೆ ಹಾಗೂ ನಿರಾಶ್ರಿತರಿಗೆ ನಿರ್ಗತಿಕರಿಗೆ ದಿನ ನಿತ್ಯ ಊಟ ಹಾಗು ದಿನಸಿ ಕಿಟ್ ವಿತರಣೆ ಮಾಡುವಲ್ಲಿ ಪ್ರಮಖ ಪಾತ್ರ ವಹಿಸಿದ್ದಾರೆ.

ವಿ.ಕೆ.ಎಸ್ ಪೌಂಢೇಶನ್:ವಿ.ಕೆ.ಎಸ್ ಪೌಂಢೇಶನ್ ಮೂಲಕ ಸಮಾಜ ಸೇವೆ.ಕೋವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಮೈಸೂರಿನ ಸಾರ್ವಜನಿಕರಿಗೆ ಸುಮಾರು 2000ಕ್ಕೂ ಅಧಿಕ ಮಾಸ್ಕ್, 50 ಲೀಟರ್ ಗೂ ಅಧಿಕ ಸ್ಯಾನಿಟೈಸರ್, 1000ಕ್ಕೂ ಅಧಿಕ ನಿರ್ಗತಿಕರಿಗೆ ಊಟದ ವ್ಯವಸ್ಥೆ ,500 ಕ್ಕೂ ಹೆಚ್ಚು ಆಹಾರ ಕಿಟ್ ಗಳನ್ನು ತಲುಪಿಸಿದ್ದಾರೆ. ಇದ್ದೆಲ್ಲವನ್ನು ವಿ.ಕೆ.ಎಸ್ ಫೌಂಡೆಷನ್ ವತಿಯಿಂದ ಮಾಡಿದ್ದಾರೆ.

ಫೈಟರ್ ಸ್ಪೋಟ್ರ್ಸ್ ವೇರ್:ಫೈಟರ್ ಸ್ಪೋಟ್ರ್ಸ್ ವೇರ್.ನ ಮಾಲೀಕರಾದ ಮಂಜುನಾಥ್ ಅವರು ಲಾಕ್ ಡೌನ್ ಸಮಯದಲ್ಲಿ ತಮ್ಮ ಸ್ವಂತ ಹಣದಿಂದ ತಮ್ಮ ಕೈಲಾದಷ್ಟು ಬಡ ದಿನಗೂಲಿ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಹೊಯ್ಸಳ ಕರ್ನಾಟಕ ಸಂಘ :ರಂಗನಾಥ್ ಎಸ. ಸಹಕಾರ್ಯದರ್ಶಿ ಹೊಯ್ಸಳ ಕರ್ನಾಟಕ ಸಂಘ.ದಿಂದ 350 ಸಾರ್ವಜನಿಕರಿಗೆ ಲಸಿಕೆ ನೀಡಿ ಸ್ಥಳದಲ್ಲಿ ಆರ್‍ಟಿಪಿಎಸ್ ಪರೀಕ್ಷೆ ಮಾಡವುಲ್ಲಿ ಯಶಶ್ವಿಯಾಗಿ ನೆಡಿಸಿದ್ದು. ಹೊಯ್ಸಳ ಸಂಘ ಸಾಕಷ್ಟು ಬಡವರಿಗೆ ದಿನ ನಿತ್ಯ ಬಳಸುವ ದಿನಸಿ ಸಾಮಗ್ರಿ ವಿತರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

ನಟರಾಜ್ ಜೋಯಿಸ್ ಮೈಸೂರಿನ ಖಾಸಾಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆ ಸೇವೆ ಮಾಡುವ ಸಿಬ್ಬಂದಿಗಳಿಗೆ ದಿನ ನಿತ್ಯ ಊಟ ಉಪಚಾರ ನೀಡುವಲ್ಲಿ ಮಾನವೀಯತೆ ಮೆರದಿದ್ದಾರೆ.

ಅಪೂರ್ವ ಶಿವಣ್ಣ ಮೈಸೂರು ಮೃಗಾಲಯ ಜಾಗ್ವರ್ ಪ್ರಾಣಿ ದತ್ತು ಪಡೆಯುವ ಮೂಲಕ ಪ್ರಾಣಿಗಳಿಗೆ ಸಂರಕ್ಷಣೆಗೆ ಕೈ ಜೋಡಿಸಿವುಲ್ಲಿ ಅಪೂರ್ವ ರವರು ಅಪೂರ್ವ ಸಾಧನೆಯ ಮಾಡಿದ್ದಾರೆ.

 

By admin