ಮೈಸೂರು, 18 ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮಕ್ಕೆ ಯೋಗ ಒಂದು ಸಮಗ್ರ ವಿಧಾನ. ದೇಹವನ್ನು ಚಲನಶೀಲವಾಗಿಸುವ ಜೊತೆಗೆ, ದೇಹದ ಭಂಗಿಯನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಬಲಪಡಿಸಲು ಯೋಗ ಸಹಾಯ ಮಾಡುತ್ತದೆ. ಯೋಗದ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜೂನ್ 21 ರಂದು ಬೆಳಿಗ್ಗೆ 7.00 ರಿಂದ 8.00 ರವರೆಗೆ ವರ್ಚುವಲ್ ಯೋಗ ಸೆಷನ್ ಆಯೋಜಿಸುತ್ತಿದೆ.
ಖ್ಯಾತ ಕ್ಷೇಮ ಸಲಹಾತಜ್ಞ ಮತ್ತು ಲೈಫ್ ಕೋಚ್ ಸುಪ್ರಿಯಾ ದತ್ತಾ ಅವರು ವಿವಿಧ ರೀತಿಯ ಯೋಗಾಸನಗಳು ಮತ್ತು ಅದನ್ನು ಸೂಕ್ತವಾಗಿ ಮಾಡುವ ನೀಡಿನಲ್ಲಿ ಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ.ಈ ವಿಶ್ವ ಯೋಗ ದಿನದಂದು, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗದ ಪ್ರಯೋಜನಗಳನ್ನು ತಿಳಿಸುವ ಉದ್ದೇಶದಿಂದ ಪ್ರತಿಯೊಬ್ಬರನ್ನೂ ತಲುಪಲು ಆಸ್ಪತ್ರೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಆನ್‍ಲೈನ್ ಸೆಷನ್ನಲ್ಲಿ ಭಾಗವಹಿಸಲು ಆಸಕ್ತರು 9480363494 | 7829128776 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸೀಮಿತ ಸ್ಲಾಟ್‍ಗಳಿವೆ ಮತ್ತು ಯಾವುದೇ ನೋಂದಣಿ ಶುಲ್ಕವಿಲ್ಲ.ವರ್ಚುವಲ್ ಸೆಷನ್ನಲ್ಲಿ ಭಾಗವಹಿಸಲು ಬಳಸಬಹುದಾದ ಲಿಂಕ್- – https://meet.google.com/hux-afhc-tbpಇಂತಹ ಸೆಷನ್ಗಳನ್ನು ಆಯೋಜಿಸುವ ಪ್ರಾಮುಖ್ಯತೆಯನ್ನು ವಿವರಿಸಿದ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಮೈಸೂರು (ಮಣಿಪಾಲ್ ಆಸ್ಪತ್ರೆಗಳ ಒಂದು ಘಟಕ) ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ, “ಸಾರ್ವಜನಿಕರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ಸೆಷನ್ ಆಯೋಜಿಸಲು ನಾವು ನಿರ್ಧರಿಸಿದ್ದೇವೆ. ಯೋಗದ ಸಂಪೂರ್ಣ ಅಡಿಪಾಯ ಸಮಾಧಾನ ಚಿತ್ತದ ಮೇಲೆ ನಿರ್ಮಿತವಾಗಿದೆ, ಮತ್ತು ಈ ಕೋವಿಡ್ ಕಾಲದಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.
ನಾವು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ, ಹಾಗಾಗಿ ಈ ಆನ್‍ಲೈನ್ ಸೆಷನ್ನಲ್ಲಿ ಜನರು ಭಾಗವಹಿಸಲು ಮತ್ತು ತಜ್ಞರಿಂದ ಗರಿಷ್ಠ ಲಾಭ ಪಡೆಯಲು ನಾವು ಒತ್ತಾಯಿಸುತ್ತೇವೆ, ”ಎಂದರು. ವೆಲ್ನೆಸ್ ಸಲಹಾತಜ್ಞೆ, ಲೈಫ್ ಕೋಚ್ ಸುಪ್ರಿಯಾ ದತ್ತಾ, ಜನರಿಗೆ ವಿವಿಧ ಯೋಗ ಭಂಗಿಗಳು / ಆಸನಗಳಲ್ಲಿ ತರಬೇತಿ ನೀಡಲಿದ್ದಾರೆ.
ಅವರು ಯೋಗದ ಬಗ್ಗೆ ಒಲವು ಹೊಂದಿದ್ದಾರೆ ಮತ್ತು ಫಿಟ್‍ನೆಸ್, ಯೋಗ ಮತ್ತು ಧ್ಯಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.ಯೋಗ ಸೆಷನ್ನ ಪ್ರಯೋಜನಗಳ ಕುರಿತು ಮಾತನಾಡಿದ, ಯೋಗ, ಧ್ಯಾನ ಮತ್ತು ಸ್ವಾಸ್ಥ್ಯದ ಕಟ್ಟುನಿಟ್ಟಿನ ಅನುಯಾಯಿಯೂ ಆಗಿರುವ ವೆಲ್ನೆಸ್ ಸಲಹಾತಜ್ಞೆ, ಲೈಫ್ ಕೋಚ್ ಸುಪ್ರಿಯಾ ದತ್ತಾ,”ನಮ್ಮ ಮನಸ್ಸು ಮತ್ತು ದೇಹವನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿದೆ. ಇದನ್ನು ಸಾಧಿಸಲು ಯೋಗ ಅತ್ಯುತ್ತಮ ಮಾರ್ಗ. ನಿಯಮಿತವಾಗಿ ಯೋಗ ಮಾಡುವುದರಿಂದ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ಒತ್ತಡ ಕಡಿಮೆಯಾಗುತ್ತದೆ ಮತ್ತು ಇದರಿಂದ ವ್ಯಕ್ತಿ ಆರೋಗ್ಯಕರ ಜೀವನ ನಡೆಸಬಹುದು. ಯೋಗವು ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಅಭ್ಯಾಸವಾಗಿದ್ದು,
ನೂರಾರು ವರ್ಷಗಳಿಂದ ಬಳಕೆಯಲ್ಲಿದೆ. ಯೋಗ ಒಂದು ನಿರ್ದಿಷ್ಟ ಪರಿಸ್ಥಿತಿಗೆ ಮಾತ್ರವಲ್ಲ, ಬದಲಾಗಿ ಇದು ಸಂಪೂರ್ಣ ದೇಹವನ್ನು ಕೇಂದ್ರೀಕರಿಸುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮ ಸಾಧಿಸಲು ಸಹಾಯ ಮಾಡುತ್ತದೆ, ” ಎಂದರು.