ಫ್ಲೋರಿಡಾ : ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ರಾಜ್ಯದ ಕರಾವಳಿಉಡುಪಿ  ಜಿಲ್ಲೆಯ ಸುಂದರಿ ಮೂರನೆ ರನ್ನರ್ ಅಪ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಉಡುಪಿ ಜಿಲ್ಲೆಯ ಉದ್ಯಾವರದ ಆನ್ಲೈನ್ ಕ್ಯಾಸ್ಟೆಲಿನೋ ಮೂರನೇ ರನ್ನರ್ ಅಪ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ . ಮೂಲತಃ ಉದ್ಯಾವರದ ನಿವಾಸಿಯಾಗಿರುವ ಕ್ಯಾಸ್ಟಲಿನೊ ಇತ್ತೀಚೆಗೆ ಊರಿಗೆ ಬಂದಿದ್ದರು . ಮುಂಬೈನಲ್ಲಿ ವಾಸಿಸುತ್ತಿರುವ ಕ್ಯಾಸ್ಟೆಲಿನೋ ರಜೆಯಲ್ಲಿ ಊರಿಗೆ ಭೇಟಿ ನೀಡುತ್ತಿದ್ದಾರೆ . ಕ್ಯಾಸ್ಟೆಲಿನೋ ಸಾಧನೆಗೆ ಉದ್ಯಾವರದ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

By admin