ದಿ. 5.3.1933 ರಂದು ಧರ್ಮಪುರಿಬಳಿ ಜನಿಸಿದ ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣಶಾಸ್ತ್ರಿ ೧೯೫೬ರಲ್ಲಿ ಬೆಳ್ಳಿತೆರೆಕಂಡ ಭಾಗ್ಯೋದಯ ಕನ್ನಡ ಫ಼ಿಲಂ ಮೂಲಕ ಸಿನಿಮಾಲೋಕಕ್ಕೆ ಪಾದಾರ್ಪಣೆ. ನಾಯಕನಟನಾಗಿ ಎಂಟ್ರಿಕೊಟ್ಟು ಐವತ್ತರವತ್ತು ಚಿತ್ರದಲ್ಲಿ ಉತ್ತಮವಾಗಿ ನಟಿಸಿದರೂ ದುರದೃಷ್ಟವಶಾತ್ ಖಳನಾಯಕನಾಗಿ ಅಭಿನಯಿಸಲು ಅಂಟಿಕೊಂಡ ಮಹಾನ್ ಕಲಾವಿದ! ಕನ್ನಡ ಚಿತ್ರರಂಗದ ಮೊಟ್ಟಮೊದಲ ಕಲರ್ ಸಾಮಾಜಿಕ ಫ಼ಿಲಂ ಭಲೇಬಸವದ ಹೀರೋ! ೧೦೦ನೇಚಿತ್ರ ಸೇಡಿಗೆಸೇಡುವಿನಲ್ಲಿ ದ್ವಿಪಾತ್ರ ವಹಿಸಿ ನೂತನದಾಖಲೆ ಬರೆದರಲ್ಲದೆ ಚಂದನವನದ ಚೊಚ್ಚಲ ಹೀರೋ-ಕಂ-ವಿಲನ್-ಕಂ-ಪೋಷಕನಟ! ಆಕಾಲಕ್ಕೆ ಕೊರತೆಇದ್ದ ಹೀರೊಗಳ ಪಟ್ಟಿಗೆ ಸೇರಿದ ಉತ್ತಮ ದೇಹದಾರ್ಢ್ಯದ ತೆಲುಗು ಮಾತೃಭಾಷೆಯ ಈಯುವನಟ ಅನ್ಯಭಾಷೆ ಸಿನಿಮಾದಲ್ಲೂ ನಟಿಸಿ ಕನ್ನಡದಕೀರ್ತಿ ಮೆರೆದರು. ರಾಜ್‌ಚಿತ್ರಗಳಲ್ಲಿ ಅವರಷ್ಟೆ ಸರಿಸಮ ನಟಿಸಿ ಮನ್ನಣೆಗಳಿಸಿದ್ದ ಜನಪ್ರಿಂiiನಟ. ಉದಯ್-ಕಲ್ಯಾಣ್-ರಾಜ್ ಕುಮಾರತ್ರಯರ ಭೂದಾನ ಫ಼ಿಲಂ ಯಶಸ್ಸು, ಹಣ, ಪ್ರಶಸ್ತಿ, ತಂದುಕೊಟ್ಟಿತ್ತು!
ಪಾರ್ವತಿಕಲ್ಯಾಣದ ನಾರದಮುನಿ ಪಾತ್ರವನ್ನು ಉತ್ತಮವಾಗಿ ನಟಿಸಿ, ಬಾಲನಾಗಮ್ಮ ಚಿತ್ರದಲ್ಲಿ ರಾಜ್‌ರಪಾತ್ರಕ್ಕಿಂತಲೂ ಹೆಚ್ಚುಅವಧಿಗೆ ’ಮಾಯಾಮರಾಠ’ ಪಾತ್ರದಲ್ಲಿ ಮಿಂಚಿ ಸರ್ವಜನಪ್ರಿಯರಾದರು. ಚಂದ್ರಹಾಸದ ದುಷ್ಟಬುದ್ದಿ, ಬೆಟ್ಟದಹುಲಿಯ ಭೈರವನ ಪಾತ್ರವಂತೂ ಚಿರಸ್ಮರಣೀಯ! ಚಂದವಳ್ಳಿಯತೋಟ, ಇಮ್ಮಡಿಪುಲಿಕೇಶಿ, ಸತ್ಯಹರಿಶ್ಚಂದ್ರ, ಬಂಗಾರದಹೂ, ವೀರಕೇಸರಿ, ಹಸಿರುತೋರಣ, ಧೂಮಕೇತು, ಕಾಸಿದ್ರೆಕೈಲಾಸ, ಮುಂತಾದ ಅನೇಕ ಚಿತ್ರಗಳಲ್ಲಿ ರಾಜ್-ಉದಯ್ ಇಬ್ಬರಲ್ಲಿ ಯಾರದು ಅತ್ಯುತ್ತಮ ಅಭಿನಯ? ಎಂಬುದನ್ನು ಪ್ರೇಕ್ಷಕರಿಂದಲೂ ವಿಮರ್ಷಕರಿಂದಲೂ ಪ್ರಶಸ್ತಿಸಮಿತಿಯ ತೀರ್ಪುಗಾರರಿಂದಲೂ ತೀರ್ಮಾನಿಸಲು ಕಷ್ಟಕರವಾಗಿತ್ತು! ಇಂಥ ಗೊಂದಲ-ಜಿಜ್ಞಾಸೆ ನಿವಾರಿಸಲು ಪ್ರಶಸ್ತಿ ಸಮಿತಿಗೆ ಇಕ್ಕಟ್ಟಿನ ಪರಿಸ್ಥಿತಿ ಉಂಟದಾಗ ವಿಧಿಯಿಲ್ಲದೆ ಪರಭಾಷಾ ಚಿತ್ರರಂಗದ ತಜ್ಞರ ಸಮಿತಿ ರಚಿಸಿ ಅವರು ನೀಡಿದ ವರದಿಯ ಆಧಾರದಮೇಲೆ ಯಾರಿಗೆ ಪ್ರಶಸ್ತಿ ನೀಡಬೇಕೆಂದು ನಿರ್ಧರಿಸಲಾಯಿತು. ೩ಬಾರಿ ಅತ್ಯುತ್ತi ನಟನೆಗೆ ನೀಡುವ ರಾಜ್ಯ ಪ್ರಶಸ್ತಿಯನ್ನು ರಾಜ್-ಉದಯ್ ಇಬ್ಬರಿಗೂ ಹಂಚಿಕೊಡುವ ಮmತಲುಪಿದ್ದು ಇವರ ಅದ್ಭುತ ಅಭಿನಯಕ್ಕೆ ಉದಾಹರಣೆ. ಇದು ವಿಚಿತ್ರವೆನಿಸಿದರೂ ಸತ್ಯ! ಕುಳ್ಳಏಜೆಂಟ್ ಸಾಹಸಸಿಂಹ ಚಿತ್ರಗಳಲ್ಲಂತೂ ಇವರದು ಪ್ರಚಂಡ ನಟನೆ.
ಯಾವುದೆ ಪಾತ್ರವನ್ನು ಆಚಿತ್ರದ ಹೀರೋವಿನ ಅಥವಾ ಅದಕ್ಕೂಹೆಚ್ಚಿನ ಮಟ್ಟಕ್ಕೆ ನಟಸಾಮ್ರಾಟ್ ಅಭಿನಯಿಸುತ್ತಿದ್ದು ಅಷ್ಟರಮಟ್ಟಿಗಿತ್ತು ಅವರ ಕಲಾಪ್ರತಿಭೆ. ಆಕಾಲಕ್ಕೆ ಕಲಾಕೇಸರಿಯ ಕಂಚುಕಂಠಧ್ವನಿ ಡೈಲಾಗ್‌ಡೆಲಿವರಿ ಬಾಡಿಲ್ಯಾಂಗ್‌ವೇಜ್ ಸ್ವಾಭಿಮಾನ ಕೆಲವು ಹೀರೋಗಳಿಗೆ, ವಿಶೇಷವಾಗಿ ಶತ್ರ್ರುಗಳಿಗೆ ಸಿಂಹಸ್ವಪ್ನವಾಗಿತ್ತು! ಇವರನ್ನು ಕಂಡರಾಗದವರು ಇವರ ಗುಣಗಳನ್ನು ತಪ್ಪಾಗಿ ಬಿಂಬಿಸಿ, ದುರಹಂಕಾರಿ ಎಂದು ಅಪಪ್ರಚಾರ ಮಾಡಿದ್ದುಂಟು? ತತ್ಪರಿಣಾಮ, ಇವರಿಗೆ ಫ಼ಿಕ್ಸ್‌ಆಗಿದ್ದ ಅನೇಕ ಚಿತ್ರದ ಹೀರೊ ಪಾತ್ರ ಕೈತಪ್ಪಿದವು? ಕಠಾರಿವೀರ ಶೂಟಿಂಗ್‌ನ ಕತ್ತಿವರಸೆ ಸ್ಟಂಟ್ ಸಂದರ್ಭದಲ್ಲಿ ಅಕಸ್ಮಾತ್ ರಾಜ್ ಕಣ್ಣಿನ ಹತ್ತಿರಕ್ಕೆ ಕತ್ತಿಯು ತಗುಲಿ ಗಾಯವಾಗಿ ಕೂದಲೆಳೆಯಷ್ಟು ಅಂತರದಲ್ಲಿ ರಾಜ್ ಎಡಗಣ್ಣು ಎಗರಿಹೋಗದೆ ಉಳಿದುಕೊಂಡಿತು! ಈಚಿಕ್ಕ ಆಕಸ್ಮಿಕ ಘಟನೆಯು ಉಗ್ರಸ್ವರೂಪ ತಾಳುವಂತೆ ಬಣ್ಣಕಟ್ಟಿತ್ತು ಇವರ ಹಿತ-ಶತ್ರುಗಳ ಗ್ಯಾಂಗ್. ಮೊದಲಬಾರಿಗೆ ಚಿತ್ರಭಿಮಾನಿಗಳಲ್ಲಿ ಗುಂಪುಗಾರಿಕೆ ಪ್ರಾರಂಭವಾದ ದುರಂತಕಾಲ? ರಾಜ್ಯಾದ್ಯಂತ ಗಂಭೀರ ಚರ್ಚೆಗೆ ಗ್ರಾಸವಾಗಿದ್ದ ಕೆmಸಂದರ್ಭವದು! ಸತ್ಯಮೇವ ಜಯತೆ….ಕಾಲಕ್ರಮೇಣ ಎಲ್ಲವೂ ಸರಿಹೋಯ್ತು!
ದಿ.೨೬.೧೨.೧೯೮೫ರಂದು ಕೇವಲ ೫೨ನೇವಯಸ್ಸಲ್ಲಿ ಅಕಾಲಮರಣಕ್ಕೀಡಾದ ಕಲಾಕೇಸರಿ ನಟಸಾಮ್ರಾಟ್ ನಿಧನದಿಂದ ತುಂಬಲಾರದ ನಷ್ಟಉಂಟಾಯ್ತು. ರಾಜ್ ಮೊದಲ್ಗೊಂಡು ಪ್ರತಿಯೊಬ್ಬ ಕಲಾವಿದರೂ ಮಮ್ಮಲ ಮರುಗಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು, ಕೋಟ್ಯಾಂತರ ಅಭಿಮಾನಿಗಳು ಕಂಬನಿಗರೆದರು. ಇಂಥ ಮೇರುನಟನ ಪುತ್ರ ವಿಶ್ವವಿಜೇತ ಹತ್ತಾರುವರ್ಷ ೨೩ಚಿತ್ರಗಳಲ್ಲಿ ವಿಲನ್-ಪೋಷಕ ಪಾತ್ರದಲ್ಲಿ ನಟಿಸಿ ಚಿತ್ರರಂಗದಿಂದ ದೂರಸರಿದರು. ೧೯೯೦ರಲ್ಲಿ ಕಿಲಾಡಿತಾತ ಚಿತ್ರ ನಿರ್ಮಿಸಿ-ನಿರ್ದೇಶಿಸಿದರು. ತದ ನಂತರ ಕಿರುತೆರೆಯ ಕೆಲವು ಟಿ.ವಿ.ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಅದೇಕೋಏನೋ ಎಲ್ಲರಂಗದಿಂದಲೂ ದೂರವಾಗಿ ಮರೆಯಾದರು?!
*ಕುಮಾರಕವಿ ಬಿ.ಎನ್.ನಟರಾಜ್[೯೦೩೬೯೭೬೪೭೧]
ಬೆಂಗಳೂರು ೫೬೦೦೭೨
೧೯೬೭ನ
1967£À