ಮೈಸೂರು : ಇಂದಿನ ಜೀವನ ಶೈಲಿಗಳಲ್ಲಿ ದಿನಮಾನಗಳಲ್ಲಿ ಆರೋಗ್ಯ ತಪಾಸಣಾ ಖರ್ಚುಗಳು ದಿನೇ ದಿನೇ ಹೆಚ್ಚಾಗುತ್ತಿರುದರಿಂದ ನಾಗರೀಕರು ಉಚಿತ ಆಯುರ್ವೇದ ತಪಾಸಣಾ ಶಿಬಿರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಹಿರಿಯ ಪತ್ರಕರ್ತರಾದ ಎಸ್.ಟಿ.ರವಿಕುಮಾರ್ ಸಾರ್ವಜನಿಕರಿಗೆ ಸಲಹೆ ನೀಡಿದರು.
ನಗರದ ಕಾವೇರಿ ಆಯುರ್ವೇದ ಆಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸುಲಭವಲ್ಲ, ಸರ್ಕಾರಗಳೇ ಕೈ ಚೆಲ್ಲಿ ಕುಳಿತಿವೆ, ಸೇವಾ ಮನೋಭಾವನೆ ಇದ್ದವರು ಮಾತ್ರ ಇಂತಹ ಸಾಹಸಕ್ಕೆ ಕೈ ಹಾಕುತ್ತಾರೆ.
ಇದೇ ಬಂಡವಾಳವನ್ನು ಒಂದು ವಾಣಿಜ್ಯ ವ್ಯವಹಾರಕ್ಕೆ ಬಳಸಿದರೆ ಇದರ ಹತ್ತು ಪಟ್ಟು ಸಂಪಾದನೆ ಮಾಡಬಹುದು. ಆದರೇ, ಜನಸೇವೆಯಲ್ಲಿಯೇ ಸಾರ್ಥಕತೆಯನ್ನು ಕಾಣುತ್ತಿರುವ ಡಾ.ಜಿ.ಆರ್.ಚಂದ್ರಶೇಖರ್ ಅವರು ನಗರದಲ್ಲಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸಿರುವುದಲ್ಲದೇ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವ ಮೂಲಕ ಈ ಭಾಗದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವುದು ಶ್ಲಾಘನೀಯ ಎಂದರಲ್ಲದೇ, ಡಾ.ಚಂದ್ರಶೇಖರ್ ಅವರ ಎಲ್ಲ ಸೇವಾಕಾರ್ಯಗಳನ್ನು ಪತ್ರಕರ್ತರು ಪ್ರೋತ್ಸಾಹಿಸುತ್ತಾರೆ. ನಾವು ಸದಾಕಾಲ ನಿಮ್ಮ ಜತೆಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾದೇವಿ, ಹಿರಿಯ ಪತ್ರಕರ್ತ ಎಸ್.ಟಿ.ರವಿಕುಮಾರ್, ನೇಚರ್‌ಬೆಲ್ ವೆಲ್‌ನೆಸ್ ಸೆಂಟರ್ ನಿರ್ದೇಶಕರಾದ ಡಾ.ಬಿ.ಗುರುಬಸವರಾಜ, ಎಂಐಟಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ವಿ.ಕೃಷ್ಣಮೂರ್ತಿ, ಹಿರಿಯ ಆಯುರ್ವೇದ ವೈದ್ಯರಾದ ಡಾ.ಸದಾನಂದ ಪರ‍್ಗೊಂಡೆ ಅವರುಗಳನ್ನು ಡಾ.ಚಂದ್ರಶೇಖರ್ ಫೌಂಡೇಷನ್ ಮುಖ್ಯಸ್ಥರಾದ ಡಾ.ಜಿ.ಆರ್.ಚಂದ್ರಶೇಖರ್ ಮತ್ತು ಡಾ.ಸರಳ ಚಂದ್ರಶೇಖರ್ ಅವರುಗಳು ಸನ್ಮಾನಿಸಿ ಗೌರವಿಸಿದರು.ಉಚಿತ ತಪಾಸಣಾ ಶಿಬಿರದಲ್ಲಿ ಭಾಗಿಯಾದವರಿಗೆ ಶೇ.೫೦ ರಿಯಾಯತಿ ದರದಲ್ಲಿ ಔಷಧಿಗಳನ್ನು ಸಹ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾವೇರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ನಿರ್ದೇಶಕರಾದ ಡಾ.ಎಸ್.ಕೃಷ್ಣಪ್ರಸಾದ್, ಪ್ರಾಂಶುಪಾಲರಾದ ಡಾ.ರಾಮಚಂದ್ರ ನೇಸರ್ಗಿ
ವೈದ್ಯಕೀಯ ಅಧೀಕ್ಷಕರಾದ ಡಾ.ವಿ.ಪೂರ್ಣಿಮಾ ಇದ್ದರು.