ಉತ್ತರ ಭಾರತದ ಹಿರಿಯನಟ ಪೃಥ್ವಿರಾಜ್‌ಕಪೂರ್‌ಗೆ ರಾಜ್‌ಕಪೂರ್, ಶಮ್ಮಿಕಪೂರ್, ಶಶಿಕಪೂರ್ ಮೂವರು ಮಕ್ಕಳು ಬಾಲಿವುಡ್‌ನಲ್ಲಿ ರುವಂತೇ, ದಕ್ಷಿಣ ಭಾರತದ ಹಿರಿಯನಟ ಆರ್.ನಾಗೇಂದ್ರರಾಯರ ಮೂವರು ಮಕ್ಕಳೂ ಆರ್.ಎನ್.ಜಯಗೋಪಾಲ್, ಆರ್.ಎನ್. ಕೃಷ್ಣಪ್ರಸಾದ್, ಆರ್.ಎನ್.ಸುದರ್ಶನ್ ಸ್ಯಾಂಡಲ್‌ವುಡ್‌ನಲ್ಲಿದ್ದಾರೆ! ಹಾಗಾಗಿ, ಕನ್ನಡದ ಪೃಥ್ವಿರಾಜ್‌ಕಪೂರ್ ಎಂದು ಕರೆಯಲ್ಪಡುವ ಆರ್.ಎನ್.ಆರ್. ಚಿತ್ರರಂಗದ ಭೀಷ್ಮ!

 ಬಾಲ್ಯದಿಂದಲೆ ನಾಟಕದ ಗೀಳು ಹಿಡಿಸಿಕೊಂಡ ಆರ್.ಎನ್.ಆರ್. ೮ನೇ ವಯಸ್ಸಿಗೆ ರಂಗಪ್ರವೇಶ ಮಾಡಿದರು. ಟೈಗರ್ ವರದಾಚಾರ್ಯರ ‘ರತ್ನಾವಳಿ ನಾಟಕ ಕಂಪನಿ’ ಮತ್ತು ‘ಶ್ರೀಚಾಮುಂಡೇಶ್ವರಿ ನಾಟಕ ಕಂಪನಿ’ ಯಲ್ಲಿ ಮಹಿಳೆಯರೂ ನಾಚುವಂತೆ  ಸ್ತ್ರೀ-ಪಾತ್ರಗಳನ್ನು ಮಾಡಿ ಶ್ರೀಮಂತರ ಕಣ್ಣಿಗೆ ಬಿದ್ದ ‘ಚೆಲು[ವ]ವೆ’ ಆಗಿದ್ದರು?!  ೧೯೩೧-೩೮ವರೆಗೆ ೫೦ಕ್ಕು ಹೆಚ್ಚು ಹಿಂದಿ ಮತ್ತು ಮರಾಠಿ ಸಿನಿಮಾ-ನಾಟಕಗಳಲ್ಲಿ ಅಭಿನಯಿಸಿ ಆ ಕಾಲಕ್ಕೆ ಬಾಂಬೆಯ[ಬಾಲಿವುಡ್ನ]ಲ್ಲಿ ಕನ್ನಡ ಬಾವುಟ ಹಾರಿಸಿದ್ದರು!  ಪಾರಿಜಾತಪುಷ್ಪಹರಣಂ, ಅನ್ಬೇದೈವಂ, ಕೋವಲನ್, ಜಾತಕಂ, ನಾಗದೇವತೈ, ಮುಂತಾದ ತಮಿಳ್ ಚಿತ್ರಗಳಲ್ಲೂ, ರಾಮದಾಸು, ಭೂಕೈಲಾಸ, ಶ್ರೀಕೃಷ್ಣಲೀಲ ಮುಂತಾದ ತೆಲುಗು ಚಿತ್ರ ಗಳಲ್ಲೂ ಮಾಲೈಪೊಳುತ್ತಿನ್ ಮಯಕ್ಕತಿಲೆ, ಮಲಯಾಳಂ ಚಿತ್ರಗಳಲ್ಲೂ ನಟಿಸಿ ಕನ್ನಡದ ಕೀರ್ತಿ ಹರಡಿದ್ದರು!  ೧೯೩೪ರಲ್ಲಿ ತೆರೆಕಂಡ ಕನ್ನಡದ ಚೊಚ್ಚಲ ಚಿತ್ರ ಸತೀಸುಲೋಚನಾಗೆ ಹೀರೋ ವಂಚಿತ ನತದೃಷ್ಟ ನಟ? ತಮಗೆ ಸುವರ್ಣಾವಕಾಶ ಕೈ ತಪ್ಪಿದಮೇಲೆ ನಿರಾಶೆಯಿಂದ ಬೆಂಗಳೂರಿಗೆ ಹಿಂದಿರುಗಿ ೧೯೩೫ರಲ್ಲಿ ತಮ್ಮದೇ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ ಸ್ಥಾಪಿಸಿ ನೂರಾರು ಪೌರಾಣಿಕ-ಐತಿಹಾಸಿಕ-ಸಾಮಾಜಿಕ ನಾಟಕ ಪ್ರದರ್ಶನ ನೀಡಿ ಬ್ರಿಟಿಷ್ ಅಧಿಕಾರಿ, ಮೈಸೂರು ಮಹಾರಾಜ ಸೇರಿದಂತೆ ಎಲ್ಲರಿಂದಲೂ ‘ಸೈ’ ಎನಿಸಿಕೊಂಡರು. ಭೂಕೈಲಾಸ ನಾಟಕ [ಕನ್ನಡ,ತಮಿಳು,ತೆಲುಗು] ೩ಭಾಷೆಗಳಲ್ಲಿ [೧೯೩೮,೧೯೪೦,೧೯೫೮] ೩ಬಾರಿ ನಿರ್ಮಾಣಗೊಂಡು ಅಖಿಲ ಭಾರತ ದಾಖಲೆ ನಿರ್ಮಿಸಿತು! ೧೯೫೧ರಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಮುತ್ತುರಾಜ್[ಕುಮಾರ್] ಚಿಕ್ಕ[ನಾರದ]ಪಾತ್ರದಲ್ಲಿ ಕಾಣಿಸಿಕೊಂಡಿದ್ದುದು ಆಶ್ಚರ್ಯಕರ ಇತಿಹಾಸ!

ಆರ್.ಎನ್.ಆರ್.ಪಿಕ್ಚರ್ಸ್ಮೂಲಕ ೧೯೫೧೭೦ವರೆಗೆ ೨೨ಫ಼ಿಲಂ ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಪ್ರೇಮದಪುತ್ರಿ, ನಗುವಹೂವು ಮುಂತಾದ ಚಿತ್ರಗಳು ರಾಷ್ಟ್ರರಾಜ್ಯಪ್ರಶಸ್ತಿ ಗಳಿಸಿದವುಇವರು ನಟಿಸಿದ ಕಟ್ಟಕಡೆಯ ಫ಼ಿಲಂ ಪ್ರೇಮಪಾಶ. ತುಳು ಕೊಂಕಣಿ ಸೇರಿದಂತೆ ಒಟ್ಟು ೮ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಫ಼ಿಲಂ ಇಂಡಷ್ಟ್ರಿಯ ದಿಗ್ಗಜರಾದರುಕನ್ನಡ ಚಿತ್ರರಂಗಕ್ಕೆ ಹೊಸತನದ ಮುನ್ನುಡಿ ಬರೆದು ೭೨ವರ್ಷ ಸಿನಿಮಾನಾಟಕ ಕ್ಷೇತ್ರಗಳಲ್ಲಿ ಕಲಾಸೇವೆಗೈದು ನಟಸಾಮ್ರಾಟನಾಗಿ ಮೆರೆದರು! ರತ್ನಾಬಾಯಿಕಮಲಾಬಾಯಿ [ದ್ವಿ]ಪತ್ನಿಯರನ್ನು ಹೊಂದಿದ್ದರು ಮಕ್ಕಳು ಮೊಮ್ಮಕ್ಕಳನ್ನು ಕಂಡು ದೇವರು ಪ್ರೇಕ್ಷಕರನ್ನು ಅಪಾರ ನಂಬಿದ್ದ ಧೀಮಂತ ಕಲಾವಿದ. ಅವರ ಸಿನಿಮಾಗೆ ಅವರದ್ದೇ ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳು ಹಾಗೂ ನಿರ್ಮಾಪಕ ನಿರ್ದೇಶಕ ಸಂಗೀತನಿರ್ದೇಶಕ ಹಿನ್ನೆಲೆಗಾಯಕ ಖಳನಟ ಹಾಸ್ಯನಟ ನಾಯಕನಟ ಪೋಷಕನಟ! ಸ್ಯಾಂಡಲ್ವುಡ್ ಆಲ್ಇನ್ಆಲ್ ಆರ್.ಎನ್.ಆರ್. ದಿ...೧೯೭೭ರಂದು ೮೦ನೇ ವಯಸ್ಸಲ್ಲಿ ಬೆಂಗಳೂರಲ್ಲಿ ದೈವಾಧೀನರಾದರು! ಇವರ ಅಭಿನಯದ ಕನ್ನಡ ಚಿತ್ರಗಳು:-

ಸತೀಸುಲೋಚನ

ವಸಂತಸೇನಾ

ಸತ್ಯಹರಿಶ್ಚಂದ್ರ

 ಮಹಾತ್ಮಕಬೀರ್

ಜಾತಕಫ಼ಲ

ಆದರ್ಶಸತಿ

ಭಕ್ತಮಾರ್ಕಂಡೇಯ

 ಶ್ರೀರೇಣುಕಾಮಹಾತ್ಮೆ

ಬೆಟ್ಟದಕಳ್ಳ

ಮಹಿರಾವಣ

ಪ್ರೇಮದಪುತ್ರಿ

ರಾಯರಸೊಸೆ

 ಭೂಕೈಲಾಸ

ರಣಧೀರಕಂಠೀರವ

 ಆಶಾಸುಂದರಿ     

ವಿಜಯನಗರದವೀರಪುತ್ರ

ನಾಗಾರ್ಜುನ

ಗಾಳಿಗೋಪುರ

 ಕಲಿತರೂಹೆಣ್ಣೇ

ವೀರಕೇಸರಿ

ಆನಂದಬಾಷ್ಪ

ಪತಿಯೇದೈವ

ಅನ್ನಪೂರ್ಣ

ಚಂದ್ರಹಾಸ

ಸತ್ಯಹರಿಶ್ಚಂದ್ರ

ನನ್ನಕರ್ತವ್ಯ

 ಬಾಲರಾಜನಕಥೆ

 ಮದುವೆ ಮಾಡಿ ನೋಡು

ಎಂದೂನಿನ್ನವನೇ

ತೂಗುದೀಪ 

ಬದುಕುವದಾರಿ

ಮಧುಮಾಲತಿ

ಶ್ರೀಕನ್ಯಕಾಪರಮೇಶ್ವರಿಕಥೆ

ನಕ್ಕರೆಅದೇಸ್ವರ್ಗ

ಪುರಂದರದಾಸರು

ಜಾಣರಜಾಣ

ಪ್ರೇಮಕ್ಕೂಪರ್ಮಿಟ್ಟೇ

ಹಣ್ಣೆಲೆಚಿಗುರಿದಾಗ

ಅತ್ತೆಗೊಂದುಕಾಲ–     

ಸೊಸೆಗೊಂದುಕಾಲ

ಪ್ರವಾಸಿಮಂದಿರ

ಸೀತಾ

ನಮ್ಮಮಕ್ಕಳು ಮಕ್ಕಳೇಮನೆಗೆಮಾಣಿಕ್ಯ

ಕಣ್ಣುಮುಚ್ಚಾಲೆ   

ಶ್ರೀಕೃಷ್ಣದೇವರಾಯ

ಗೃಹಲಕ್ಷ್ಮಿ

ಕರುಳಿನಕರೆ

ನಾಡಿನಭಾಗ್ಯ

ಲಕ್ಷ್ಮೀಸರಸ್ವತಿ

ನನ್ನತಮ್ಮ ಅಳಿಯ ಗೆಳೆಯ

ಹೂಬಿಸಿಲು

 ಕುಲಗೌರವ

ನಗುವಹೂವು

ತಂದೆ ಮಕ್ಕಳು

ಸಾಕ್ಷಾತ್ಕಾರ

ನಾಮೆಚ್ಚಿದಹುಡುಗ

ಮಣ್ಣಿನ ಮಗಳು

ಪ್ರೊಫ಼ೆಸರ್‌ಹುಚ್ಚೂರಾಯ

          ಕುಮಾರಕವಿ ನಟರಾಜ್[೯೦೩೬೯೭೬೪೭೧]

                                     ಬೆಂಗಳೂರು೫೬೦೦೭೨