ಸರಗೂರು: ಎಚ್.ಡಿ.ಕೋಟೆ ಹಿಂದುಳಿದ ತಾಲೂಕನ್ನು ನೋಡಲ್ ಕ್ಷೇತ್ರವಾಗಿ ಪಡೆದು ನನ್ನ ಅಧಿಕಾರ ಅವಧಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ತೃಪ್ತಿ ತಂದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಚಲನಚಿತ್ರ ನಿರ್ಮಾಪಕ ಸಂದೇಶ್ ನಾಗರಾಜು ಹೇಳಿದರು.


ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದ ದೇವಸ್ಥಾನದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್ ಅವರು ಆಯೋಜಿಸಿದ್ದ ವಿಶೇಷ ಪೂಜೆ, ದಾಸೋಹ ಕಾರ್ಯಕ್ರಮಕ್ಕೆ ಭಾಗವಹಿಸಿ ಅವರು ಮಾತನಾಡಿದರು.
ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಸಂದರ್ಭದಲ್ಲಿ ಗಡಿಭಾಗ ಮತ್ತು ಹಿಂದುಳಿದಿರುವ ಕ್ಷೇತ್ರವಾಗಿರುವ ಕೋಟೆ ತಾಲೂಕನ್ನು ನೋಡಲ್ ತಾಲೂಕನ್ನಾಗಿ ಆಯ್ಕೆ ಮಾಡಿಕೊಂಡು ಅನೇಕ ಅಭಿವೃದ್ಧಿ ಕೆಲಸ ಮಾಡುವುದರೊಂದಿಗೆ ಅಧಿವೇಶನದಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಿ ಪರಿಹಾರವನ್ನು ಕಲ್ಪಿಸಿದ್ದೇನೆ. ಕ್ಷೇತ್ರ ವ್ಯಾಪ್ತಿಗೆ ರುವ ಪ್ರತಿ ಪ್ರಮುಖ ಸಮಸ್ಯೆಗಳನ್ನು ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕೆಲಸವನ್ನು ನಿರಂತರವಾಗಿ ಮಾಡಿರುವುದಾಗಿ ಅವರು ಹೇಳಿದರು.
ಚುನಾಯಿತ ಪ್ರತಿನಿಧಿಯಾದವರು ಮೊದಲು ನೊಂದವರಿಗೆ ದನಿಯಾಗಬೇಕು. ಅಂಥ ಕೆಲಸ ಮಾಡುವ ಮನೋಭಾವ ಹೊಂದಬೇಕು. ಆಗ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಕೆಲವೊಂದು ಕಾರಣಗಳಿಂದಾಗಿ ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರಬಹುದು ಎಂದು ಅವರು ಹೇಳಿದರು.


ನಾನು ಜನಪ್ರತಿನಿಧಿ ಆಗಲೀ ಇಲ್ಲದಿರಲಿ ಜನ ಸಾಮಾನ್ಯರ ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಚುನಾಯಿತಿ ಪ್ರತಿನಿಧಿಯಾದವರು ಮೊದಲು ನೊಂದವರಿಗೆ ದನಿಯಾಗಬೇಕು. ಅಂಥ ಕೆಲಸ ಮಾಡುವ ಮನೋಭಾವ ಹೊಂದಬೇಕು. ಆಗ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ ಎಂದರು.


ಜಿಪಂ ಮಾಜಿ ಸದಸ್ಯರಾದ ಚಿಕ್ಕವೀರನಾಯಕ, ರವಿ,ಮುಖಂಡರಾದ ಸಿವಿ ನಾಗರಾಜು, ಪುರದಕಟ್ಟೆ ಬಸವರಾಜು, ಪ್ರದೀಪ, ಗುರು, ಚೆನ್ನಪ್ಪ, ಶಿವಪ್ಪ, ಮಟಕೆರೆ ರಾಜೇಶ್, ಹೊಸಮಾಳ ಪ್ರಕಾಶ್, ಶ್ರೀನಿವಾಸ್, ಮಂಜು, ಶಂಭೂಗೌಡ, ಮಾರುತಿ, ಭೈರೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.