ಮೈಸೂರು, ಡಿಸೆಂಬರ್: ಮೊದಲನೆ ಹಂತದ ಗ್ರಾಮ ಪಂಚಾಯತಿ ಚುನಾವಣಾಯು ಯಶಸ್ವಿಯಾಗಿ ಮುಗಿದ ಹಿನ್ನೆಲೆಯಲ್ಲಿ, ಭಾನುವಾರ ನಡೆಯಲಿರುವ ಎರಡನೇ ಹಂತದ ಚುನಾವಣಾ ಸಿದ್ಧತೆಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಮೈಸೂರು ಉಪವಿಭಾಗದ ಟಿ.ನರಸೀಪುರ, ನಂಜನಗೂಡು, ಮೈಸೂರು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯತಿಯ 2ನೇ ಹಂತದ ಚುನಾವಣೆ ನಡೆಯಲಿದೆ ಎಂದರು.
ಒಂದೊಂದು ಪೊಲೀಂಗ್ ಸ್ಟೇಷನ್ ಗಳಿಗೂ 4 ಜನ ಅಧಿಕಾರಿಗಳು ಇದ್ದು, ಇಂದು ಅವರು ಬ್ಯಾಲೆಟ್ ಪೇಪರ್ ಹಾಗೂ ಮತದಾರರ ಪಟ್ಟಿ ಸರಿ ಇದೆಯಾ ಎಂದು ಪರಿಶೀಲಿಸಿ ಮತ ಕೇಂದ್ರಗಳಿಗೆ ಕೊಂಡೊಯ್ಯುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎ.ಸಿ. ವೆಂಕಟರಾಜು, ತಹಶೀಲ್ದಾರ್ ರಕ್ಷಿತ್, ತಾಲೂಕು ನೊಡಲ್ ಅಧಿಕಾರಿ ಸೋಮಶೇಖರ್, ಇ.ಓ. ಕೃಷ್ಣಕುಮಾರ್, ಬಿ.ಇ.ಒ. ಕೃಷ್ಣ, ಟಿ.ಹೆಚ್.ಒ. ಮಹದೇವ ಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.