೧೯೪೯ಮೇ೧೫ರಂದು ಕೋಲಾರಜಿಲ್ಲೆ ಜಡಲತಿಮ್ಮನಹಳ್ಳಿಯ ಶ್ರೀಮತಿನಾಗಮ್ಮ ಶ್ರೀಕೃಷ್ಣಪ್ಪ ದಂಪತಿಯ ಪುತ್ರರಾಗಿ ಜನಿಸಿದರು. ಪ್ರಾರಂಭದಿಂದಲೂ ತಮ್ಮ ಹಳ್ಳಿ ಹೋಬಳಿ ತಾಲ್ಲೂಕು ಸುತ್ತಮುತ್ತ ಪ್ರದರ್ಶನವಾಗುತ್ತಿದ್ದ ನಾಟಕಗಳಲ್ಲಿ ಅಭಿನಯಿಸಲು ಹಂಬಲಿಸುತ್ತಿದ್ದರು. ಆದರೆ ಸಂಪ್ರದಾಯ ಕುಟುಂಬದ ಶಿಸ್ತುಬದ್ಧ ಹಿರಿಯರ ನಿರಾ ಕರಣೆಯಿಂದ ಸಾಧ್ಯವಾಗಲಿಲ್ಲ. ಕಾಲಕ್ರಮೇಣ ಸರ್ಕಾರಿ ನೌಕರಿ ಪಡೆದು ತನ್ನ ಕಾಲಮೇಲೆ ನಿಲ್ಲುವಂಥಾಗಿ ಬೆಂಗಳೂರು ಸೇರಿದರು. ಗಾಂಧಿನಗರದ ಪುಣ್ಯಾತ್ಮರೊಬ್ಬರಿಂದ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯನವರ ಪರಿಚಯವಾಗಿ ಅವರಿತ್ತ ಪ್ರೋತ್ಸಾಹದಿಂದ ’ಹೇಮಾವತಿ’ ಚಿತ್ರದಲ್ಲಿ ಪಾತ್ರವಹಿಸುವ ಮೂಲಕ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟು ಜೀವನದ ಮಹದಾಸೆ ಈಡೇರಿಸಿಕೊಂಡರು. ಕ್ರಮೇಣ ಚಂದನವನದ ದಿಗ್ಗಜರ ಆಶೀರ್ವಾದದಿಂದ ಪೂರ್ಣ ಪ್ರಮಾಣದ ಹೀರೋ/೨ನೇಹೀರೊಆಗಿ ಪ್ರತಿಭೆಯನ್ನು ಪ್ರಕಟಪಡಿಸಿದ ಸಮರ್ಥನಟ! ಆಕಸ್ಮಿಕವಾಗಿ ತಡವಾಗಿ ಬೆಳ್ಳಿತೆರೆಗೆ ಬಂದರೂ ಎರಡು ದಶಕ ಪರ್ಯಂತ ಭರ್ಜರಿ ಯಶಸ್ಸು ಕಂಡರು. ಇದಕ್ಕೆ ಕಾರಣ; ಅವರಲ್ಲಿದ್ದ ಶಿಸ್ತು ಪ್ರತಿಭೆ ಹಾಗೂ ಪರಿಶ್ರಮ. ಮೂರ್ತಿಯವರ ಬಗ್ಗೆ ಡಾ.ರಾಜ್ ಮೊದಲ್ಗೊಂಡು ಅನೇಕ ಹಿರಿಯ-ಕಿರಿಯ ಕಲಾವಿದರು-ತಂತ್ರಜ್ಞರು ಹೊಗಳಿದ್ದುಂಟು! ಕವಿರತ್ನಕಾಳಿದಾಸ, ಹೊಸಬೆಳಕು, ಮನೆಮನೆ ರಾಮಾಯಣ, ಗುರುಶಿಷ್ಯರು, ಮುಂತಾದ ಚಿತ್ರಗಳ ಅಭಿನಯ ಅಮೋಘ, ಅದ್ಭುತ! ಮಾತೃದೇವೋಭ ಮತ್ತು ತಾಯಿಗೊಬ್ಬ ತರ್ಲೆಮಗ, ಇವರು ತಯಾರಿಸಿದ ಚಿತ್ರಗಳಲ್ಲಿ ಪ್ರಮುಖವಾದವು. ಇವರ ನಿರ್ದೇಶನದ ’ದೇವರಮಕ್ಕಳು’ ಫಿಲಂ ರಾಜ್ಯಪ್ರಶಸ್ತಿ ತಂದುಕೊಟ್ಟಿತು! ಉತ್ತಮ ಅಭಿನಯಕ್ಕೆ ಕೆಲವು ರಾಜ್ಯ ಪ್ರಶಸ್ತಿಯನ್ನು ಗಳಿಸಿರುವ ಹಿರಿಯನಟ ೧೫೦ಕ್ಕೂ ಹೆಚ್ಚು ಕನ್ನಡ ತುಳು ಕೊಂಕಣಿ ಕೊಡವ ಚಿತ್ರಗಳಲ್ಲಿ ನಟಿಸಿದ್ದಾರೆ.
ಯಾವ ಪಾತ್ರವೂ ಕೀಳಲ್ಲ ಎಲ್ಲವನ್ನು ಸರಿಸಮವಾಗಿ ಸ್ವೀಕರಿಸಿ ಶ್ರದ್ಧಾಭಕ್ತಿಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಕಾಯಕದಲ್ಲಿ ಸಂತೃಪ್ತಿ-ನೆಮ್ಮದಿ ಸಿಗುತ್ತದೆ ಎಂದು ಬಲವಾಗಿ ನಂಬಿರುವ ಆಸ್ತಿಕ? ಅಸೂಯಪರರಿಗೆ ಮತ್ತು ಆಸೆಬುರುಕರಿಗೆ ಇವರ ನಡೆ-ನುಡಿಯೆ ಒಂದುಪಾಠ! ಒಳ್ಳೆಯಮನುಷ್ಯ ಹೇಗಿರಬೇಕು ಎಂಬುದಕ್ಕೆ ಯಾವುದೆ ಹಗರಣವಿಲ್ಲದ ಮೂರ್ತಿಯವರು ಉತ್ತಮ ಉದಾಹರಣೆ?! ಕಲಾ ಶಾರದೆಯನ್ನು ಮನಃಪೂರ್ವಕವಾಗಿ ಆರಾಧಿಸಲು ನಿರ್ಧರಿಸಿದ ಮೂರ್ತಿ ಬೆಳ್ಳಿತೆರೆಯನ್ನು ಮಾತ್ರ ಅವಲಂಬಿಸಿಸದೆ/ಸೀಮಿತಗೊಳಿಸದೆ ಕಿರುತೆರೆಗೂ ಮೀಸಲಿಟ್ಟರು. ಹಲವಾರು ಟಿ.ವಿ.ಧಾರಾವಾಹಿ ನಿರ್ಮಿಸಿ-ನಿರ್ದೇಶಿಸಿ-ನಟಿಸಿದ್ದಾರೆ. ಇವರ ಧರ್ಮಪತ್ನಿ ಶ್ರೀಮತಿ ಪುಷ್ಪಾ, ಪುತ್ರಿಯರು ಯೋಗೀತಾನಾಗ್ ಮತ್ತು ಸಂತೂರಾನಾಗ್ ಪುತ್ರರು ನಿತಿಲ್‌ಕೃಷ್ಣ, ನವೀನ್‌ಕೃಷ್ಣ ಇಬ್ಬರೂ ನಟ-ನಿರ್ಮಾಪಕ-ನಿರ್ದೇಶಕ ರಾಗಿ ಬೆಳ್ಳಿತೆರೆ-ಕಿರುತೆರೆ ಎರಡೂ ಕ್ಷೇತ್ರದಲ್ಲಿ ಚಿರಪರಿಚಿತರು!
