ಮೂಲತಃ ಉತ್ತರಕನ್ನಡ ಜಿಲ್ಲೆ ಭಟ್ಕಳದ ನಾಗರಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ ವಾಸವಿದ್ದ ಕೊಂಕಣಿ ಕುಟುಂಬವು ಕಾರಣಾಂತರದಿಂದ ಭಾರತ ದೇಶದ ಸ್ವಾತಂತ್ರ್ಯಕ್ಕೂ ಮುನ್ನವೆ ಬಾಂಬೆ ನಗರಕ್ಕೆ ಶಿಫ಼್ಟ್ ಆಯಿತು. ಹಾಗಾಗಿ ದಿನಾಂಕ ೪.೯.೧೯೪೮ರಂದು ಮುಂಬೈ ನಗರದ ಚೌಪಾತಿಯಲ್ಲಿ ಅನಂತ ನಾಗರಕಟ್ಟೆ ಜನಿಸಿದರು. ಡಾಕ್ಟರ್ ಆಗಬೇಕಾಗಿದ್ದವರು ಆಕ್ಟರ್ ಆದರು. ವೈದ್ಯನಾಗುವ ಮನಸನ್ನು ಕಿತ್ತು ಬಿಸಾಕಿದ ತರುಣ ಅಭಿನಯ ಕಲೆಯನ್ನು ರೂಢಿಸಿಕೊಳ್ಳಲು ನಟನಾಗುವ ಕನಸನ್ನು ಹೊತ್ತು ಬಾಂಬೆ, ಹೈದ್ರಾಬಾದ್, ಮದ್ರಾಸು, ಬೆಂಗಳೂರು ನಗರಗಳಲ್ಲಿದ್ದ ನಿರ್ಮಾಪಕ-ನಿರ್ದೇಶಕರ ಮನೆ ಬಾಗಿಲಿಗೆ ಎಡತಾಕಿ ಗೋಗರೆದ ದಿನಗಳು ನೂರಾರು. ಅದೇಕೋ ಏನೋ ಈ ನವಯುವಕನಿಗೆ ಯಾರೊಬ್ಬರೂ ಮಣೆ ಹಾಕಲಿಲ್ಲ. ಕೆಲವರಂತೂ ಈತನನ್ನು ಹಂಗಿಸುತ್ತ ನಿನ್ನ ಕೋರೆಹಲ್ಲು-ಕಣ್ಣು-ಮುಖ ಡ್ರ್ಯಾಕುಲಾ ಥರವಿದೆ ಎಂದೆಲ್ಲ ಗದರಿಸಿ ಹೊರತಳ್ಳಿದರು! ಎಲ್ಲರಿಂದ ಗೆಟ್‌ಔಟ್ ಎನಿಸಿಕೊಂಡು ರಿಜೆಕ್ಟ್‌ಆಗಿದ್ದ ಸಣಕಲ ಹುಡುಗನನ್ನು ಚಿತ್ರರಂಗದೊಳಕ್ಕೆ ಬರಮಾಡಿಕೊಂಡವರು; ಮೈ.ವಿ.ವಿ. ಮಹಾರಾಜ ಕಾಲೇಜು ಹಿಂದಿ ಪ್ರೊಫ಼ೆಸರ್ ಪಿ.ವಿ.ನಂಜರಾಜೆಅರಸ್.ಚಿಕ್ಕಂದಿನಿಂದ ಪಿವಿಎನ್‌ಗೆ ಸಿನಿಮ-ಡ್ರಾಮ ಹುಚ್ಚು ಹೆಚ್ಚು! ಬಹುಕಾಲದಿಂದ ಫ಼ಿಲಂ ತಯಾರಿಸ ಬೇಕೆಂದಿದ್ದ ಹಂಬಲಕ್ಕೆ ಇಂಬುಕೊಡಲು ಸಿಕ್ಕಿದ್ದು ಅನಂತನಾಗ್?! ಅರಸ್ ಸ್ನೇಹಿತರು ಸಹೋದ್ಯೋಗಿಗಳು ಇವರನ್ನುಅಮೆಚೂರ್ ನಾಟಕ-ಸಿನಿಮ ಕರ್ತೃ ನೀಳಗಡ್ಡದ ಅರಸು ಎಂದೂ ಬ್ರಾಂಡ್ ಮಾಡಿದ್ದರು!

ಅನಂತನಾಗ್ ನಟಿಸಿದ ಮೊಟ್ಟಮೊದಲ ಸಿನಿಮ ೧೯೭೩ರಲ್ಲಿ ಪಿ.ವಿ.ನಂಜರಾಜೆಅರಸ್ ನಿರ್ಮಾಣ-ನಿರ್ದೇಶನದ ’ಸಂಕಲ್ಪ’. ಅತ್ಯುತ್ತಮ ಚಲನಚಿತ್ರ ರಾಜ್ಯ ಪ್ರಶಸ್ತಿ ದೊರಕಿತು! ಬೇರೆಲ್ಲರೀತಿಯ ಯಶಸ್ಸು ಕಾಣದ ಸಂಕಲ್ಪ ಪ್ರಯೋಗಾತ್ಮಕ ಚಿತ್ರವೆಂದು ಬ್ರಾಂಡ್‌ಆಗಿ ಅಂತರ್/ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯಿತು. ಆನಂತರವೂ ಇವರು ನಟಿಸಿದ ಹಲವಾರು ಚಿತ್ರಗಳಿಗೆ ರಾಜ್ಯ/ರಾಷ್ಟ್ರ/ಫ಼ಿಲಂಫ಼ೇರ್ ಪ್ರಶಸ್ತಿ ಸುರಿಮಳೆ ಆಯ್ತು. ವಿದ್ಯೆಗೆ ತಿಲಾಂಜಲಿಇತ್ತು ಹಿಂದಿ-ಮರಾಠಿ ನಾಟಕರಂಗ ಸೇರಿದ ಅನಂತನಾಗ್ ೧೯೭೩ರಲ್ಲಿ ಖ್ಯಾತ ನಿರ್ಮಾಪಕ-ನಿರ್ದೇಶಕ ಶ್ಯಾಂಬೆನಗಲ್‌ರ ’ಅಂಕುರ್’ ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಸಿನಿಮಾದಲ್ಲಿ ನಟಿಸಿದ ಪ್ರಪ್ರಥಮ ಕನ್ನಡ ಹೀರೊ ಹೆಗ್ಗಳಿಕೆಗೆ ಪಾತ್ರರಾದರು. ಇವರಿಗೆ ಶೇ.೯೯% ಸಿನಿಮಾಗಳಲ್ಲಿ ಡ್ಯಾನ್ಸ್ ಫ಼ೈಟ್ ಡುಯಟ್ ಇರುತ್ತಿರಲಿಲ್ಲ! ಹಾಗಾಗಿ ಚಂದನವನದ ಸಾಫ಼್ಟ್‌ಸ್ಟಾರ್ ಎಂದು ಬ್ರ್ಯಾಂಡ್ ಮಾಡಲಾಗಿತ್ತು.ಅದೃಷ್ಟವಂತನಾದ್ದರಿಂದ ಮಿನುಗು ತಾರೆ ಕಲ್ಪನಾರ ಬಯಲುದಾರಿ ಮೂಲಕ ಸಿನಿಬದುಕು ಕಟ್ಟಿಕೊಂಡು ಅಲ್ಲಿಂದ ಹಿಂದಿರುಗಿ ನೋಡಲೆಇಲ್ಲ. ಲಕ್ಷ್ಮಿ ನಟಿಸಿದ್ದ ಚಂದನದಗೊಂಬೆ ಚಿತ್ರದಿಂದ ಟರ್ನಿಂಗ್‌ಪಾಯಿಂಟ್. ಅನಂತ್-ಲಕ್ಷ್ಮಿ ಬೊಂಬಾಟ್‌ಜೋಡಿ ಎನಿಸಿ ಒಟ್ಟು ೧೯ಚಿತ್ರಗಳಲ್ಲಿ ನಟಿಸುವ ಮೂಲಕ ಚಂದನವನದಲ್ಲಿ ಇವರು ತಳ ಊರಿದರು! ಕಾಲಕ್ರಮೇಣ ಹಿಂದಿ ಮರಾಠಿ ಕೊಂಕಣಿ ತುಳು ತಮಿಳು ತೆಲುಗು ಮಲೆಯಾಳಂ ಬಂಗಾಳಿ ಭಾಷೆ ಚಿತ್ರಗಳಲ್ಲು ನಟಿಸಿ ಕನ್ನಡದ ಪ್ರಥಮ ನವಭಾಷಾ ನಟ ಎನಿಸಿದರು!


೧೯೮೦ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣಹೆಗ್ಡೆ ಆಶೀರ್ವಾದದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟು ೧೯೯೪ರಲ್ಲಿ ಬೆಂಗಳೂರು ಮಲ್ಲೇಶ್ವರದ ಎಂಎಲ್‌ಎ ಆಗಿ, ಜೆ.ಹೆಚ್.ಪಟೇಲ್ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ಸಚಿವರಾದರು! ಶಂಕರ್‌ನಾಗ್ ಸಹಕಾರದ ಮಾಲ್ಗುಡಿಡೇಸ್ ಒಂದಾನೊಂದು ಕಾಲದಲ್ಲಿ ಚಿತ್ರಗಳಲ್ಲಿ ಮಿಂಚಿದರು. ನಾರದವಿಜಯ ಹಂಸಗೀತೆ ಶಾಂತಿಕ್ರಾಂತಿ ಗಣೇಶನಮದುವೆ ಗೋಲ್‌ಮಾಲ್ ಸೀರಿಯಲ್ಸ್‌ಗಳಲ್ಲಿ ತಮ್ಮದೆ ಛಾಪು ಮೂಡಿಸಿ, ವೃದ್ಧ ಹಾಸ್ಯ ಖಳನಟ ಪಾತ್ರದಲ್ಲೂ ಪ್ರಬುದ್ಧತೆ ಮೆರೆದು ನಟಿಗಾಯತ್ರಿಯನ್ನು ಮದುವೆಯಾಗಿ ತಾರಾ-ದಂಪತಿ ಪಟ್ಟಿಗೆ ಸೇರಿದರು! ಇತ್ತೀಚಿನ ಗೋಧಿಬಣ್ಣಸಾಧಾರಣಮೈಕಟ್ಟು ರಾಜಕುಮಾರ ಕೆಜಿಎಫ಼್ ಚಿತ್ರಗಳಲ್ಲಿ ಮನೋಜ್ಞ ಅಭಿನಯದಿಂದ ಕನ್ನಡಿಗರ ತನುಮನ ಗೆದ್ದರಲ್ಲದೆ ಪ್ರಶಸ್ತಿಯನ್ನೂ ಗೆದ್ದರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೆ ಡ್ಯಾನ್ಸ್-ಫ಼ೈಟ್-ಡುಯಟ್ ಬಾರದೆ ನೂರಾರು ಚಿತ್ರಗಳಲ್ಲಿ ನಟಿಸಿ ಕೀರ್ತಿ-ಪ್ರಶಸ್ತಿ ಗಳಿಸಿಕೊಂಡ ಏಕೈಕ ಹೀರೊ ಕೆಲವು ಟಿ.ವಿ.ಧಾರಾವಾಹಿಗಳಲ್ಲು ಅಭಿನಯಿಸಿ ವಿಜೃಂಭಿಸಿದ್ದರು. ಇವರ ಪುತ್ರಿ ಅದಿತಿನಾಗ್ ಕೂಡ ಬಣ್ಣದಲೋಕಕ್ಕೆ ಎಂಟ್ರಿ ನೀಡಿದ್ದಾರೆ?!