ಸುರೇಶ್ ಹೆಬ್ಳೀಕರ್
ದಿ.೨೨.೨.೧೯೪೮ರಂದು ಧಾರವಾಡ ನಗರದ ಮಧ್ಯಮವರ್ಗದ ಆದರೆ ವಿದ್ಯಾವಂತರೆ ಹೆಚ್ಚಿದ್ದಂಥ ಕುಟುಂಬದಲ್ಲಿ ಜನನ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಇಂಟರ್‌ವ್ಯು ಮೂಲಕ ದೊರಕಿದ ಭಾರತ/ಕೇಂದ್ರ ಸರ್ಕಾರದ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಪ್ರಕೃತಿಯು ಕೈಬೀಸಿ ಕರೆಯಲಾಗಿ ಹಸಿರೇ-ಉಸಿರು ಮಂತ್ರದಿಂದ ಪರಿಸರ ಪ್ರೇಮಿಯಾದರು. ಬಾಲ್ಯದಿಂದಲು ರೈತ ಯೋಧ ಪ್ರಕೃತಿ ಪರಿಸರ ಮುಂತಾದವುಗಳ ಬಗ್ಗೆ ಅಪಾರ ಆಸಕ್ತಿ, ಹೆಚ್ಚಿನ ಕುತೂಹಲ ಬೆಳೆಸಿಕೊಂಡ ಅಸಾಧಾರಣ ವಿದ್ಯಾರ್ಥಿ. ಕಾಲೇಜು ಶಿಕ್ಷಣ ಮುಗಿದಮೇಲೆ ದೇಶಭಕ್ತಿ ಜನಶಕ್ತಿ ಪ್ರಜಾಕ್ಷೇಮ ಮಕ್ಕಳಪ್ರೇಮ ಮಹಿಳಾ ಸಬಲೀಕರಣ ಮುಂತಾದ ಸಾಮಜಿಕ-ಆರ್ಥಿಕ ಅಭಿವೃದ್ಧಿ ಬಗ್ಗೆ ಉತ್ತi ಸಂಶೋಧನೆ ಶೋಧನೆ ಹಾಗೂ ಕಳಕಳಿಯಪಥ ಆರಿಸಿಕೊಂಡ ಯುವಕ. ಹೊಸತನ್ನು ಹೊಸತನವನ್ನು ಗಳಿಸುವ ಹಾದಿಯಲ್ಲಿ ಮುನ್ನುಗ್ಗಿ ತಾನು ಕಲಿತದ್ದನ್ನು ಇತರರಿಗೆ ಕಲಿಸುವುದರ ಜತೆಗೆ ಹೆಚ್ಚಿನ ವಿಷಯ ಮಾರ್ಗದರ್ಶನ ಮಾಡುವಲ್ಲಿ ಯಶಸ್ಸು ಕಂಡ ಫ಼ಿಲಾಂತ್ರೊಫ಼ಿಸ್ಟ್. ೧೯೮೮ರಲ್ಲಿ ಎಕೊವಾಚ್ ಎನ್‌ಜಿಓ ಸಂಸ್ಥೆಯನ್ನು ಸ್ಥಾಪಿಸಿದ ನೈಜ ಪರಿಸರವಾದಿ. ಪ್ರಕೃತಿ ಸೇವೆಯ ಜತೆಜತೆಗೆ ಅಭಿನಯ, ನಿರ್ದೇಶನ, ಛಾಯಾಗ್ರಹಣ, ಕುಂಚಕಲೆ, ಸಾಹಿತ್ಯರಚನೆ ಮುಂತಾದವುಗಳನ್ನು ಪ್ರವೃತ್ತಿಯನ್ನಾಗಿಸಿಕೊಂಡ ಧೀರಕನ್ನಡಿಗ ಓರ್ವ ನುರಿತ ಭೂಗೋಳ ವಿಜ್ಞಾನಿ ಚಿಂತಕ ವಾಗ್ಮಿ ಸರಳ ಸಜ್ಜನ ಸ್ನೇಹಮಯಿ ಅರಣ್ಯ ಪ್ರಾಣಿ-ಪಕ್ಷಿ ಸಂರಕ್ಷಣಾ ತಜ್ಞ! ನಾಡು-ಕಾಡು ಎರಡನ್ನೂ ಸಮನಾಗಿ ಕಂಡು ಹೇಗೆ ಅವುಗಳನ್ನು ಸಮತೋಲನವಾಗಿ ಕಾಪಾಡಿಕೊಳ್ಳಬೇಕೆಂದು ನೂರಾರು ಗೋಷ್ಠಿ, ಸಭೆ, ಸಮ್ಮೇಳನಗಳನ್ನು ಆಯೋಜಿಸಿದ ಪ್ರಾಜ್ಞ! ಮಾನವ ಸಂತತಿಯ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಪಟ್ಟು ಮಾರ್ಗದರ್ಶನ ನೀಡುತ್ತಿರುವ ನೈಜ ಕಾಳಜಿವುಳ್ಳ ಸಂಪನ್ಮೂಲ ವ್ಯಕ್ತಿ? ಎಲ್ಲ[ವ]ರನ್ನು ಸದುಪಯೋಗ ಪಡಿಸಿಕೊಂಡು ಕಸದಿಂದ ರಸತೆಗೆವ ಐಡಿಯವನ್ನು ಹರಡಿದ ಅಪರೂಪದ ವ್ಯ[ಶ]ಕ್ತಿ.

ಚಂದನವನಕ್ಕೆ ಇವರದು ಗಣನೀಯ ಶ್ಲಾಘನೀಯ ಸ್ತುತ್ಯಾರ್ಹ ಕೊಡುಗೆ. ಪ್ರಥiಉಷಾಕಿರಣ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ರಾಜ್ಯ ಮತ್ತು ಪಿಲಂಫ಼ೇರ್ ಪ್ರಶಸ್ತಿ ಪಡೆದು, ಕಾಡಿನಬೆಂಕಿ ಚಿತ್ರಕ್ಕೆ ಆಲ್ ಇಂಡಿಯ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಗಳಿಸಿದರು. Shepherds on the moveಚಿತ್ರದ ನಿರ್ದೇಶನಕ್ಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ OSIRIS ಚಿತಿಚಿಡಿಜ ಪಡೆದ ಪ್ರಪ್ರಥಮ ಕನ್ನಡಿಗ! ಇವರಬಗ್ಗೆ ಅಮೆರಿಕದ ನ್ಯಾಶನಲ್ ಲೈಬ್ರರಿಯಲ್ಲಿ ಉಲೇಖಗಳು ದಾಖಲಾಗಿವೆ! ವಿಶ್ವಸಂಸ್ಥೆ ಮಾನ್ಯತೆಯುಳ್ಳ OCLC World Cat Identities ವಿಭಾಗದಲ್ಲಿ ಇವರ ಸಾಧನೆಯ ದಾಖಲೆಗಳಿವೆ. ಇಂಥ ಗೌರವ-ಮನ್ನಣೆ ಪಡೆದ ಚಂದನವನದ ಏಕೈಕ ಚಿತ್ರ್ಯೋದ್ಯಮಿ ಎಂಬುದು ಕನ್ನಡಿಗರಿಗೆ ಹೆಮ್ಮ! ಯಾವುದೆ ಪಾತ್ರವಿರಲಿ ಉತ್ತಮವಾಗಿ ಅಭಿನಯಿಸುವ ಚತುರಮತಿ. ಹಿಂದಿ-ಮರಾಠಿ-ತುಳು-ಕೊಂಕಣಿ ಚಿತ್ರದಲ್ಲೂ ನಟಿಸಿ ರಾಜ್ಯ ರಾಷ್ಟ್ರ ಪ್ರಶಸ್ತಿ ಗಳಿಸಿದ ಪ್ರತಿಭಾವಂತ ನಟ. ಸ್ವಯಂ ತಾವೆ ನಟಿಸಿ-ನಿರ್ಮಿಸಿ-ನಿರ್ದೇಶಿಸಿ-ಛಾಯಾಗ್ರಹಣ ಮಾಡಿದ ೩ ಸಾಕ್ಷ್ಯ ಚಿತ್ರಗಳಿಗೆ ಅಂತರ್‌ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಬುದ್ಧಿಜೀವಿ. ಅನೇಕ ವಿಶಿಷ್ಠತೆಯುಳ್ಳ ಕನ್ನಡ ಚಿತ್ರರಂಗದ ಮುಕುಟಮಣಿ! ಇಷ್ಟಾದರೂ ಸುರೇಶ್‌ಹೆಬ್ಳೀಕರ್ ವೈಯಕ್ತಿಕವಾಗಿ ಹೆಚ್ಚು ಇಷ್ಟಪಡುವ ವಿಭಾಗ : ಮನೋವಿಕಾರ, ಮಾನಸಿಕವಿಚಾರ, ನರವಿಜ್ಞಾನ ಹಾಗೂ ನಿಗೂಢತೆ!

ನಟಿಸಿದ ಫ಼ಿಲಂಸ್
